ಮೈಸೂರಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ!
1 min readರಾಹುಲ್ ಗಾಂಧಿಯವರ ಭಾರತ್ ಜೋಡು ಪಾದಯಾತ್ರೆಗೆ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಮೈಸೂರಿನಲ್ಲಿ ಸಭೆ.
ಬಾರಿ ನಿರೀಕ್ಷಿತ ಶ್ರೀ ರಾಹುಲ್ ಗಾಂಧಿಯವರ ಭಾರತ ಜೋಡು ಪಾದಯಾತ್ರೆಗೆ ಮೈಸೂರಿನಲ್ಲಿ ಶಾಸಕರ ಮಾಜಿ ಶಾಸಕರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಸಭೆ ನಡೆಸಲಾಗಿದೆ. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರತಿಪಕ್ಷದ ನಾಯಕರಾದ ಶ್ರೀ ಸಿದ್ದರಾಮಯ್ಯ ನವರು, ಇದೇ ತಿಂಗಳು ಸಪ್ಟಂಬರ್ 30 ಕ್ಕೆ ಕೇರಳ ಮುಗಿಸಿ ಗುಂಡ್ಲುಪೇಟೆಯಿಂದ ಪಾದಯಾತ್ರೆ ಆರಂಭವಾಗಲಿದೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ 3500 ಕಿಲೋಮೀಟರ್ ಉದ್ದದ ಭಾರತದ ಏಕತೆ ಹಾಗೂ ಭಾವೈಕ್ಯತೆಯ ದೃಷ್ಟಿಯಿಂದ ಇದು ಐತಿಹಾಸಿಕ ಪಾದಯಾತ್ರೆಗೆ ಮಾರ್ಪಟ್ಟಿದೆ. ಕರ್ನಾಟಕದಲ್ಲಿ ಸುಮಾರು 21 ದಿನಗಳ ಕಾಲ ಅಂದರೆ ಕರ್ನಾಟಕದ ಸುಮಾರು ಎಂಟು ಜಿಲ್ಲೆಗಳಲ್ಲಿ ಪಾದ ಯಾತ್ರೆ ನಡೆಯಲಿದೆ.
ದಿನಕ್ಕೆ ಇಪ್ಪತ್ತೈದು ಕಿಲೋಮೀಟರ್ ಪಾದಯಾತ್ರೆ ನಡೆಯಲಿದ್ದು, ಇದೇ ಸಂದರ್ಭದಲ್ಲಿ ಸಾರ್ವಜನಿಕರು, ರೈತರು, ಮಹಿಳೆಯರು ಯುವಕರು, ಸಮಾಜದ ಇತರೇ ಸಮುದಾಯಗಳೊಂದಿಗೆ ರಾಹುಲ್ ಗಾಂಧಿ ಅವರು ಸಂವಾದ ನಡೆಸಲಿದ್ದಾರೆ.
ಸಂವಾದದಲ್ಲಿ ಯುವಕರ ರೈತರ ಮಹಿಳೆಯರ ಹಾಗೂ ಹಿಂದುಳಿದ ದಲಿತ ವರ್ಗದವರ ಸಮಸ್ಯೆಗಳು ಹಾಗೂ ಭಾರತದ ಆರ್ಥಿಕ ವ್ಯವಸ್ಥೆ ಮತ್ತು ಬೆಲೆ ಏರಿಕೆ ವಿಚಾರಗಳ ಬಗ್ಗೆ ಜನಸಾಮಾನ್ಯರೊಂದಿಗೆ ಸಂವಾದ ನಡೆಸಲಿದ್ದಾರೆ. ಸದ್ಯದಲ್ಲಿಯೇ ಪಾದಯಾತ್ರೆಯ ಅಂತಿಮ ರೂಪು ರೇಷೆಗಳನ್ನು ತಯಾರಿಸಲು ಬೆಂಗಳೂರಿನಲ್ಲಿ ಹಿರಿಯ ಕಾಂಗ್ರೆಸ್ ಮುಖಂಡರೊಂದಿಗೆ ಸಂಬಂಧಿಸಿದ ಉಸ್ತುವಾರಿಗಳು ಚರ್ಚಿಸಿ ಕೆಪಿಸಿಸಿ ಅಧ್ಯಕ್ಷರು ಹಾಗೂ ಪ್ರತಿಪಕ್ಷದ ನಾಯಕರು ಪಾದಯಾತ್ರೆಯ ಅಂತಿಮ ನೀಲಿ ನಕ್ಷೆಯನ್ನ ಬಿಡುಗಡೆಗೊಳಿಸಲಿದ್ದಾರೆ ಎಂದರು.
ಪ್ರತಿ ದಿನದ ಪಾದಯಾತ್ರೆಗೆ ಸುಮಾರು 25000 ಕಾರ್ಯಕರ್ತರು ರಾಹುಲ್ ಗಾಂಧಿ ಅವರೊಂದಿಗೆ ಭಾಗವಹಿಸಲು ಸಿದ್ದರಾಮಯ್ಯ ಸಭೆಯಲ್ಲಿ ಕರೆ ನೀಡಿದರು. ರಾಜ್ಯದ ಪಾದಯಾತ್ರೆ ಯಶಸ್ವಿಗೊಳಿಸಲು ಪ್ರತಿಯೊಬ್ಬರೂ ಜವಾಬ್ದಾರಿ ತೆಗೆದುಕೊಳ್ಳಲು ಖಡಕ್ ಸೂಚನೆ ನೀಡಿದರು. ಸಭೆಯಲ್ಲಿ ಕೆಪಿಸಿಸಿ ಕಾರ್ಯಧ್ಯಕ್ಷರಾದ ಆರ್. ಧ್ರುವ ನಾರಾಯಣ್ ರಾಹುಲ್ ಗಾಂಧಿಯವರ ಚಾಮರಾಜನಗರ ಹಾಗೂ ಮೈಸೂರು ಜಿಲ್ಲೆಯ ಪಾದಯಾತ್ರೆಯ ಸ್ಥಳಗಳು, ಮಾರ್ಗ ಹಾಗೂ ಇತರೆ ಸಭೆಗಳ ಬಗ್ಗೆ ಸಭೆಗೆ ಮಾಹಿತಿ ನೀಡಿದರು. ಅಂತಿಮ ಹಂತದ ಮಾಹಿತಿಯನ್ನು ಇನ್ನು ಮೂರು ದಿನಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದರು.
ಎಐಸಿಸಿ ಕಾರ್ಯದರ್ಶಿ ರೋಸಿ ಝಾನ್ ಮಾತನಾಡಿ ಈ ಪಾದಯಾತ್ರೆ ಭಾರತದ ಅತ್ಯಂತ ಪ್ರಮುಖ ಹಾಗೂ ಬೇರೆ ಯಾವುದೇ ರಾಜಕೀಯ ಪಕ್ಷಗಳು ಎಂತಹ ಮಹತ್ವದ ನಿರ್ಧಾರವನ್ನು ಮಾಡಿಲ್ಲದ ಕಾರಣ ಈ ಪಾದಯಾತ್ರೆಗೆ ಭಾರತದ ಉದ್ದಗಲಕ್ಕೂ ಕಾಂಗ್ರೆಸ್ಸಿನ ಪ್ರತಿಯೊಬ್ಬ ಕಾರ್ಯಕರ್ತ ನೈತಿಕ ಕರ್ತವ್ಯವೆಂದು ಭಾಗವಹಿಸಲು ವಿನಂತಿಸಿದರು. ಸಭೆಯಲ್ಲಿ ಶಾಸಕರಾದ ತನ್ವೀರ್ ಸೇಠ್, ಮಂಜುನಾಥ್, ಡಾ.ಯತೀಂದ್ರ ಸಿದ್ದರಾಮಯ್ಯ, ಪುಟ್ಟರಂಗಶೆಟ್ಟಿ, ನರೇಂದ್ರ, ಅನಿಲ್ ಚಿಕ್ಕಮಾದು, ತಿಮ್ಮಯ್ಯ, ಮಧು ಮಾದೇಗೌಡ, ಮೈಸೂರು ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಮೂರ್ತಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಡಾ ಬಿಜೆ ವಿಜಯ್ ಕುಮಾರ್, ಚಾಮರಾಜನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಮರಿಸ್ವಾಮಿ, ಮಾಜಿ ಶಾಸಕರಾದ ವಾಸು, ಸೋಮಶೇಖರ್, ಬಾಲ್ ರಾಜ್ ಕಳಲೆ ಕೇಶವಮೂರ್ತಿ, ಬನ್ನೂರು ಕೃಷ್ಣಪ್ಪ, ಕೆಸಿ ಪುಟ್ಟ ಸಿದ್ದಶೆಟ್ಟಿ, ಜಯಣ್ಣ, AR.ಕೃಷ್ಣಮೂರ್ತಿ, ಕೆ ವೆಂಕಟೇಶ್, ಮಾಜಿ ಸಂಸದರಾದ ಕಾಗಲವಾಡಿ ಶಿವಣ್ಣ, ಏ ಸಿದ್ದರಾಜು,
ಗುಂಡ್ಲುಪೇಟೆ ಗಣೇಶ್ ಪ್ರಸಾದ್, ಕೆ ಆರ್ ನಗರದ ರವಿಶಂಕರ್, ಸುನಿಲ್ ಬೋಸ್, ಡಾ. ರವೀಂದ್ರ, ಎಂ ಲಕ್ಷ್ಮಣ್, Hc ಬಸವರಾಜ್, ಮರಿ ಗೌಡ ,ಹರೀಶ್ ಗೌಡ , ಮಂಜುಳಾ ರಾಜ್, ಇತರರು ಭಾಗವಹಿಸಿದ್ದರು.