SSLC ಫಲಿತಾಂಶ ಪ್ರಕಟ: ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ, ಪೋಷಕರಿಗೆ ಶಾಸಕ ರಾಮದಾಸ್ ಅಭಿನಂದನೆ

1 min read

ಮೈಸೂರು: ಇಂದು SSLC ಫಲಿತಾಂಶ ಪ್ರಕಟಗೊಂಡಿದೆ. ಈ ಮಧ್ಯೆ ನೂರಕ್ಕೆ ನೂರರಷ್ಟು ಅಂಕಗಳನ್ನ ಪಡೆದು ಹಲವು ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ.

ಮೈಸೂರು ದಕ್ಷಿಣ ವಲಯದಲ್ಲಿಯೂ ಸಹ ಈ ಬಾಫಿ ಅತ್ಯುತ್ತಮ ಸಾಧನೆಯಾಗಿರುವುದು ಸಂತಸದ ಸಂಗತಿ, ಮೈಸೂರು ಜಿಲ್ಲೆಯಲ್ಲಿ 625 ಕ್ಕೆ 625 ಅಂಕಗಳನ್ನು ಪಡೆದ ಸರ್ಕಾರಿ ಶಾಲೆಯ ಏಕೈಕ ವಿದ್ಯಾರ್ಥಿ ಕೆ.ಆರ್.ಕ್ಷೇತ್ರದ ಕುರುಬಾರಹಳ್ಳಿಯ ಆದರ್ಶ ವಿದ್ಯಾಲಯದ ಕುಮಾರಿ ಏಕತಾ ಎಂ.ಜಿ. ಎಂದು ಹೇಳಲು ಹೆಮ್ಮೆಯ ವಿಷಯ. ಮೈಸೂರು ಜಿಲ್ಲೆಯಲ್ಲಿ 625 ಕ್ಕೆ 625 ಅಂಕವನ್ನು 6 ಜನ ವಿದ್ಯಾರ್ಥಿಗಳು ಪಡೆದಿದ್ದು ಅದರಲ್ಲಿ 4 ಜನ ವಿದ್ಯಾರ್ಥಿಗಳು ದಕ್ಷಿಣ ವಲಯಕ್ಕೆ ಸೇರಿದವರಾಗಿರುತ್ತಾರೆ. ಒಟ್ಟಾರೆಯಾಗಿ ದಕ್ಷಿಣ ವಲಯದ ಫಲಿತಾಂಶ 88.67 ಆಗಿರುತ್ತದೆ.

2020 ಕ್ಕಿಂತ ಈ ಬಾರಿ ಹೆಚ್ಚಿನ ಫಲಿತಾಂಶ ಬಂದಿರುವುದು ಸಂತಸದ ಸಂಗತಿ, ಈ ಫಲಿತಾಂಶಕ್ಕೆ ನಾವು ಕ್ಷೇತ್ರದಲ್ಲಿ ಕಳೆದ ಒಂದು ವರ್ಷದಿಂದ ನಿರಂತರ ಪ್ರಯತ್ನ ಮಾಡಿದ್ದೆವು, ಪೋಷಕರು ಮತ್ತು ಮಕ್ಕಳಿಗಾಗಿಯೇ ವಿನೂತನವಾದ ಕಾರ್ಯಾಗಾರಗಳನ್ನು ನಡೆಸಿಕೊಂಡು ಬಂದಿದ್ದೇವೆ. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಪಾಸ್ ಆಗಲು ಯಾವ ರೀತಿಯಾಗಿ ತಯಾರಿ ಮಾಡಬೇಕು ಅದನ್ನು ಗಮನವಹಿಸಿ ನಮ್ಮ ಕ್ಷೇತ್ರದ ಶಿಕ್ಷಣ ಇಲಾಖೆ ಮಾಡಿದೆ. ಪರೀಕ್ಷೆ ಸಮಯದಲ್ಲಿ ನಮ್ಮ ಕಛೇರಿಯಿಂದಲೇ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಬೆಳಗ್ಗೆ 5 ಗಂಟೆಗೆ ಕರೆ ಮಾಡಿ ಅವರ ಯೋಗಕ್ಷೇಮ ವಿಚಾರಿಸಿ ಅವರಿಗೆ ಓದಿಕೊಳ್ಳಲು ಅಲರಾಂ ಕ್ಲಾಕ್ ರೀತಿಯಲ್ಲಿ ಎಚ್ಚರಿಸುತ್ತಿದ್ದೆವು.

ಇಷ್ಟು ಫಲಿತಾಂಶ ಬಂದಿದೆ ಎಂದರೆ ಇದರ ಹಿಂದಿರುವ ಶಿಕ್ಷಕರ, ಶಾಲಾ ಆಡಳಿತ ಮಂಡಳಿಯ ಶ್ರಮ ಹೇಳತೀರದು, ಅವರೆಲ್ಲರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳು.

About Author

Leave a Reply

Your email address will not be published. Required fields are marked *