ಮುಂದುವರೆದ IAS ಅಧಿಕಾರಿಗಳ ಜಟಾಪಟಿ: ರಾಜ್ಯ ಕಾರ್ಯದರ್ಶಿ ಬಂದು ಹೋದರು ಮುಗಿಯದ ಜಗಳ
1 min readಮೈಸೂರು: ಮೈಸೂರಿನಲ್ಲಿ IAS ಅಧಿಕಾರಿಗಳ ಜಟಾಪಟಿ ಮುಂದುವರೆದಿದ್ದು, ರಾಜ್ಯ ಕಾರ್ಯದರ್ಶಿ ಬಂದು ಹೋದರು ಇವರ ಜಗಳ ಮುಗಿದಿಲ್ಲ.
ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಲೆಕ್ಕಕ್ಕೆ ಲೆಕ್ಕಕೊಟ್ಟು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ತಿರುಗೇಟು ನೀಡಿದ್ದಾರೆ. ರೋಹಿಣಿ ಸಿಂಧೂರಿ ರೀತಿ ದಾಖಲಾತಿಗಳ ಮೂಲಕವೇ ಶಿಲ್ಪಾನಾಗ್ ತಿರುಗೇಟು ಕೊಟ್ಟಿದ್ದಾರೆ.
ದೇಣಿಗೆ ರೂಪದಲ್ಲಿ ಪಾಲಿಕೆಗೆ ಬಂದಿರುವ ವಸ್ತುಗಳ ಹಾಗೂ ವೈದ್ಯಕೀಯ ಸಾಮಗ್ರಿಗಳ ಸಮಗ್ರ ಮಾಹಿತಿ ನೀಡಿದ್ದಾರೆ. ಈ ಮೂಲಕ ಡಿಸಿಗೆ ಶಿಲ್ಪಾನಾಗ್ ಪ್ರತ್ಯುತ್ತರ ನೀಡಿದ್ದಾರೆ.
ದಾನಿಗಳ ಹೆಸರು ಮತ್ತು ಪಡೆದ ವೈದ್ಯಕೀಯ ಸಾಮಗ್ರಿಗಳ ಮಾಹಿತಿ ಬಿಡುಗಡೆ ಗೊಳಿಸಿದ್ದು, ಉದ್ದೇಶಪೂರ್ವಕ ಕಿರುಕುಳ, ಅನವಶ್ಯಕ ನೋಟಿಸ್ ನೀಡಲಾಗಿದೆ. ಇದು ನಿಜವೆಂದು ಶಿಲ್ಪಾನಾಗ್ ಪುನರುಚ್ಛಾರ ಮಾಡಿದ್ದಾರೆ.
ಶಿಲ್ಪಾನಾಗ್ ಅವರಿಗೆ ಕಿರುಕಳ ನೀಡಿಲ್ಲವೆಂದು ಡಿಸಿ ರೋಹಿಣಿ ಸಿಂಧೂರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದರು. ಆದರೆ ಕೋವಿಡ್-19 ಸಭೆಗಳಿಗೆ ನಿರಂತರವಾಗಿ ಹಾಜರಗುತ್ತಿರುವುದಾಗಿ ಶಿಲ್ಪಾನಾಗ್ ಸ್ಪಷ್ಟನೆ ಕೊಟ್ಟಿದ್ದಾರೆ. ಅಲ್ಲದೆ ಒತ್ತಡದ ಕೆಲಸದಿಂದ ಆಯುಕ್ತರೆ ಎಲ್ಲಾ ಸಭೆಗಳಿಗೂ ಹಾಜರಾಗಲು ಸಾಧ್ಯವಾಗುವುದಿಲ್ಲ. ಈಗಾಗಿ ಪಾಲಿಕೆ ಅಧಿಕಾರಿಗಳು, ನೋಡಲ್ ಅಧಿಕಾರಿಗಳು ಸಭೆಗಳಲ್ಲಿ ಭಾಗಿಯಾಗಿದ್ದಾರೆ. ಕೋವಿಡ್ ಮಿತ್ರ ಸ್ಥಾಪನೆ, ಟೆಲಿ ಮೆಡಿಸನ್ ಸೆಂಟರ್ ಸ್ಥಾಪನೆ. ಪಾಸಿಟಿವ್ ಇರುವ ಮನೆಗಳಿಗೆ ತೆರಳಿ ಮನೆ ಮನೆ ಸಮೀಕ್ಷೆ. ಇದೆಲ್ಲವನ್ನೂ ನಡೆಸುವುದು ಪಾಲಿಕೆ ವತಿಯಿಂದ ನಿರಂತರವಾಗಿ ನಡೆಯುತ್ತಿದೆ.
ಪಾಲಿಕೆ ಆಯುಕ್ತರಿಗೂ ಕಾರ್ಯವ್ಯಾಪ್ತಿ ಇದೆ. ಕೊವಿಡ್-19 ಸಂಬಂಧಿಸಿದಂತೆ ನಮ್ಮ ಸಿಬ್ಬಂದಿಗಳಿಗೂ ನಿಯೋಜನೆ ಮಾಡವ ಕೆಲಸ ನನ್ನದು. ಎಲ್ಲಾ ಕೆಲಸಗಳನ್ನು ನಾನು ಜವಾಬ್ದಾರಿಯಿಂದ ಮಾಡಿದ್ದೆನೆ. ಪಾಲಿಕೆ ವ್ಯಾಪ್ತಿಯಲ್ಲಿ ಕೆಲವು ಸಭೆಗಳನ್ನು ಮಾಡುವ ಅವಶ್ಯಕತೆ ಇದ್ದು ಅದನ್ನು ಮಾಡಿದ್ದೇನೆ. ಡಿಸಿ ಪ್ರತಿ ಆರೋಪಕ್ಕೆ ಮಾಧ್ಯಮ ಪ್ರಕಟಣೆಯ ಮೂಲಕ ಶಿಲ್ಪಾನಾಗ್ ತಿರುಗೇಟು ಕೊಟ್ಟಿದ್ದಾರೆ. 13 ಪುಟಗಳ ದಾಖಲಾತಿ ಜೊತೆಗೆ ಕಿರುಕುಳವು ಹೌದು ಎಂದು ಉಲ್ಲೇಖ.