ಮಕ್ಕಳ ಜೊತೆ ಕುಳಿತು ಸಾಂಗ್ ಹಾಡುತ್ತಿದ್ದಾರೆ ಶಿವಣ್ಣ!

1 min read

ಮೈಸೂರು : ನಟ ಶಿವಣ್ಣನಿಗೆ ದಿನೆ ದಿನೆ ಅಪ್ಪು ನೋವು ಕಾಡುತ್ತಲೇ‌ ಇದ್ದು, ಅಪ್ಪು ನೋವು ಮರೆಯೋದಕ್ಕೆ ಹೆಚ್ಚು ಕಾಲ ಶಿವಣ್ಣ ಮೈಸೂರಿನಲ್ಲೇ ಇದ್ದಾರೆ. ಈಗಾಗಲೇ ಶೂಟಿಂಗ್ ಕೂಡ ಮೈಸೂರಿನಲ್ಲೇ ಇದ್ದು ಶೂಟಿಂಗ್ ಸ್ಪಾಟ್‌ಗು ಕೂಡ ಮಕ್ಕಳನ ಕರೆದುಕೊಂಡು ಹೋಗುತ್ತಿದ್ದಾರೆ. ಈ ಮೂಲಕ ಅಪ್ಪುವಿನ ಆಸೆಯನ್ನ ಶಿವಣ್ಣ ಈಡೇರಿಸಿ, ಮಕ್ಕಳ‌ ಜೊತೆ ಮಗುವಾಗಿದ್ದಾರೆ ಶಿವಣ್ಣ.

ಶಕ್ತಿಧಾಮದ ಮಕ್ಕಳ ಜೊತೆಯೇ ಆಟ-ಊಟ!

ಶಕ್ತಿಧಾಮದ ಮಕ್ಕಳ ಜೊತೆಯೇ ಶಿವಣ್ಣ ಹೆಚ್ಚು ಕಾಲ ಕಳೆಯುತ್ತಿದ್ದು, ಅಪ್ಪು ನೆನಪು ಮಕ್ಕಳಲ್ಲಿ ಕಾಣುತ್ತಿದ್ದಾರೆ. ಇನ್ನು ಮಕ್ಕಳ ಜೊತೆ ಮಗುವಾದ ನಟ ಶಿವಣ್ಣ, ಶಕ್ತಿಧಾಮದ ಮಕ್ಕಳ ಜೊತೆ ಹೆಚ್ಚಿನ ಒಡನಾಟ ಬೆಳೆಸಿಕೊಂಡಿದ್ದಾರೆ. ಈಗಾಗಲೇ ಮಕ್ಕಳ ಜೊತೆಯೇ ಕುಳಿತು ಡಾ.ರಾಜಕುಮಾರ್ ಅವರ ಗೀತೆ ಹಾಡಿ ಮಕ್ಕಳನ್ನ‌ ರಂಜಿಸುತ್ತಿದ್ದಾರೆ.

ಮಕ್ಕಳ ಜೊತೆ ಕುಳಿತು ಸಾಂಗ್ ಹಾಡುತ್ತಿರುವ ಶಿವಣ್ಣ

ಶಾಲೆ ತೆರೆಯೋ ಅಪ್ಪು ಕನಸ್ಸಿಗೆ ಶೀಘ್ರವೇ ಸಿಗಲಿದೆ ಗ್ರೀನ್ ಸಿಗ್ನಲ್!

ಇನ್ನು ಅಪ್ಪು ಕನಸ್ಸು ನನಸ್ಸು ಮಾಡುವತ್ತ ಶಿವಣ್ಣ ಮುಂದಾಗಿದ್ದಾರೆ. ಈಗಾಗಲೇ ಶಕ್ತಿಧಾಮದಲ್ಲೇ ಶಾಲೆ ತೆರಯಬೇಕೆಂಬ ಪುನೀತ್ ಹಂಬಲದ ಹಿನ್ನಲೆಯಲ್ಲಿ ಆ‌ ಆಸೆ ಈಡೇರಿಸಲು ಶಿವಣ್ಣ ಮುಂದಾಗಿದ್ದಾರೆ. ಶೀಘ್ರದಲ್ಲೇ ಶಕ್ತಿಧಾಮಕ್ಕೆ ಈ ಭಾಗ್ಯ ಸಿಗಲಿದ್ದು, ಶಾಲೆ ಮಾಡುವ ಎಲ್ಲಾ ರೀತಿಯ ಸಿದ್ದತೆ ಮುಗಿಸಿದೆ ಶಕ್ತಿಧಾಮ. ಹಾಗಾಗಿ ಖುದ್ದು ಶಕ್ತಿಧಾಮದಲ್ಲೇ ಉಳಿದುಕೊಂಡ ಶಿವಣ್ಣ. ಮಕ್ಕಳ‌ ಮಧ್ಯೆ ಕುಳಿತು ಮಗುವಾಗಿ ಹಾಡು ಹಾಡಿ ರಂಜಿಸುತ್ತಿದ್ದಾರೆ.

About Author

Leave a Reply

Your email address will not be published. Required fields are marked *