ಗಾಜನೂರಿನಲ್ಲಿ ಹ್ಯಾಟ್ರಿಕ್ ಹೀರೋ ಸಂಚಾರ!!
1 min readಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್, ತಮ್ಮ ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದಾರೆ. ಅದು ಅಪ್ಪನ ಊರಿನಲ್ಲಿ ಅದು ಗಾಜನೂರಿನಲ್ಲಿ. ಹೌದು ಪತ್ನಿ ಹಾಗೂ ಮಗಳ ಜೊತೆ ಶಿವಣ್ಣ ಮಲೆಮಹದೇಶ್ವರ ಬೆಟ್ಟದ ಬಳಿಯ ಗಾಜನೂರು ಗ್ರಾಮಕ್ಕೆ ತೆರಳಿ ಕಾಲ ಕಳೆಯುತ್ತಿದ್ದಾರೆ.
ಈ ಬಗ್ಗೆ ಖುದ್ದು ಶಿವಣ್ಣ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡಿದ್ದು, ಸಂತಸದಿದ ಕಾಲ ಕಳೆಯುತ್ತಿದ್ದಾರೆ. ಇದೇವೇಳೆ ಗ್ರಾಮದ ಮರದ ಕೆಳಗೆ ಕುಳಿತು ಧ್ಯಾನ ಮಾಡುತ್ತ ಕುಳಿತು ಕಾಲ ಕಳೆದಿದ್ದಾರೆ. ಮಾತ್ರವಲ್ಲದೆ ಗ್ರಾಮದವರ ಜೊತೆ ಮಾತನಾಡಿ ಸಂತಸ ವ್ಯಕ್ತಪಡಿಸುದ್ದಾರೆ. ಈ ವೇಳೆ ಅಪ್ಪನ ಹುಟ್ಟೂರಿನ ಮನೆಯಲ್ಲಿ ಪುಟ್ಟಸ್ವಾಮಿ ಅಲಿಯಾಸ್ ಶಿವರಾಜ್ ಕುಮಾರ್ ಮತ್ತಷ್ಟು ಖುಷಿ ಹಂಚಿದ್ದಾರೆ.