ಚಾಮುಂಡಿ ಬೆಟ್ಟ ಉಳಿಸಿ ಎಂದು ಹಿರಿಯ ಸಾಹಿತಿಯಿಂದ ಪ್ರಧಾನಿಗೆ ಪತ್ರ!

1 min read

ಮೈಸೂರಿನ ಚಾಮುಂಡಿಬೆಟ್ಟ ಉಳಿವಿಗಾಗಿ ದೊಡ್ಡ ಮಟ್ಟದ ಅಭಿಯಾನ ನಡೆಯುತ್ತಿದ್ದು ಇದಕ್ಕೆ ಯದುವೀರ್ ಒಡೆಯರ್ ಕೂಡ ಸಾಥ್ ನೀಡಿದ್ದಾರೆ. ಈ ನಡುವೆ ಚಾಮುಂಡಿ ಬೆಟ್ಟ ಉಳಿಸಿ ಅಂತ ಪ್ರಧಾನಿ ಮೋದಿಗೆ ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ ಪತ್ರ ಬರೆದಿದ್ದಾರೆ.

ಕೇಂದ್ರ ಸರ್ಕಾರದ ಪ್ರಸಾದ ಯೋಜನೆಯಿಂದ ಹೆಸರಾಂತ ಚಾಮುಂಡಿಬೆಟ್ಟಕ್ಕೆ ತೊಂದರೆಯಾಗುತ್ತಿದೆ. ಚಾಮುಂಡಿ ಬೆಟ್ಟವನ್ನ ಕಾಂಕ್ರೀಟ್ ಕಾಡು ಮಾಡುವ ಯೋಜನೆ ಇದಾಗಿದ್ದು ಈ ಯೋಜನೆಯನ್ನ ಅನುಷ್ಠಾನಗೊಳಿಸಬಾರದು ಎಂದಿದ್ದಾರೆ.

ಅಲ್ಲದೆ ಚಾಮುಂಡಿಬೆಟ್ಟಕ್ಕೆ ಹೋಗುವಂತ ವಾಹನಗಳಿಗೆ ನಿರ್ಬಂಧ ಹಾಕಬೇಕು. ಗಣ್ಯ ವ್ಯಕ್ತಿಗಳ ವಾಹನ ಸೇರಿದಂತೆ ಎಲ್ಲಾ ವಾಹನಗಳಿಗು ನಿರ್ಬಂಧ ವಿಧಿಸಬೇಕು. ಸರ್ಕಾರದಿಂದಲೆ ಪರಿಸರ ಸ್ನೇಹಿ ವಿದ್ಯುತ್ ಚಾಲಿತ ಬಸ್ ಗಳನ್ನು ಬಿಡಬೇಕು.

ಜೊತೆಗೆ ಚಾಮುಂಡಿ ಬೆಟ್ಟದಲ್ಲಿ ವಾಸ ಇರುವ 4 ಸಾವಿರ ಜನರಿಗೆ ನಗರದಲ್ಲಿ ಸ್ಥಳವಕಾಶ ಮಾಡಿಕೊಡಬೇಕು. ದೇವಸ್ಥಾನದ ಅರ್ಚಕರು ಹಾಗೂ ದೇವಾಲಯದ ಸಿಬ್ಬಂದಿಗಳಿಗೆ ಮಾತ್ರ ಉಳಿಯಲು ಅವಕಾಶಕೊಡಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

About Author

Leave a Reply

Your email address will not be published. Required fields are marked *