ಸಿದ್ದರಾಮಯ್ಯರನ್ನು ಆಫ್ಘಾನಿಸ್ತಾನಕ್ಕೆ ಕಳುಹಿಸಬೇಕು: ಸಂಸದ ಶ್ರೀನಿವಾಸ್ ಪ್ರಸಾದ್
1 min readಮೈಸೂರು,ಅ.23-ಸಿದ್ದರಾಮಯ್ಯ ಅವರನ್ನು ತಾಲಿಬಾನ್ ವಶದಲ್ಲಿರುವ ಆಫ್ಘಾನಿಸ್ತಾನಕ್ಕೆ ಕಳುಹಿಸಬೇಕು ಎಂದು ಸಂಸದ ಶ್ರೀನಿವಾಸ್ ಪ್ರಸಾದ್ ಕಿಡಿಕಾರಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪ ಚುನಾವಣೆ ಪ್ರಚಾರದಲ್ಲಿ ರಾಜ್ಯ ನಾಯಕರ ಮಾತು ಮಿತಿ ಮೀರಿದೆ. ಆಡಳಿತ ಪಕ್ಷಕ್ಕೂ ಜವಾಬ್ದಾರಿ ಇದೆ. ಪ್ರತಿ ಪಕ್ಷಕ್ಕೂ ಒಂದು ಜವಾಬ್ದಾರಿ ಇದೆ. ಪ್ರತಿಪಕ್ಷದ ನಾಯಕರ ಮಾತು ಮಿತಿ ಮೀರಿದೆ. ವಿರೋಧ ಪಕ್ಷದ ನಾಯಕ ಅವರ ಜವಾಬ್ದಾರಿ ಮರೆಯಬಾರದು ಎಂದರು.
ಪ್ರಧಾನ ಮಂತ್ರಿಗಳಿಗೆ ಒಂದು ಗೌರವ ಇದೆ ಅವರ ಬಗ್ಗೆ ಈ ರೀತಿಯಲ್ಲಿ ಅವಹೇಳನ ಮಾಡಬಾರದು. ಒಂದು ತಿಂಗಳು ತಾಲಿಬಾನ್ ಗಳ ಜೊತೆಗೆ ಕಳಿಸಿ ಅಂತ ಕೇಂದ್ರ ಸರ್ಕಾರಕ್ಕೆ ಮನವಿ ಮಾಡ್ತಿನಿ. ಈ ರೀತಿಯ ಹೇಳಿಕೆಗಳಿಂದ ಬಹಳ ನೋವಾಗಿದೆ. ಬೇರೆ ಸಮಯದಲ್ಲಿ ಈ ವಿಚಾರದ ಬಗ್ಗೆ ಮಾತನಾಡ್ತೀನಿ ಎಂದ ಅವರು, ನಾನು ಚುನಾವಣಾ ಕ್ಷೇತ್ರಗಳಿಗೆ ಹೋಗಿಲ್ಲ. ಚುನಾವಣೆಯಲ್ಲಿ ನಾವು ಎರಡು ಕ್ಷೇತ್ರವನ್ನು ಗೆಲ್ಲುತ್ತೇವೆ ಹೇಳಿದರು.