ಮೈಸೂರಿನಲ್ಲಿ IAS vs IAS: ಇಂದು ಕರ್ತವ್ಯಕ್ಕೆ ಹಾಜರಾಗ್ತಾರಾ ಶಿಲ್ಪಾನಾಗ್..?
1 min readಮೈಸೂರು: ರಾಜೀನಾಮೆ ಬಳಿಕ ಪಾಲಿಕೆ ಆಯುಕ್ತೆಯ ಕರ್ತವ್ಯದಿಂದ ದೂರ ಉಳಿದಿರುವ ಶಿಲ್ಪಾನಾಗ್ ಇಂದು ಕರ್ತವ್ಯಕ್ಕೆ ಹಾಜರಾಗ್ತಾರಾ ಪ್ರಶ್ನೆ ಮೂಡಿದೆ.
ನಿನ್ನೆ ಇಡಿ ದಿನ ಸಿಎಸ್ ಹಾಗೂ ಸುತ್ತೂರು ಮಠದಲ್ಲಿದ್ದ ಶಿಲ್ಪಾನಾಗ್ ರಾಜೀನಾಮೆ ಬಳಿಕ ಪಾಲಿಕೆಯತ್ತ ತಿರುಗಿ ನೋಡಿಲ್ಲ. ಆದ್ರೆ ಶಿಲ್ಪಾನಾಗ್ ರಾಜೀನಾಮೆ ನನಗೆ ಬಂದೇ ಇಲ್ಲ ಅಂತ ಸಿಎಸ್ ರವಿಕುಮಾರ್ ಸ್ಪಷ್ಟಪಡಿಸಿದ್ದಾರೆ. ಕಾನೂನಿನ ಅಡಿಯಲ್ಲಿ ರಾಜೀನಾಮೆ ಪ್ರಕ್ರಿಯೆ ಆಗಿಲ್ಲ. ನಿಯಮಾನುಸಾರ ರಾಜೀನಾಮೆ ಸಲ್ಲಸಬೇಕಿದೆ. ರಾಜೀನಾಮೆಗು ಮುನ್ನ ಆರೋಪಕ್ಕೆ ಸಿಎಸ್ ದಾಖಲೆ ಕೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾಡಿದ ಆರೋಪಗಳಿಗೆ ದಾಖಲೆ ನೀಡುವಂತೆ ಸಿಎಸ್ ಕೇಳಿದ್ದಾರೆ.
ವಾಟ್ಸಪ್ ಗ್ರೂಪ್‌ನಿಂದ ರಿಮೂವ್ ಮಾಡಿದ್ದು, ನೋಟಿಸ್ ನೀಡಿದ್ದನ್ನ ತೋರಿಸಿರುವ ಶಿಲ್ಪಾನಾಗ್. ರಾಜೀನಾಮೆ ವಿಚಾರವಾಗಿ ಗೊಂದಲಕ್ಕಿಡಾಗಿರುವ ಶಿಲ್ಪಾನಾಗ್. ಇಂದು ಕರ್ತವ್ಯಕ್ಕೆ ಹಾಜರಾದರೆ ರಾಜೀನಾಮೆ ವಾಪಸ್ ಪಡೆದಂತೆ. ಕರ್ತವ್ಯಕ್ಕೆ ಹಾಜರಾಗದೆ ಇದ್ದರೆ ಆಯುಕ್ತೆ ಸ್ಥಾನಕ್ಕೆ ರಾಜೀನಾಮೆ ನೀಡಿದಂತೆ. ಕುತೂಹಲ ಕೆರಳಿಸಿರುವ ಆಯುಕ್ತೆ ಶಿಲ್ಪಾನಾಗ್ ನಡೆ!?