ನಿಯಮಬಾಹಿರ ಬಾಡಿಗೆ ವಾಹನಗಳ ವಿರುದ್ಧ ಕಠಿಣ ಕ್ರಮ: ಆರ್.ಟಿ.ಒ.
1 min readಮೈಸೂರು:
“ಮೈಸೂರು ನಗರದಲ್ಲಿ ಕೆಲವೊಂದು ಖಾಸಗಿ ದ್ವಿಚಕ್ರ ವಾಹನಗಳು ಅನಧಿಕೃತ ಅಗ್ರಿಗೇಟರ್ ಅಪ್ಲಿಕೇಷನ್ ಬಳಸಿಕೊಂಡು ಕಾನೂನು ಬಾಹಿರವಾಗಿ ಪ್ರಯಾಣಿಕರನ್ನು ಬಾಡಿಗೆಗಾಗಿ ಸಾಗಿಸುತ್ತಿರುವುದು ಕಂಡು ಬಂದಿದ್ದು, ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ” ಎಂದು ಪಶ್ವಿಮ ವಿಭಾಗ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಯಾದ ಭೀಮನಗೌಡ ಪಾಟೀಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
“ಸಾರ್ವಜನಿಕರು ಕಾನೂನು ಬಾಹಿರವಾಗಿ ಕಾರ್ಯಾಚರಣೆ ಮಾಡುತ್ತಿರುವ ಇಂತಹ ವಾಹನಗಳ ಬಳಕೆಯನ್ನು ಮಾಡಬಾರದು. ದ್ವಿಚಕ್ರ ವಾಹನಗಳ ಮಾಲೀಕರು ಸಹ ತಮ್ಮ ವಾಹನಗಳಲ್ಲಿ ಇಂತಹ ಅಪ್ಲಿಕೇಷನ್ ಅಳವಡಿಸಿಕೊಂಡು ಬಾಡಿಗೆಗೆ ಓಡಿಸುವುದನ್ನು ನಿಲ್ಲಿಸಬೇಕು” ಎಂದು ಅವರು ತಿಳಿಸಿದ್ದಾರೆ.
“ಖಾಸಗಿ ಮಾಲಿಕತ್ವದ ಬಿಳಿ ಬಣ್ಣದ ನಂಬರ್ ಪ್ಲೇಟ್ ಇರುವ ಲಘು ಮೋಟಾರು ವಾಹನಗಳನ್ನು(ಎಲ್.ಎಂ.ವಿ) ಸಾರ್ವಜನಿಕರಿಗೆ ಬಾಡಿಗೆಗೆ ನೀಡುತ್ತಿರುವುದು ಕಂಡುಬಂದಿದ್ದು, ಇಂತಹ ವಾಹನಗಳ ವಿರುದ್ಧವೂ ಸಹ ಇಲಾಖೆಯು ಕ್ರಮ ಕೈಗೊಳ್ಳುತ್ತಿದೆ. ಸಾರ್ವಜನಿಕರು ತಮ್ಮ ಖಾಸಗಿ ವಾಹನಗಳನ್ನು ಯಾವುದೇ ಬಾಡಿಗೆಗಾಗಿ ನೀಡಬಾರದು. ತಪ್ಪಿದ್ದಲ್ಲಿ ಇಂತಹ ವಾಹನಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.