ಬಿಳಿಕೆರೆಯಲ್ಲಿ ಸರಣಿಗಳ್ಳತನ: ಖದೀಮರ ಕೈಚಳಕ ಸಿಸಿ ಟಿವಿಯಲ್ಲಿ ಸೆರೆ
1 min readಮೈಸೂರು: ಶೆಟರ್ ಲಾಕ್ ಮುರಿದು ಅಂಗಡಿಗಳಿಗೆ ನುಗ್ಗಿ ಕಳ್ಳರು 50 ಸಾವಿರಕ್ಕೂ ಹೆಚ್ಚು ಹಣ ದೋಚಿರುವ ಘಟನೆ ಹುಣಸೂರು ತಾಲ್ಲೂಕಿನ ಬಿಳಿಕೆರೆಯಲ್ಲಿ ತಡ ರಾತ್ರಿ ನಡೆದಿದೆ. ಖದೀಮರ ಕೈಚಳಕ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಕೊರೊನಾ ಲಾಕ್ಡೌನ್ ಸಮಯವನ್ನೇ ಲಾಭ ಮಾಡಿಕೊಂಡಿರುವ ಖದೀಮರು ಒಂದು ಜನೌಷದ್ ಮೆಡಿಕಲ್, ನಾಲ್ಕು ದಿನಸಿ ಅಂಗಡಿಗಳಲ್ಲಿ ಕಳ್ಳತನ ಮಾಡಿದ್ದಾರೆ. ಐದು ಅಂಗಡಿಗಳಿಂದ 50 ಸಾವಿರಕ್ಕೂ ಹೆಚ್ಚು ಹಣ ದೋಚಿದ್ದಾರೆ. ಅಲ್ಲದೆ ಅಂಗಡಿಗಳಲ್ಲಿದ್ದ ವಸ್ತುಗಳನ್ನು ಕದ್ದೊಯ್ದಿದ್ದಾರೆ.
ಸ್ಥಳಕ್ಕೆ ಬಿಳಿಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಸಿಸಿಟಿವಿ ಆಧಾರದ ಮೇಲೆ ಬಿಳಿಕೆರೆ ಪೊಲೀಸರು ಖದೀಮರ ಪತ್ತೆಗೆ ಜಾಲಬೀಸಿದ್ದಾರೆ.