ಮೈಸೂರಿನಲ್ಲಿ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಸಿದ್ದತೆ!
1 min read
ಮೈಸೂರು : ಮೈಸೂರಿನಲ್ಲಿ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂ ಆಗುವ ಕನಸು ಚಿಗುರಿದ್ದು ಇದೀಗಾ ಅದು ನನಸ್ಸಾಗುವತ್ತ ಹಜ್ಜೆ ಇಡುತ್ತಿದೆ. ಇದಕ್ಕಾಗಿ ಇಂದು ಮಹತ್ವದ ಸಭೆ ಆಗಿದ್ದು ಸಭೆಯಲ್ಲಿ ಕ್ರಿಕೆಟ್ ದಿಗ್ಗಜರು ಸಹ ಭಾಗಿಯಾಗಿದ್ದರು.

–ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು ಮೈಸೂರಿನಲ್ಲಿ ನೂತನ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸಲು ಉದ್ದೇಶಿಸಿದ್ದು ಇದರ ಬಗ್ಗೆ ಚರ್ಚೆ ಮಾಡಲು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಹೆಚ್ ವಿ ರಾಜೀವ್ ಹಾಗೂ ಪ್ರಾಧಿಕಾರದ ಹಲವು ಸದಸ್ಯರೊಂದಿಗೆ ಸಭೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ 1983 ರ ವಿಶ್ವಕಪ್ ವಿಜೇತ ತಂಡದ ಸದಸ್ಯರಾದ ಶ್ರೀ ರೋಜರ್ ಬಿನ್ನಿ ಹಾಗೂ ಸಂಸ್ಥೆಯ ಕೆಲವು ಅಧಿಕಾರಿಗಳು ಉಪಸ್ಥಿತರಿದ್ದರು.
