ಅಪ್ಪ ಮಕ್ಕಳ ಪಕ್ಷ ಯಾವುದು ಅಂತ ಇಡೀ ದೇಶಕ್ಕೆ ಗೊತ್ತು- ಸಿದ್ದರಾಮಯ್ಯ ವ್ಯಂಗ್ಯ!
1 min readಸಿದ್ದರಾಮಯ್ಯ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಸರಣಿ ಟ್ವಿಟ್ ವಿಚಾರವಾಗಿ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಮಾಜಿ ಸಿಎಂ ಸಿದ್ದರಾಮಯ್ಯ, ವೈಯಕ್ತಿಕವಾಗಿ ನಾನು ಯಾರ ಮೇಲು ಟೀಕೆ ಮಾಡಲ್ಲ. ಕೇವಲ ವಿಚಾರಾಧಿರತ ಇಶ್ಯು ಬಗ್ಗೆ ಮಾತ್ರ ನಾನು ಟೀಕೆ ಮಾಡುತ್ತೇನೆ. ಹೆಚ್ ಡಿ ದೇವೇಗೌಡ, ಕುಮಾರಸ್ವಾಮಿ ಹಾಗು ಅವರ ಕುಟುಂಬ ಸದಸ್ಯರ ಮೇಲೆ ನನಗೆ ವೈಯಕ್ತಿಕವಾಗಿ ಯಾವುದೇ ರೀತಿಯ ದ್ವೇಷವಿಲ್ಲ. ಕೇವಲ ತತ್ವ ಸಿದ್ದಾಂತದ ವಿಚಾರದಲ್ಲಿ ಮಾತ್ರ ಭಿನ್ನಾಭಿಪ್ರಾಯಗಳಿವೆ. ಜೆಡಿಸ್ ನವರು ಜಾತ್ಯಾತೀತ ಎಂದು ಹೇಳಿ ಕೊಳ್ತಾರೆ. ಆದರೆ ಅದಕ್ಕೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಾರೆ.
ಆ ಬಗ್ಗೆ ನಾನು ಮಾತನಾಡಿದರೆ ಅವರ ಮೇಲೆ ದ್ವೇಷ ಸಾಧಿಸುತ್ತಿದ್ದೇನೆಂದು ಹೇಳುತ್ತಾರೆ. ನನಗೆ SCF( ಸಿದ್ದು ಸೂತ್ರ ಕಾಂಗ್ರೆಸ್ ಫ್ಯಾಮಿಲಿ) ಅಂತಾರಾ ಅವರು ಇಡೀ ರಾಜ್ಯ ದೇಶಕ್ಕೆ ಗೊತ್ತು ಯಾರು ಕುಟುಂಬ ರಾಜಕಾರಣ ಮಾಡ್ತಾರೆ ಅಂತ. ಅದನ್ನ ನಾನು ಹೇಳುವ ಅಗತ್ಯ ಇಲ್ಲ. ಒಂದು ಗಂಟೆಗಳ ಸುದ್ದಿಗೋಷ್ಠಿ ನಡೆಸಿದ ನಾನು ಒಂದೇ ಒಂದು ಮಾತನ್ನ ಜೆಡಿಎಸ್ ಬಗ್ಗೆ ಮಾತನಾಡಿಲ್ಲ. ಕೇವಲ ವಿಚಾರಗಳ ಬಗ್ಗೆ ಸಮಸ್ಯೆ ಬಗ್ಗೆ ಮಾತ್ರ ಮಾತಾಡಿದ್ದೇನೆ. ಅದು ಕೇವಲ ಬಿಜೆಪಿ ಬಗ್ಗೆ ಮಾತ್ರವೇ ಈಗ ಇಶ್ಯು ಬಗ್ಗೆ ಮಾತಾಡಿದ್ದೀನಿ. ಅಲ್ಲಿಗೆ ನಿಮಗೆ ಗೊತ್ತಾಗುತ್ತೆ ನಾನು ಅನಗತ್ಯವಾಗಿ ಜೆಡಿಎಸ್ ಬಗ್ಗೆ ಮಾತಾಡಲ್ಲ ಅಂತ ಎಂದು ಜೆಡಿಎಸ್ ನಾಯಕರಿಗೆ ಕಿವಿಮಾತಿನ ಮೂಲಕವೇ ಟಾಂಗ್ ನೀಡಿದ್ದರು.
ಬಿಜೆಪಿ ಅವರು ನಾಚಿಗೆ ಇಲ್ಲದವರು!
ಬಿಜೆಪಿ ಅವರು ನಾಚಿಗೆಟ್ಟವರು, 40 ಪರ್ಸೆಂಟ್ ಕಮಿಷನ್ ಪಡೆದಿದ್ದಾರೆ ಅಂತ ಸ್ವತಹ ಕಾಂಟ್ರಾಕ್ಟರ್ ಗಳೇ ಪತ್ರ ಬರೆದಿದ್ದಾರೆ. ಆದರು ನಾಚಿಗೆಟ್ಟ ಸರ್ಕಾರ ಪರ್ಸೆಂಟೆಜ್ ಪಡೆದಿದೆ. ಆದರೆ ಮೋದಿ ನಾ ಕಾವುಂಗ, ಕಾನೇ ನಾ ದುವುಂಗ ಅಂತಾರೆ. ಕರೋನಾದಿಂದ ಮೃತಪಟ್ಟವರಿಗೆ ಪರಿಹಾರ ಕೊಟ್ರು ಎಂದ್ರು. ಅದರಲ್ಲು ಸುಳ್ಳು ಹೇಳಿ ಜನರಿಗೆ ಮೋಸ ಮಾಡಿದ್ರು. ಕೊರೋನಾ ಸಾವಿನ ಲೆಕ್ಕದಲ್ಲಿ ಸುಳ್ಳು ಹೇಳಿದ್ರು. ಇಡೀ ದೇಶದಲ್ಲಿ 50 ಲಕ್ಷ ಜನರು ಸತ್ರು, ಕರ್ನಾಟಕದಲ್ಲಿ ಸುಮಾರು ನಾಲ್ಕು ಲಕ್ಷ ಜನರು ಸತ್ರು. ವಾಕ್ಸಿನ್ ಕೊಡಿ ಅಂದ್ರೆ ಜಾಗಟೆ ಹೊಡಿರಿ, ಚಪ್ಪಾಳೆ ಹೊಡಿರಿ ಅಂದ್ರು. ಮೌಢ್ಯಗಳನ್ನ ಬಿತ್ತಿ ಸಾಕಷ್ಟು ಲಂಚ ಹೊಡೆದ್ರು. ಇವತ್ತು ಲಂಚ ಇಲ್ಲದೆ ಅಧಿಕಾರಿಗಳ ಟ್ರಾನ್ಸ್‌ಫರ್ ಇಲ್ಲ. ಎಲ್ಲ ಕಡೆ ಲಂಚ..ಲಂಚ.. ಈ ಸರ್ಕಾರದವೇ ಲಂಚ. ಇತ್ತ ವೈದ್ಯರು ಹೆಚ್ಚುವರಿ ಕೆಲಸ ಮಾಡಿದ್ರೆ ಹಣ ಕೊಡ್ತಿವಿ ಅಂದ್ರು. ಆ ಹಣವನ್ನು ಸಹ ಸರ್ಕಾರ ಕೊಟ್ಟಿಲ್ಲ. ಮಾತೆತ್ತಿದ್ರೆ ಖಜಾನೆ ಖಾಲಿ ಅಂತಾರೆ ಎಂದು ಗುಡುಗಿದ್ರು.
ಶ್ರೀನಿವಾಸ್ ಪ್ರಸಾದ್‌ಗೆ ಹೆಚ್ಚಿನ ಆಯುಷ್ಯಕ್ಕೆ ಶುಭ ಕೋರಿದ ಸಿದ್ದು!
ಶ್ರೀನಿವಾಸ ಪ್ರಸಾದ್ ಕೋಮುವಾದಿ ಪಕ್ಷ ಸೇರಿದ್ದಾರೆ. ಅಂಬೇಡ್ಕರ್ ಅವರು ಹೇಳಿದ್ದಾರಾ ಕೋಮುವಾದಿ ಪಕ್ಷ ಸೇರು ಅಂತ. ಅವರಿಗೆ ನನ್ನ ವಿರುದ್ಧ ಹೇಳಿಕೆ ನೀಡಲು ನೈತಿಕತೆ ಇಲ್ಲ. ಶ್ರೀನಿವಾಸ್ ಪ್ರಸಾದ್ ಕಾಂಗ್ರೆಸ್, ಜೆಡಿಎಸ್, ಸಮಾಜವಾದಿ ಪಕ್ಷ, ಬಿಜೆಪಿ ಹೀಗೆ ಎಲ್ಲಾ ಪಕ್ಷ ಸುತ್ತಾಡಿದ್ದಾರೆ. ನನ್ನ ವಿರುದ್ಧ ಮಾತಾಡಲು ಅವರಿಗೆ ನೈತಿಕತೆ ಏನಿದೆ.? ಈಗ ಶ್ರೀನಿವಾಸ್ ಪ್ರಸಾದ್‌ಗೆ ಅನಾರೋಗ್ಯ ಇದೆ. ಅವರು ಆದಷ್ಟು ಬೇಗ ಗುಣಮುಖರಾಗಲಿ. ಇನ್ನೂ ಹೆಚ್ಚು ವರ್ಷಗಳ ಕಾಲ ಅವರು ಬದುಕಿರಬೇಕು.ಈಗಂತ ನಾನೂ ಆಶೀಸುತ್ತೇನೆ ಎಂದರು.