ಕೆ ಆರ್ ಕ್ಷೇತ್ರದಲ್ಲಿ ವಿಶೇಷ ಲಸಿಕಾ ಅಭಿಯಾನಕ್ಕೆ ಚಾಲನೆ!
1 min readಮೈಸೂರು: 18 ವರ್ಷ ಮೇಲ್ಪಟ್ಟ ಕಾಲೇಜು ವಿದ್ಯಾರ್ಥಿಗಳಿಗಾಗಿ ಹಾಗೂ ಬೋಧಕ, ಬೋಧಕೇತರ ವೃಂದದವರಿಗೆ ಬೆಳಗ್ಗೆ 10 ರಿಂದ ಸಂಜೆ 5 ರ ವೆರೆಗೆ ವಿಶೇಷ ಲಸಿಕಾ ಅಭಿಯಾನ ಈ ಕೆಳಗಿನ ಸ್ಥಳಗಳಲ್ಲಿ ನಡೆಯಿತು.
ಶಾರದಾ ವಿಲಾಸ ಕಾಲೇಜು , ಕೃಷ್ಣಮೂರ್ತಿಪುರಂ ಎಸ್.ಡಿ.ಎಂ ಮಹಿಳಾ ಕಾಲೇಜು, ಕೃಷ್ಣಮೂರ್ತಿಪುರಂ ,ಎಂ.ಐ.ಟಿ ಪ್ರಥ ಮದರ್ಜೆ ಕಾಲೇಜು, ಮಾನಂದವಾಡಿ ರಸ್ತೆ, ನಟರಾಜ ಕಾಲೇಜು, ಶಂಕರಮಠ ರಸ್ತೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕುವೆಂಪುನಗರ ,ಸರ್ಕಾರಿ ಪ್ರಥಮ ಗ್ರೇಡ್ ಕಾಲೇಜು, ಸಿದ್ಧಾರ್ಥ ನಗರ , ಜೆ.ಎಸ್.ಎಸ್ ಊಟಿ ರಸ್ತೆ
ಬೆಳಗ್ಗೆ 10 ಗಂಟೆಗೆ ಕೃಷ್ಣಮೂರ್ತಿಪುರಂ ನ ಶಾರದಾ ವಿಲಾಸ ಕಾಲೇಜಿನಲ್ಲಿ ಅಭಿಯಾನಕ್ಕೆ ಗಿಡಕ್ಕೆ ನೀರು ಹಾಕುವ ಮೂಲಕ ಚಾಲನೆ ದೊರೆಯಿತು.
ಮೈಸೂರಿನ ಜಿಲ್ಲಾಧಿಕಾರಿಗಳಾದ ಡಾ.ಬಗಾದಿ ಗೌತಮ್ ಅವರು ಮಾತನಾಡಿ ಇವತ್ತು ವಿಶೇಷ ಲಸಿಕಾ ಅಭಿಯಾನವನ್ನು ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದೆ, ಕರ್ನಾಟಕ ಸರ್ಕಾರದಿಂದ ಕಾಲೇಜುಗಳನ್ನು ಪುನಃ ಪಾರಂಭಿಸಲು ಯೋಚನೆ ಮಾಡುತ್ತಿದೆ ಹಾಗಾಗಿ ಕಾಲೇಜಿನ ಸಿಬ್ಬಂದಿಗೆ, ವಿದ್ಯಾರ್ಥಿಗಳಿಗೆ ಲಸಿಕಾ ಅಭಿಯಾನವನ್ನ ನಡೆಸಬೇಕು ಎಂದು ಸರ್ಕಾರ ನಿರ್ಧರಿಸಿದೆ. ವಿಶೇಷವಾದ ಅಭಿಯಾನವನ್ನ ನಡೆಸುತ್ತಿರುವ ಶಾಸಕರಿಗೆ ಧನ್ಯವಾದಗಳು. ಲಸಿಕೆ ಹಾಕಿಸಿಕೊಂಡ ತಕ್ಷಣ ನಾವು ಕೋವಿಡ್ ಮುಕ್ತ ಎಂದುಕೊಳ್ಳಬೇಡಿ ನಾವು ಸಾಮಾಜಿಕ ಅಂತರ ಪಾಲಿಸಬೇಕು ಹಾಗೂ ಮಾಸ್ಕ್ ಅನ್ನು ಕಡ್ಡಾಯವಾಗಿ ಹಾಕಿಕೊಳ್ಳಬೇಕು. ಮಾಸ್ಕ್ ಅನ್ನು ಧರಿಸುವ ನಾವು ಲಸಿಕೆಯನ್ನು ಹಾಕಿಸಿಕೊಳ್ಳುವ ದೊಡ್ಡ ಜವಾಬ್ದಾರಿ ನಮ್ಮದಾಗಿದೆ.
ಮಾಸ್ಕ್ ನಮ್ಮ ಪ್ರಾಥಮಿಕ ಲಸಿಕೆಯಾಗಿದೆ, ಎಲ್ಲರೂ ಮುಂಜಾಗೃತಾ ಕ್ರಮಗಳನ್ನು ಪಾಲಿಸೋಣ ಎಂದರು.
ಮಾನ್ಯ ಶಾಸಕರಾದ ಎಸ್.ಎ ರಾಮದಾಸ್ ಅವರು ಮಾತನಾಡಿ ಸಂಪೂರ್ಣವಾಗಿ ಎಲ್ಲಾ ಮತಗಟ್ಟೆ ಗಳಲ್ಲಿ ಟೋಟಲ್ ಟೆಸ್ಟಿಂಗ್ ಮತ್ತು ವ್ಯಾಕ್ಸಿನೇಷನ್ ಎನ್ನುವ ವಿಶೇಷ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟಿದ್ದೆವು, ಬಹಳ ಜನ ಯುವಕರು ಕಾರ್ಯಕ್ರಮಕ್ಕೆ ಸ್ವಯಂ ಪ್ರೇರಿತರಾಗಿ ಬಂದು ಭಾಗವಹಿಸಿದ್ದರು. ಇಂದು ನಮ್ಮ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ಲಸಿಕೆ ನೀಡುವ ಕಾರ್ಯಕ್ಕೆ ಚಾಲನೆ ನೀದಿದ್ದೇವೆ. ಕಳೆದ ಒಂದೂವರೆ ವರ್ಷದಿಂದ ನೀವುಗಳು ಆನ್ಲೈನ್ ಶಿಕ್ಷಣಕ್ಕೆ ಒಗ್ಗಿಕೊಂಡಿದ್ದೀರಿ, 2030 ಕ್ಕೆ ಭಾರತ ವಿಶ್ವಗುರುವಾಗಬೇಕು ಎಂಬುವ ಕಲ್ಪನೆಗೆ ವಿದ್ಯಾರ್ಥಿಗಳು ಸಹಕರಿಸಬೇಕು, ಭಾರತ ವಿಶ್ವಗುರು ಮಾಡುವ ನಿಟ್ಟಿನಲ್ಲಿ ನೀವೆಲ್ಲ ಜಾಗೃತರಾಗಬೇಕು ಎಂದರು.
ಇನ್ನೆರಡು ದಿನಗಳಲ್ಲಿ ಕೆ.ಆರ್ ಕ್ಷೇತ್ರದ ಎಲ್ಲಾ ಪದವಿ ಕಾಲೇಜುಗಳಲ್ಲಿ ಲಸಿಕೆ ಅಭಿಯಾನ ನಡೆಯಲಿದೆ.
ಸದರಿ ಕಾರ್ಯಕ್ರಮದಲ್ಲಿ ನಗರಪಾಲಿಕಾ ಸದಸ್ಯರಾದ ಪಲ್ಲವಿ ಬೇಗಂ, ಶಾರದಾ ವಿಲಾಸ ಕಾಲೇಜಿನ ರಾಮಚಂದ್ರ, ಕಾಲೇಜಿನ ಆಡಳಿತ ಮಂಡಳಿ, ತಾಲ್ಲೂಕು ವೈದ್ಯಾಧಿಕಾರಿ ಡಾ. ಮಹದೇವ ಪ್ರಸಾದ್, ನಗರಪಾಲಿಕಾ ಆರೋಗ್ಯ ಅಧಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು, ಪೊಲೀಸ್ ಠಾಣೆಯ ನಿರೀಕ್ಷಕರು ಹಾಜರಿದ್ದರು.