ಒಂದು ತಿಂಗಳ ಬಳಿಕ ಯಡಿಯೂರಪ್ಪ ಸರ್ಕಾರ ಪತನವಾಗತ್ತೆ: ವಾಟಾಳ್ ನಾಗರಾಜ್ ಭವಿಷ್ಯ
1 min read
ಮೈಸೂರು: ಒಂದು ತಿಂಗಳ ಬಳಿಕ ಬಿಎಸ್ವೈ ಸರ್ಕಾರ ಪತನವಾಗತ್ತೆ ಅಂತ ಮೈಸೂರಿನಲ್ಲಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಭವಿಷ್ಯ ನುಡಿದಿದ್ದಾರೆ.
ಯಡಿಯೂರಪ್ಪ ದೇಶದಲ್ಲೇ ಭ್ರಷ್ಟರಲ್ಲೇ ಭ್ರಷ್ಟ ಸಿಎಂ. ಜೈಲಿಗೆ ಹೋಗಿ ಬಂದ ಮೊದಲ ಸಿಎಂ. ವಿಧಾನಸೌಧದಲ್ಲಿ ಭ್ರಷ್ಟರ ಕೂಟವೇ ಇದೆ. ರಾಜಕೀಯ ಕಾರಣಕ್ಕೆ ಇದೀಗ ಬಸವಣ್ಣನವರ ಪುತ್ಥಳಿ ನಿರ್ಮಿಸಲು ಹೊರಟಿದ್ದಾರೆ. ವಿಧಾನಸೌಧದಲ್ಲಿ ಈಗಾಗಲೇ ಬಸವಣ್ಣನವರ ಪುತ್ಥಳಿ ಇದೆ. ಈ ನಡುವೆ ಮತ್ತೊಂದು ಪುತ್ಥಳಿ ನಿರ್ಮಾಣದ ಅವಶ್ಯಕತೆ ಇಲ್ಲ. ಒಬ್ಬ ಭ್ರಷ್ಟ ಸಿಎಂ ವಿಶ್ವಮಾನವ ಬಸವಣ್ಣನವರ ಪುತ್ಥಳಿ ನಿರ್ಮಾಣ ಮಾಡುವುದು ಅಪಮಾನ ಮಾಡಿದಂತೆ ಅಂತ ಮೈಸೂರಿನಲ್ಲಿ ವಾಟಾಳ್ ನಾಗರಾಜ್ ಹೇಳಿಕೆ ನೀಡಿದ್ದಾರೆ.
