ಮೈಸೂರು : 20 ಲಕ್ಷ ಕಂದಾಯ ಉಳಿಸಿಕೊಂಡಿದ್ದ ಶಾಲಿಮಾರ್ ಫಂಕ್ಷನ್ ಹಾಲ್‌ಗೆ ಬೀಗ ಜಡಿದ ಪಾಲಿಕೆ.!

1 min read

ಮೈಸೂರು ಮಹಾನಗರಪಾಲಿಕೆ, ವಲಯ ಕಚೇರಿ-8ರ ವ್ಯಾಪ್ತಿಯ ವಾರ್ಡ್ ನಂ-29ರ “ಶಾಲಿಮರ್ ಫಂಕ್ಷನ್ ಹಾಲ್” (ಸ್ವತ್ತಿನ ನಂ. 4518) ಸೈಂಟ್ ಮೇರಿಸ್ ರಸ್ತೆ, 3ನೇ ಕ್ರಾಸ್, ಎನ್.ಆರ್ ಮೊಹಲ್ಲಾದಲ್ಲಿರುವ ಇದು ಯಾವುದೇ ಸ್ವತ್ತಿನ ಉದ್ದಿಮೆ ಪರವಾನಿಗೆ ಪಡೆಯದೆ‌ ಕಾರ್ಯ ನಿರ್ವಹಿಸುತ್ತಿತ್ತು. ಅದರಲ್ಲು ಆಸ್ತಿ ತೆರಿಗೆ ಕಂದಾಯವು 2011-12 ರಿಂದ 2021-22ನೇ ಸಾಲಿನವರೆಗೂ ಒಟ್ಟು ರೂ. 20.00 ಲಕ್ಷಕ್ಕೂ ಹೆಚ್ಚು ಬಾಕಿ ಇದ್ದು, ಈ ಸಂಬಂಧ ಹಲವು ಬಾರಿ ಸ್ವತ್ತಿನ ಮಾಲೀಕರಿಗೆ ಉದ್ದಿಮೆ ಪರವಾನಿಗೆ ಮತ್ತು ಆಸ್ತಿ ತೆರಿಗೆಯನ್ನು ಪಾವತಿಸುವಂತೆ ನೋಟಿಸ್ ಗಳನ್ನು ನೀಡಲಾಗಿತ್ತು. ಸಾಕಷ್ಟು ಬಾರಿ ತೆರಿಗೆ ಪಾವತಿಸಲು ಹಲವು ಅವಕಾಶಗಳನ್ನು ಕಲ್ಪಿಸಲಾಗಿದ್ದರು ಇದಕ್ಕೆ ಸ್ಪಂದಿಸದ ಶಾಲಿಮಾರ್ ಫಂಕ್ಷನ್ ಹಾಲ್.

ಇದರಿಂದ ಆಸ್ತಿ ತೆರಿಗೆ ಪಾವತಿಸದ ಕಾರಣ ಹಾಗೂ ಉದ್ದಿಮೆ ಪರವಾನಿಗೆ ಪಡೆಯದ ಕಾರಣ ಪಾಲಿಕೆ ಆಯುಕ್ತರಾದ ಲಕ್ಷ್ಮಿಕಾಂತ್ ರೆಡ್ಡಿಯವರ ನಿರ್ದೇಶನದ ಮೇರೆಗೆ, ವಲಯ ಆಯುಕ್ತರಾದ ಶ್ರೀ ಶಿವಕುಮಾರ್ ರವರ ನೇತೃತ್ವದಲ್ಲಿ ಕರ್ನಾಟಕ ಮುನಿಸಿಪಲ್ ಕಾರ್ಪೊರೇಷನ್ ಕಾಯ್ದೆ 1976ರ ಅನ್ವಯ ” ಶಾಲಿಮರ್ ಫಂಕ್ಷನ್ ಹಾಲ್”ನ್ನು ಬೀಗಮುದ್ರೆ ಹಾಕಿಸಿ ಮುಚ್ಚಿಸಲಾಯಿತು.

ಈ ಕಾರ್ಯಾಚರಣೆಯಲ್ಲಿ ವಲಯ ಕಂದಾಯಾಧಿಕಾರಿ, ಕಂದಾಯ ಪರಿಶೀಲಕರು, ಪೋಲಿಸ್ ಇಲಾಖೆಯ ಸಹಯೋಗದೊಂದಿಗೆ ಜಪ್ತಿ ಮಾಡಿ ಬೀಗಮುದ್ರೆ ಹಾಕಿಸಲಾಯಿತು.

ಈ ನಡುವೆ ಮೈಸೂರು ಪಾಲಿಕೆ- “ತೆರಿಗೆಯನ್ನು ಪಾವತಿಸಿ, ನಗರದ ಅಭಿವೃದ್ಧಿಗೆ ಸಹಕರಿಸಿ” ಎಂದು ಘೋಷಣೆ ಸಹ ಹೊರಡಿಸಿದೆ.

About Author

Leave a Reply

Your email address will not be published. Required fields are marked *