20 ವರ್ಷಗಳ ನಂತರದಲ್ಲಿ SSLC ಪಾಸ್ ಆದ ಸಂದೇಶ್’ರನ್ನು ಸನ್ಮಾನಿಸಿದ ಶಾಸಕ ರಾಮದಾಸ್
1 min readಮೈಸೂರು: 20 ವರ್ಷಗಳ ನಂತರದಲ್ಲಿ SSLC ಪರೀಕ್ಷೆ ಬರೆದು ಪಾಸ್ ಮಾಡಿದ ಸಂದೇಶ್ ಎಸ್ ಅವರಿಗೆ ಶಾಸಕರಾದ ಎಸ್.ಎ.ರಾಮದಾಸ್ ಅವರಿಂದ ಸನ್ಮಾನ ಮಾಡಿದರು.
2007 ರಿಂದ ಕೆ.ಆರ್.ಕ್ಷೇತ್ರದ ವಾರ್ಡ್ ನಂ.53 ರಲ್ಲಿ ಸಫಾಯಿ ಕರ್ಮಚಾರಿಯಾಗಿ ಕೆಲಸ ನಿರ್ವಹಿಸುತ್ತಿರುವ ಸಂದೇಶ್ ಎನ್ನುವವರು 2002 ರಲ್ಲಿ SSLC ಪರೀಕ್ಷೆ ಬರೆಯಬೇಕಿತ್ತು ಆದರೆ ಆಗ ಪರೀಕ್ಷೆ ಬರೆಯಲಾಗದೆ 2022 ರಲ್ಲಿ ಪರೀಕ್ಷೆ ಬರೆದು ಪಾಸ್ ಆಗಿದ್ದಾರೆ.
ವಾರ್ಡ್. ನಂ. 53 ರ ನಗರಪಾಲಿಕಾ ಸದಸ್ಯರಾದ ಶ್ರೀಮತಿ ಡಾ.ಜಿ.ರೂಪಾ ಯೋಗೇಶ್ ಅವರು ಪರೀಕ್ಷೆ ಬರೆಯಲು ಪ್ರೋತ್ಸಾಹ ನೀಡಿ ಬೇಕಾದ ಪರೀಕ್ಷಾ ಸಿದ್ಧತೆಗೆ ಸಹಾಯ ಮಾಡಿದ್ದು ಶ್ಲಾಘನೀಯ ಸಂಗತಿಯಾಗಿದೆ.
ಸುಮಾರು 20 ವರ್ಷಗಳ ನಂತರದಲ್ಲಿ SSLC ಪರೀಕ್ಷೆ ಬರೆದು ಸಾಧನೆ ಮಾಡಿರುವುದು ಎಷ್ಟೋ ಜನಕ್ಕೆ ಒಂದು ಸ್ಫೂರ್ತಿ ತಂದಂತಾಗಿದೆ.