ಸಖತ್ ಜೋರಾಗಿದೆ ‘ಚಾಮುಂಡಿ ಬೆಟ್ಟ’ ಉಳಿಸಿ ಆಂದೋಲನ!
1 min readಚಾಮುಂಡಿ ಬೆಟ್ಟ ಉಳಿಸಿ- ಈ ಅಭಿಯಾನ ಇದೀಗಾ ಸಾಕಷ್ಟು ಚರ್ಚೆ ಹಾಗೂ ದೊಡ್ಡ ಹೋರಾಟವಾಗಿ ಪರಿಣಮಿಸಿದೆ. ಚಾಮುಂಡಿ ಬೆಟ್ಟದ ನಂದಿ ಮಾರ್ಗ ಕುಸಿತ ಕಂಡಿದ್ದೆ ತಡ ಕಾಮಗಾರಿ ಮುಗಿದ ಒಂದು ವರ್ಷ ಆಗದಿದ್ರು ರಸ್ತೆ ಕುಸಿದಿದ್ದು ಸಾಕಷ್ಟು ಆಶ್ಚರ್ಯ ಹಾಗೂ ಅವೈಜ್ಞಾನಿಕ ಕಾಮಗಾರಿ ಎಂದು ಆಕ್ರೋಶ ಕೇಳಿ ಬಂದಿತ್ತು.
ಇದಕ್ಕೆ ಮೈಸೂರಿನ ಸಾಮಾಜಿಕ ಜಾಲತಾಣವಾದ ಮೈಸೂರು ಮೀಮ್ಸ್’ ಸ್ಥಳೀಯ ಪತ್ರಿಕೆಯಾದ ಆಂದೋಲನ ದೊಡ್ಡ ಆಂದೋಲನವೇ ಶುರು ಮಾಡಿದೆ. ಈಗಾಗಲೇ ಈ ಅಭಿಯಾನಕ್ಕೆ ಮೈಸೂರು ಸಂಸ್ಥಾನದ ಮಹಾರಾಜರಾದ ಯದುವೀರ್ ಶ್ರೀ ಕೃಷ್ಣದತ್ತ ಚಾಮರಾಜ ಒಡೆಯರ್ ಜೊತೆಯಾಗಿದ್ದು, 61 ಸಾವಿರ ಮಂದಿ ಈ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ. ಇದರಿಂದ ಸೇವ್ ಚಾಮುಂಡಿ ಬೆಟ್ಟಕ್ಕೆ ದೊಡ್ಡ ಸಹಕಾರ ಸಿಕ್ಕಿದೆ.
ಮೈಸೂರು ಮೀಮ್ಸ್ ಸಾಥ್
ಈಗಾಗಲೇ ಚಾಮುಂಡಿ ಬೆಟ್ಟ ಉಳಿಸಿ ಎಂದು ಹ್ಯಾಷ್ ಟ್ಯಾಗ್ ಬಳಸಿ ಈ ಪೇಜ್ ಈ ಅಭಿಯಾನಕ್ಕೆ ಕೊಂಡಿಯಾಗಿ ನಿಂತಿದೆ. ಈಗಾಗಲೇ ಸ್ಥಳೀಯ ಆಂದೋಲನ ಪತ್ರಿಕೆ ಈಗಾಗಲೇ ಬೃಹತ್ ಆಂದೋಲನ ಕೈಗೊಂಡ ಬಳಿಕ ಮೀಮ್ಸ್ ಕೂಡ ಸಾಮಾಜಿಕ ಜಾಲತಾಣದ ಅತೀ ದೊಡ್ಡ ನೇತೃತ್ವ ವಹಿಸಿದೆ. ಟ್ವಿಟರ್ನಲ್ಲಿ ದೊಡ್ಡ ಅಭಿಯಾನ ಆರಂಭಿಸಿದ ಮೀಮ್ಸ್ ಇದೀಗಾ ಟ್ರೆಂಡಿಂಗ್ನಲ್ಲಿದೆ. ಇನ್ನು ಈ ಬಗ್ಗೆ ಮೀಮ್ಸ್ ಬಳಗ ಹೇಳೋದು ಚಾಮುಂಡಿ ಬೆಟ್ಟದ ಅಂದ ನೋಡೋಕೆ, ವಾಕಿಂಗೂ, ಜಾಕಿಂಗೂ, ಅರಮನೆ ಅಂದ ಸವಿಯೋಕೆ ಚಾಮುಂಡಿ ಬೆಟ್ಟ ಸೂಪರ್. ದೈವಿಕ ನೆಲೆಯ ಚಾಮುಂಡಿ ದೇವಿಯ ದರ್ಶನ ಎಲ್ಲರಿಗು ಒಳಿತಾಗುತ್ತೆ ಎಂಬ ಭಾವನೆ ಅವರದ್ದು.
ಇತರೆ ಸಾಮಾಜಿಕ ಜಾಲತಾಣವೂ ಸಾಥ್
ಸಾಮಾಜಿಕ ಜಾಲತಾಣಗಳಾದ ನಾವು ನನ್ನೂರು ಮೈಸೂರು’ ಮೈಸೂರು ಆನ್ಲೈನ್, ನಮ್ಮ ಮೈಸೂರು ನಮ್ಮ ಹೆಮ್ಮೆ ಸೇರಿ ಅನೇಕ ಸಾಮಾಜಿಕ ಜಾಲತಾಣಗಳು ಇದರ ಜೊತೆಯಾಗಿದೆ.
ನಟ, ನಟಿಯರು, ಕಲಾವಿದರು ಸಾಥ್!
ಚಾಮುಂಡಿ ಬೆಟ್ಟ ಉಳಿಸಿ ಅಭಿಯಾನಕ್ಕೆ ನಟರು ಸೇರಿ ನಿರ್ದೇಶಕರು ಸಹ ಸಾಥ್ ನೀಡಿದ್ದಾರೆ. ಸಿಂಪಲ್ ಸುನಿ, ನಟಿ ಸೋನು ಗೌಡ, ಕಲಾವಿದ ಬಾದಲ್ ನಂಜುಂಡಸ್ವಾಮಿ ಸಹ ಸಾಥ್ ನೀಡಿದ್ದಾರೆ. ಈ ಮೂಲಕ ಮೈಸೂರಿನ ಅಸ್ಮಿತೆಯನ್ನ ಕಾಪಾಡಲು ಎಲ್ಲರು ಕೈ ಜೋಡಿಸಿದ್ದಾರೆ.
- ಸದ್ಯ ಚಾಮುಂಡಿ ಬೆಟ್ಟದಲ್ಲಿ ಈಗಾಗಲೇ ಭೂ ಕುಸಿತ ನಿರಂತರವಾಗಿ ನಡೆಯುತ್ತಲೇ ಇದೆ. ಇದಕ್ಕೆ ಸರಿಯಾದ ಮಾರ್ಗೋಪಾಯ ಕಂಡು ಹಿಡಿಯದಿದ್ರೆ ನಿಜಕ್ಕು ಚಾಮುಂಡಿ ಬೆಟ್ಟಕ್ಕೆ ಸಮಸ್ಯೆ ಆಗಲಿದೆ. ಇದನ್ನ ಗಮನದಲ್ಲಿಟ್ಟುಕೊಂಡು ಈ ಅಭಿಯಾನ ನಡೆಯುತ್ತಿದ್ದು, ಸರ್ಕಾರ ಹಾಗೂ ಅಧಿಕಾರಿಗಳು ಚಾಮುಂಡಿ ಬೆಟ್ಟ ಕಾಪಾಡಲು ಯಾವ ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ ಕಾದು ನೋಡಬೇಕಿದೆ.
ನನ್ನೂರು ಮೈಸೂರು ಟೀಂ…