ಹಿರಿಯ ಮುಖಂಡ ಹಿನಕಲ್ ಬಸವೇಗೌಡ ನಿಧನ- ಅಂತಿಮ ನಮನ ಸಲ್ಲಿಸಿದ ಸಿದ್ದರಾಮಯ್ಯ!
1 min readಮೈಸೂರು : ಮೈಸೂರಿನಲ್ಲಿ ನಿನ್ನೆ ನಿಧನರಾದ ಹಿರಿಯ ಮುಖಂಡ ಹಿನಕಲ್ ಬಸವೇಗೌಡರ ನಿವಾಸಕ್ಕೆ ಇಂದು ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು. ಇದೇ ವೇಳೆ ಬಸವೇಗೌಡರ ಕುಟುಂಬದವರಿಗೆ ಸಾಂತ್ವನ ಹೇಳಿದ ಅವರು ಬಸವೇಗೌಡರ ಕಾರ್ಯವನ್ನು ಸ್ಮರಿಸಿದರು. ಸಿದ್ದರಾಮಯ್ಯ ಅವರಿಗೆ ಈ ವೇಳೆ ಮೈಸೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ. ವಿಜಯಕುಮಾರ್ ಸೇರಿದಂತೆ ಹಲವರು ಸಾಥ್ ನೀಡಿದರು.
-ಇದಾದ ಬಳಿಕ ನೇರವಾಗಿ ಮೈಸೂರಿನ ತಮ್ಮ ಶಾರದದೇವಿನಗರದ ನಿವಾಸಕ್ಕೆ ತೆರಳಿದ ಸಿದ್ದರಾಮಯ್ಯ, ಮೈಸೂರು ಮೇಯರ್ ಚುನಾವಣೆ ವಿಚಾರವಾಗಿ ಸ್ಥಳೀಯ ಮುಖಂಡರ ಜೊತೆ ಮಾತುಕತೆ ನಡೆಸಿದ್ದಾರೆ. ಬಳಿಕ ಮನೆಯ ಬಳಿ ಬಂದಿದ್ದ ಸಾಕಷ್ಟು ಜನರ ಅಹವಾಲು ಸ್ವೀಕರಿಸಿದರು. ಬಳಿಕ ಮೈಸೂರಿನಿಂದ ಬೆಂಗಳೂರಿಗೆ ತೆರಳಿದ್ದಾರೆ.