ರೋಹಿಣಿ ಸಿಂಧೂರಿ ವಿರುದ್ಧ 1500 ಪುಟಗಳ ದಾಖಲೆ ಸಲ್ಲಿಸಿದ ಸಾರಾ ಮಹೇಶ್!

1 min read

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮೇಲೆ ಸಾರಾ ಮಹೇಶ್ ಕರ್ತವ್ಯ ಲೋಪ, ಹಣ ದುರುಪಯೋಗ ಆರೋಪ ವಿಚಾರ. ಆರೋಪದ ತನಿಖೆಗೆ ಮೈಸೂರಿಗೆ ಬಂದ ತನಿಖಾಧಿಕಾರಿ IAS ರವಿಶಂಕರ್‌ಗೆ ತನಿಖಾಧಿಕಾರಿಗೆ 1500 ಪುಟಗಳ ದಾಖಲೆ ಸಲ್ಲಿಸಿದ ಸಾರಾ ಮಹೇಶ್. ಬಳಿಕ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಸಾರಾ ಮಹೇಶ್.

ಒಟ್ಟು ಐದು ಪ್ರಕರಣಗಳ‌ ಬಗ್ಗೆ ಆರೋಪ ಮಾಡಿದ್ದೆ. 1.ಬಟ್ಟೆ ಬ್ಯಾಗ್ ಹೆಚ್ಚು ಹಣ ಕೊಟ್ಟ ಖರೀದಿ ಮಾಡಿರೋದು.

  1. ಪಾರಂಪರಿಕ ಕಟ್ಟಡ ವಿರೂಪ ಮಾಡಿ, ಸ್ವಿಮಿಂಗ್ ಫೂಲ್ ಕಟ್ಟಿರೋದು. 3. ನಿರ್ಮಿತಿ ಕೇಂದ್ರದ ಹಣ ದುರುಪಯೋಗ ಮಾಡಿಕೊಂಡಿರೋದು. 4. ಪಾಸಿಟಿವಿಟಿ ಹೆಚ್ಚಿದ್ದರು ಕರೋನಾ ಸಂಖ್ಯೆ ಇಳಿಸಿದ್ದೇನೆಂದು ಸುಳ್ಳು ಹೇಳಿಕೆ ಕೊಟ್ಟಿರೋದು. ಇದರಲ್ಲಿ ಸಾವಿನ ಸಂಖ್ಯೆ ಬಚ್ಚಿಟ್ಟು ಸುಳ್ಳು ಮಾಹಿತಿ ನೀಡಿದ್ದಾರೆ. 5. ಆಕ್ಸಿಜನ್ ದುರಂತದಲ್ಲಿ 32 ಜನರ ಸಾವಿಗೆ ಕಾರಣದ ಬಗ್ಗೆ ದಾಖಲು. ಆಡಿಯೋ, ಮೆಸೇಜ್ ಮಾಡಿರೋ ದಾಖಲೆ ಒದಗಿಸಿದ್ದೇನೆ. ಹೀಗೆ ಐದು ಆರೋಪಗಳ ಬಗ್ಗೆ ಸೂಕ್ತ ಸಾಕ್ಷ್ಯವನ್ನ ತನಿಖಾಧಿಕಾರಿಗೆ ಒದಗಿಸಿದ್ದೇನೆ ಮೈಸೂರಿನಲ್ಲಿ ಸಾರಾ ಮಹೇಶ್ ಹೇಳಿಕೆ‌.

ದಾಖಲೆ ಸಮೇತ ಡಿಸಿ ಕಚೇರಿಗೆ ಬಂದ ಸಾರಾ ಮಹೇಶ್!

ಇನ್ನು 30 ದಿನದಲ್ಲಿ ವಿಚಾರಣೆ ಪ್ರಕ್ರಿಯೆ ಮುಗಿಯುತ್ತದೆ.
ಈ ಪ್ರಕರಣದಲ್ಲಿ ನನ್ನ ಎಲ್ಲಾ ಆರೋಪಕ್ಕು ದಾಖಲೆ ನೀಡಿದ್ದೇನೆ. ಐಎಎಸ್ ಅಧಿಕಾರಿಗೆ ಈ ಪ್ರಕರಣದಿಂದ ಅಮಾನತು ಮಾಡಬೇಕಾಗಿದೆ. ನನಗೆ ತನಿಖೆಯ ಮೇಲೆ ವಿಶ್ವಾಸವಿದೆ‌. ನಾನು ಯಾವ ದುರುದ್ದೇಶದಿಂದಲು ಈ ಆರೋಪಗಳನ್ನ ಮಾಡಿಲ್ಲ. ಐಎಎಸ್ ಅಧಿಕಾರಿ ನನ್ನ ಮೇಲೆ ದುರುದ್ದೇಶದ ಭೂಅಕ್ರಮ ಮಾಡಿದ್ದರು. ಈ ತನಿಖೆಯ ವರದಿ ಬಂದ ಮೇಲೆ ಜನರಿಗೆ ಆ ಅಧಿಕಾರಿಯ ನಿಜ ಬಣ್ಣ ಗೊತ್ತಾಗಲಿದೆ‌. ಆ ಐಎಎಸ್ ಅಧಿಕಾರಿಯ ಬಣ್ಣ ಬಯಲು ಮಾಡುವುದೇ ನನ್ನ ಉದ್ದೇಶ.

About Author

Leave a Reply

Your email address will not be published. Required fields are marked *