1975 ರ ತುರ್ತು ಪರಿಸ್ಥಿತಿಯಲ್ಲಿ ಹೋರಾಟ ನಡೆಸಿ ಜೈಲು ಪಾಲಾಗಿದ್ದವರ ಮನೆಗೆ ಭೇಟಿ ನೀಡಿ ಸನ್ಮಾನ
1 min readಮೈಸೂರು: 1975 ರ ತುರ್ತು ಪರಿಸ್ಥಿತಿಯಲ್ಲಿ ಹೋರಾಟ ನಡೆಸಿ ಜೈಲು ಪಾಲಾಗಿದ್ದವರ ಮನೆಗೆ ಇಂದು ಬೆಳಗ್ಗೆ ಕೆ.ಆರ್ ಕ್ಷೇತ್ರದ ಭಾಜಪಾ ವತಿಯಿಂದ ಮಾನ್ಯ ಶಾಸಕರಾದ ಎಸ್.ಎ ರಾಮದಾಸ್ ಅವರ ನೇತೃತ್ವದಲ್ಲಿ ಭೇಟಿ ನೀಡಿ ಸನ್ಮಾನ ಮಾಡಲಾಯಿತು.
ಸನ್ಮಾನಿತರಾದ ಪದ್ಮಕ್ಕನವರು ಮಾತನಾಡಿ, ನಾವು 10 ನೆ ತರಗತಿಯಲ್ಲಿದ್ದಾಗಲೇ ಹೋರಾಟ ನಡೆಸಿ ಶಿವಮೊಗ್ಗದಲ್ಲಿ ಜೈಲು ಪಾಲಾಗಿದ್ದೆವು, ಜೀವನ ಪೂರ್ತಿ ನೆನೆಪು ಮಾಡಿಕೊಳ್ಳುವ ನೆನಪು ಅದಾಗಿದೆ ಇಂದು ನಮಗೆ ಸನ್ಮಾನ ಮಾಡಿದ್ದು ನಿಜಕ್ಕೂ ಸಂತೋಷ ತಂದುಕೊಟ್ಟಿದೆ ಎಂದರು
ಇನ್ನೋರ್ವರಾದ ಮಾಜಿ ಶಾಸಕರಾದ ತೋಂಟದಾರ್ಯ ಅವರ ಮನೆಗೆ ಭೇಟಿ ನೀಡಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಅನಿಸಿಕೆ ಹಂಚಿಕೊಂಡ ತೋಂಟದಾರ್ಯ ರವರು ಅಂದು ತುಂಬಾ ಕ್ಲಿಷ್ಟಕರ ಪರಿಸ್ಥಿತಿ ಇತ್ತು, ಸೆರೆವಾಸ ಅನುಭವಿಸಿದ್ದವರ ಪರ ಕೋರ್ಟ್ ನಲ್ಲಿ ವಾಡಿಸಿದ್ದ ರಾಮಾಜೋಯಿಸ್ ರನ್ನೇ ಜೈಲಿಗೆ ಹಾಕಿದ್ದರು, ಯಾರು ಸಹ ಇಂದಿರಾಗಾಂಧಿ ವಿರುದ್ಧ ಧ್ವನಿ ಎತ್ತುವ ಹಾಗಿರಲಿಲ್ಲ. ಅನೇಕ ಸಂಗತಿಗಳನ್ನು ನಾವು ಸೆರೆವಾಸ ಅನುಭವಿಸಿದ್ದ ಸಮಯದಲ್ಲಿ ಹಿರಿಯರೊಂದಿಗೆ ಚರ್ಚೆ ಮಾಡುವ ಅವಕಾಶ ಸಿಕ್ಕಿತ್ತು ಎಂದರು.
ಮಾನ್ಯ ಶಾಸಕರಾದ ಎಸ್.ಎ ರಾಮದಾಸ್ ಅವರು ಮಾತನಾಡಿ ದೇಶದಲ್ಲಿ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ 7 ಹಕ್ಕುಗಳನ್ನೇ ಕಸಿದುಕೊಂಡಿದ್ದರು, ಅಂದಿನ ಜನ ಸಂಘ, ಸಂಘದ ಸ್ವಯಂಸೇವಕರು ಹೋರಾಡಿ ಜೈಲಿಗೆ ತೆರಳಿದ್ದರು ಮೊನ್ನೆ ಜೂನ್ 25 ರಂದು ಹಲವಾರು ಜನಕ್ಕೆ ಸನ್ಮಾನ ಮಾಡಿದ್ದೆವು, ಆದರೂ ಪದ್ಮಕ್ಕನಂತವರು ಉಳಿದುಕೊಂಡಿದ್ದರು ಹಾಗಾಗಿ ಅವರನ್ನು ಇಂದು ಅವರ ಮನೆಗೇ ಬಂದು ಸನ್ಮಾನ ಮಾಡಬೇಕು ಎನಿಸಿ ಬಂದಿದ್ದೇವೆ, ಇವರ ಹೋರಾಟಗಳು ನಮಗೆ ಸ್ಪೂರ್ತಿಯಾಗಿ ನಿಲ್ಲಬೇಕು ಎಂದರು.
ಸದರಿ ಕಾರ್ಯಕ್ರಮದಲ್ಲಿ ನಗರಪಾಲಿಕಾ ಸದಸ್ಯರಾದ ಚಂಪಕ, ಬಿಜೆಪಿ ಕೆ.ಆರ್ ಕ್ಷೇತ್ರದ ಅಧ್ಯಕ್ಷರಾದ ಎಂ.ವಡಿವೇಲು, ಪ್ರಮುಖರಾದ ಮೈ.ಪು ರಾಜೇಶ್. ಸಂಘದ ಪ್ರಮುಖರಾದ ಹಿರಿಯೂರು ವೆಂಕಟೇಶ್ , ವಾಮನ್ ಮುಂತಾದವರು ಉಪಸ್ಥಿತರಿದ್ದರು