ಸಿದ್ದರಾಮಯ್ಯ ವಿರುದ್ದ ಗುಡುಗಿದ ಹಿನ್ನೆಲೆ: ಶಾಸಕ ತನ್ವೀರ್‌ಸೇಠ್‌ಗೆ ಬಿಗ್ ಶಾಕ್ ಕೊಟ್ಟ ಸಿದ್ದು ಅಂಡ್ ಟೀಂ..!
1 min readಮೈಸೂರು: ಮೈಸೂರು ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷರ ನೇಮಕದಲ್ಲಿ ತನ್ವೀರ್‌ಸೇಠ್‌ಗೆ ಹಿನ್ನಡೆ ಆಗಿದೆ. ಜಮೀರ್ ಅಹ್ಮದ್ ಬೆಂಬಲಿಗ ಅಕ್ರಂಗೆ ವಕ್ಫ್ ಬೋರ್ಡ್ ಅಧ್ಯಕ್ಷ ಪಟ್ಟ ದೊರೆತಿದೆ.
ರಾಜ್ಯ ವಕ್ಪ್‌ಬೋರ್ಡ್ ಸದಸ್ಯನ, ಮೈಸೂರು ವಿಭಾಗದ ಉಸ್ತುವಾರಿ ಹೊತ್ತಿರುವ ತನ್ವೀರ್‌ಸೇಠ್ ತಮ್ಮ ಬೆಂಬಲಿಗ ಅಬ್ದುಲ್ ಖಾದರ್ ಹೆಸರು ಶಿಫಾರಸ್ಸು ಮಾಡಿದ್ದರು. ವಕ್ಫ್‌ಬೋರ್ಡ್‌ನಲ್ಲಿ ಹಿಡಿತ ಹೊಂದಿದ್ದರೂ ತನ್ವೀರ್‌ಸೇಠ್‌ಗೆ ಜಮೀರ್ ಟಾಂಗ್ ಕೊಟ್ಟಿದ್ದಾರೆ.
ಮೊನ್ನೆಯಷ್ಟೇ ನಾನು ಸಿಎಂ ಆಕಾಂಕ್ಷಿ, ಆದ್ರೆ ನಾನು ಬೆಂಬಲಿಗರಿಂದ ಮುಂದಿನ ಸಿಎಂ ಅಂತ ಹೇಳಿಸಲ್ಲ ಎಂದು ಸಿದ್ದರಾಮಯ್ಯಗೆ ತನ್ವೀರ್‌ಸೇಠ್ ಟಾಂಗ್ ಕೊಟ್ಟಿದ್ದರು. ಕೆಣಕಿದ ತನ್ವೀರ್‌ಸೇಠ್‌ಗೆ ಅಕ್ರಂ ನೇಮಕದ ಮೂಲಕ ಜಮೀರ್ ಅಹ್ಮದ್ ಶಾಕ್ ಕೊಟ್ಟಿದ್ದಾರೆ.
ತನ್ವೀರ್‌ಸೇಠ್ ಕ್ಷೇತ್ರ ನರಸಿಂಹರಾಜದಲ್ಲಿ ಮುಸ್ಲಿಂ ಮತಗಳು ಹೆಚ್ಚಿವೆ. ವಕ್ಫ್‌ವೋರ್ಡ್‌ನಲ್ಲಿ ಹಿಡಿತ ತಪ್ಪಿಸಿದ್ರೆ ತನ್ವೀರ್‌ಸೇಠ್ ಸೈಡ್‌ಲೈನ್ ಆಗುವ ಲೆಕ್ಕಾಚಾರ. ಈ ಹಿಂದೆ ತಮ್ಮ ಬೆಂಬಲಿಗ ಮಾಜಿ ಮೇಯರ್ ಅಯೂಬ್ ಖಾನ್‌ಗೆ ಟಿಕೆಟ್ ಕೊಡಿಸಲು ಸಿದ್ದರಾಮಯ್ಯ ಮುಂದಾಗಿದ್ದರು.
ಜಮೀರ್ ಅಹ್ಮದ್ ನರಸಿಂಹರಾಜ ಕ್ಷೇತ್ರದಲ್ಲೂ ಹಿಡಿತ ಸಾಧಿಸಿದ್ದಾರೆ. ಈ ಮೂಲಕ ತನ್ವೀರ್‌ಸೇಠ್ ಸೈಡ್‌ಲೈನ್ ಮಾಡಲು ಮುಂದಾಗಿದ್ದಾರೆ ಜಮೀರ್ ಅಹಮದ್.