ಇಂದಿನಿಂದ ನಂಜನಗೂಡು ನಂಜುಂಡೇಶ್ವರ ಸ್ವಾಮಿಯ ದರ್ಶನಕ್ಕೆ ಅವಕಾಶ: ಸಮಯ ನಿಗದಿ
1 min readಮೈಸೂರು: ಇಂದಿನಿಂದ ಅನ್ ಲಾಕ್ ಜಾರಿ ಹಿನ್ನೆಲೆ ಕಳೆದ ಎರಡು ತಿಂಗಳಿಂದ ಬಂದ್ ಆಗಿದ್ದ ನಂಜನಗೂಡಿನ ನಂಜುಂಡೇಶ್ವರ ದೇವಾಲಯ ಭಕ್ತರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.
ಸದ್ಯ ಭಕ್ತರಿಗೆ ದೇವಾಲಯ ಪ್ರವೇಶ ದೇವರ ದರ್ಶನಕ್ಕಷ್ಟೆ ಅವಕಾಶ ನೀಡದಲಾಗಿದೆ. ಯಾವುದೇ ಪೂಜೆಗಳಿಗೆ ಅವಕಾಶಗಳಿಲ್ಲ. ಮೊದಲ ದಿನವಾಗಿರುವುದರಿಂದ ಕಡಿಮೆ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಸಾಮಾನ್ಯವಾಗಿ ಭಾನುವಾರ, ಸೋಮವಾರ, ಹುಣ್ಣಿಮೆ ದಿನ ಹೆಚ್ಚಾಗಿ ಭಕ್ತರು ಆಗಮಿಸುತ್ತಾರೆ.
ಸದ್ಯ ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ1 ಗಂಟೆವರಗೆ. ಸಂಜೆ 4 ರಿಂದ 7 ಗಂಟೆವರೆಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಮುಡಿ ಸೇವೆ, ವಿಷೇಶ ಪೂಜೆಗಳಿಗೆ ಅವಕಾಶವಿಲ್ಲ.