ರೋಹಿಣಿ ಸಿಂಧೂರಿ ವಿರುದ್ಧ 6ಕೋಟಿ ಹಗರಣದ ಆರೋಪ ಮಾಡಿದ ಸಾರಾ ಮಹೇಶ್!
1 min readಮೈಸೂರು :
ಮೈಸೂರಿನಲ್ಲಿ ಶಾಸಕ ಸಾ.ರಾ. ಮಹೇಶ್ ಸುದ್ದಿಗೋಷ್ಠಿ ನಡೆಸಿ ಮತ್ತೇ ನಿರ್ಗಮಿತ ಡಿಸಿ ರೋಹಿಣಿ ಸಿಂಧೂರಿ ವಿರುದ್ಧ ಮತ್ತೇ ಹಗರಣದ ಆರೋಪ ಮಾಡಿದ್ದು ಅವರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಮಾಡುವಂತೆ ಒತ್ತಾಯಿಸಿದ್ದಾರೆ. ಅಷ್ಟಕ್ಕು ಡಿಸಿ ರೋಹಿಣಿ ಸಿಂಧೂರಿ ವಿರುದ್ಧ ಮಾಡಿರೋ ಆರೋಪಗಳ ಹೈಲೈಟ್ಸ್ ಇಲ್ಲಿದೆ.
ಯಾವುದೇ ಸಂದರ್ಭದಲ್ಲಿ, ಯಾವುದೇ ಅಧಿಕಾರಿಗಳ ಬಗ್ಗೆ ರಾಜಕಾರಣಿಗಳು ಮಾತನಾಡುವ ಸಂದರ್ಭದಲ್ಲಿ ಸಾರ್ವಜನಿಕವಾಗಿ ಬೇರೆ ರೀತಿ ಮಾತನಾಡುತ್ತಾರೆ.
ಇನ್ನೂ ಮಹಿಳಾ ಅಧಿಕಾರಿ ಆದ್ರೆ ದೇವರೇ ಗತಿ.
ಆ ಅಧಿಕಾರಿಯ ಹನ್ನೆರಡು ವರ್ಷಗಳ ಸೇವೆಯನ್ನು ನೋಡಿದ್ದೇನೆ.
ಸರ್ಕಾರಿ ಕೆಲಸ ಮಾಡುವಲ್ಲಿ ದಕ್ಷತೆ ಇಲ್ದೆ, ಅಪ್ರಮಾಣಿಕ ಅಧಿಕಾರಿ ನೇಮಕಕ್ಕೆ ವಿರೋಧ ಮಾಡಿದ್ದೆ.
ನಾನು ಎಂಟು ಆರೋಪ ಮಾಡಿದ್ದೆ.
ಅದರಲ್ಲಿ ಅವರದ್ದೆ ಅಧಿಕಾರಿಗಳು ವರದಿ ಕೊಟ್ಟಿದ್ದಾರೆ.
124 ಮಾಡಿ ಅಮಾನತು ಮಾಡಿ, ಲೋಪ ಆಗಿರೋ ಹಣ.
ಅವರಿಂದಲೇ ವಸೂಲಿ ಆಗಬೇಕು ಅಂತಾ.
ಮುಖ್ಯಮಂತ್ರಿ ಹಾಗೂ ಸರ್ಕಾರದ ಕಾರ್ಯದರ್ಶಿಯನ್ನ ಮನವಿ ಮಾಡಿದ್ದೆ.
ನಿರ್ಗಮಿತ ಜಿಲ್ಲಾಧಿಕಾರಿ ವಿರುದ್ಧ ಮತ್ತೊಂದು ಹಗರಣ ಆರೋಪ
ಬಟ್ಟೆ ಬ್ಯಾಗ್ ಖರೀದಿಯಲ್ಲಿ ಅಕ್ರಮ ಆರೋಪ.
ಬಟ್ಟೆ ಬ್ಯಾಗ್ ಖರೀದಿಗೆ ಜಿಎಸ್ಟಿ ಸೇರಿ 9ರೂ.
ಆದರೆ ರೋಹಿಣಿ ಸಿಂಧೂರಿ ಖರೀದಿಸಿರೋ ಒಂದು ಬ್ಯಾಗ್ ಬೆಲೆ 52ರೂ.
ಕೇವಲ ಬ್ಯಾಗ್ ಮೇಲೆ ಪ್ರಿಂಟ್ ಹಾಕಲು 42ರೂ ಬೇಕಾ.!?
ಒಟ್ಟು 14,71,458 ಬಟ್ಟೆ ಬ್ಯಾಗ್ ಖರೀದಿ.
ಈ ಬ್ಯಾಗ್ ಖರೀದಿಯಲ್ಲಿ 6ಕೋಟಿ 18 ಲಕ್ಷ ರೂ ಅಕ್ರಮ.
ವಾಸ್ತವವಾಗಿ ಖರೀದಿಗೆ 1ಕೋಟಿ 47ಲಕ್ಷ ಆಗ್ತಿತ್ತು.
ಅಂಕಿ ಅಂಶಗಳ ಮೂಲಕ ಸಿಂಧೂರಿ ವಿರುದ್ಧ ಅಕ್ರಮ ಆರೋಪ.
ದಾಖಲೆಗಳ ಸಮೇತ ಆರೋಪ ಮಾಡ್ತಿದ್ದೀನಿ.
ಈ ಹಣವನ್ನು ಅವರಿಂದಲೇ ವಸೂಲಿ ಮಾಡಬೇಕು.
ಕ್ರಮ ಆಗಲಿಲ್ಲ ಅಂದ್ರೆ ಮುಖ್ಯ ಕಾರ್ಯದರ್ಶಿಗಳ ಮುಂದೆ ಧರಣಿ ಮಾಡ್ತಿನಿ.
ನಗರಸಭೆ, ಫುರಸಭೆಗೆಲ್ಲಾ ಇವರೇ ಬ್ಯಾಗ್ ಸಪ್ಲೇ ಟೆಂಡರ್ ಅನುಮೋದನೆ ನೀಡಿದ್ರು.
ಯಾಕೆ ನಗರಸಭೆ, ಫುರಸಭೆ ಮೇಲೆ ಇವರಿಗೆ ಇಷ್ಟೋಂದು ಇಂಟ್ರಸ್ಟ್.!?
ಸುದ್ದಿಗೋಷ್ಠಿಯಲ್ಲಿ ಶಾಸಕ ಸಾರಾ ಮಹೇಶ್ ಗಂಭೀರ ಆರೋಪ.
ಬ್ಯಾಗ್ ಸರಬರಾಜು ಮಾಡಿರುವ ಗುತ್ತಿಗೆದಾರ ಅಳುತ್ತಿದ್ದಾನೆ
ಇಂತಹ ಭ್ರಷ್ಟ ಅಧಿಕಾರಿಯನ್ನ ನಾವು ಇಟ್ಕೊಂಡಿದ್ಕೆ ನಾವು ಕ್ಷಮೆ ಕೇಳ್ತೀವಿ.
ಇವರು ನಿಜವಾಗ್ಲೂ ಐಎಎಸ್ ಮಾಡಿದ್ದಾರ.
ಅಥವ ಬೇರೆ ಯಾರದಾದ್ದರೂ ಅಂಕಪಟ್ಟಿ ತಂದು ಐಎಎಸ್ ಪಾಸ್ ಮಾಡಿದ್ರ.
ಐಷರಾಮಿ ಜೀವನ ಮಾಡಲು ನಿಮಗೆ ಸಾರ್ವಜನಿಕರ ಹಣ ಬೇಕೆ.
ಮಹಾ ನಗರ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಬಿಲ್ ತಡೆ ಹಿಡಿದಿದ್ದಾರೆ.
ಮೂರ್ನಾಲ್ಕು ದಿನದಲ್ಲಿ ಮುಖ್ಯ ಕಾರ್ಯದರ್ಶಿ ಕಛೇರಿ ಮುಂದೆ ಧರಣಿ ಕೂರ್ತೀನಿ.
ಅಮರಣಾಂತರ ಉಪವಾಸ ಕೈಗೊಳ್ತಿನಿ.
ಕ್ರಿಮಿನಲ್ ಕೇಸ್ ಬುಕ್ ಮಾಡಿ ತನಿಖೆ ಮಾಡಬೇಕು.
ಇವರು ಎಲ್ಲೆಲ್ಲಿ ಕೆಲಸ ಮಾಡಿದ್ದಾರೆ ಅಲ್ಲಿನ ಭ್ರಷ್ಟಾಚಾರದ ಬಗ್ಗೆ ತನಿಖೆ ಮಾಡಬೇಕು.
ಮುಖ್ಯ ಕಾರ್ಯದರ್ಶಿಗಳೇ ನಿಮ್ಮ ರಕ್ಷಣೆ ಇದೆ ಅಂತ ಊರು ತುಂಬಾ ಹೇಳಿಕೊಂಡು ತಿರುಗಾಡುತ್ತಿದ್ದಾರೆ.
ನಿಮ್ಮ ಮೇಲೆ ನಂಬಿಕೆ ಇದೆ , ಕ್ರಮ ಕೈಗೊಳ್ಳಿ.
ಮೈಸೂರಿನ ಜನ ಒಳ್ಳೆಯ ಅಧಿಕಾರಿ ಗಳಿಗೆ ಕೈ ಮುಗಿತೀವಿ.
ಭ್ರಷ್ಟ ಅಧಿಕಾರಿಗಳಿಗೆ ತಕ್ಕ ಪಾಠ ಆಗಬೇಕು.
ಮೈಸೂರಿನ ಸುದ್ದಿಗೋಷ್ಠಿಯಲ್ಲಿ ಸಾರಾ ಮಹೇಶ್ ಹೇಳಿಕೆ ನೀಡಿದ್ದಾರೆ.