ಅಣ್ಣಾಮಲೈ ವಿರುದ್ಧ ಹೊಗೆನಕಲ್ ಚಲೋ ಚಳುವಳಿ!
1 min read
ಮೈಸೂರು : ಅಣ್ಣಾಮಲೈ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಮೈಸೂರು ಕನ್ನಡ ವೇದಿಕೆ ಕಾರ್ಯಕರ್ತರಿಂದ ಹೊಗೆನಕಲ್ ಚಲೋ ಚಳುವಳಿ ನಡೆದಿದೆ. ಮೈಸೂರಿನ 101 ಗಣಪತಿ ದೇಗುಲದಿಂದ ಹೊರಟ ಕಾರ್ಯಕರ್ತರು ಪೂಜೆ ಸಲ್ಲಿಸಿ ವಾಹನದಲ್ಲಿ ತೆರಳಿದ್ರು. ಇದಕ್ಕು ಮುನ್ನ ತಮಿಳುನಾಡಿನ ವರ್ತನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ರು.

ಅಲ್ಲದೆ ಇಲ್ಲಿಂದ ತೆರಳಿ ಹೊಗೆನಕಲ್ ಬಳಿಯೇ ಪ್ರತಿಭಟನೆ ಮಾಡಲು ಕಾರ್ಯಕರ್ತರು ನಿರ್ಧಾರ ಮಾಡಿದ್ದು, ಮೇಕೆದಾಟು ಯೋಜನೆ ಮಾಡುವುದರ ಕುರಿತು ಅಣ್ಣಾಮಲೈ ಪ್ರತಿಭಟನೆಯನ್ನ ಖಂಡಿಸಿದ ಕಾರ್ಯಕರ್ತರು, ಮೇಕೆದಾಟು ಯೋಜನೆ ಆಗಲೇ ಬೇಕೆಂದು ಒತ್ತಾಯಿಸಿದ್ರು. ಅಲ್ಲದೆ ಹೋಗುವ ದಾರಿ ಮಧ್ಯೆ ಪ್ರಮುಖ ಸ್ಥಳದಲ್ಲು ಪ್ರತಿಭಟನೆ ಮಾಡಲು ಕಾರ್ಯಕರ್ತರು ನಿರ್ಧಾರ ಮಾಡಿದ್ದಾರೆ.
