ಸಂಸ್ಕೃತ ದೇವಭಾಷೆಯಾಗಿದ್ದು ಎಲ್ಲರೂ ಕಲಿಯಬೇಕು: ಗಣಪತಿ ಸಚ್ಚಿದಾನಂದ ಸ್ವಾಮೀಜಿ ಭಕ್ತರಿಗೆ ಸಲಹೆ
1 min readಮೈಸೂರು: ಸಂಸ್ಕೃತ ದೇವಭಾಷೆಯಾಗಿದ್ದು ಈ ಭಾಷೆಯನ್ನು ಎಲ್ಲರೂ ಕಲಿಯಬೇಕೆಂದು ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ಭಕ್ತರಿಗೆ ಸಲಹೆ ನೀಡಿದರು.
ಚೈತನ್ಯಾರ್ಚನೆಯ ಇಂದಿನ ಕಾರ್ಯಕ್ರಮದಲ್ಲಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿ ನಂತರ ಭಕ್ತರಿಗೆ ಶ್ರೀಗಳು ಆಶೀರ್ವಚನ ನೀಡಿದರು. ಸಂಸ್ಕೃತ ದೇವರ ಭಾಷೆ,ಈ ಭಾಷೆ ಬಹಳ ಸುಂದರವಾಗಿದೆ.ಎಷ್ಟೋ ಅತ್ಯತ್ತಮ ಗ್ರಂಥಗಳು ಈ ಭಾಷೆಯಲ್ಲಿ ಪ್ರಕಟವಾಗಿವೆ.ಇದು ಸಂಗೀತ ಭಾಷೆಯಾಗಿದೆ ಎಂದು ಬಣ್ಣಿಸಿದರು.
ಬೆಳಗಿನ ವೇಳೆ ಆಲ್ ಇಂಡಿಯಾ ರೇಡಿಯೋನಲ್ಲಿ ಸಂಗೀತ ವಾರ್ತೆ ಬರುತ್ತದೆ ಇದನ್ನು ಆಲಿಸಿದರೆ ಇದರಿಂದ ಸಣ್ಣ,ಸಣ್ಣ ಪದಗಳನ್ನು ನಾವು ಕಲಿಯಲು ಸಾಧ್ಯ ಎಂದು ತಿಳಿಸಿದರು ಹಿಂದೆ ಹಲವು ಸಂಸ್ಕೃತ ಭಾಷೆಯ ಪತ್ರಿಗಳು ಇದ್ದವು ಈಗ ಸುಧರ್ಮ ಪತ್ರಿಕೆ ಬಿಟ್ಟರೆ ಬೇರೆ ಯಾವುದೂ ಇಲ್ಲ.ಇಡೀ ನಾಡಲ್ಲಿ ಸಂಸ್ಕೃತ ಭಾಷೆಯಲ್ಲಿ ಪತ್ರಿಕೆ ಇರುವುದು ಸುಧರ್ಮ.ಇದು ನಮ್ಮ ಮೈಸೂರಿನಲ್ಲಿ ಇರುವುದು ಹೆಮ್ಮೆಯ ವಿಷಯ ಎಂದು ಶ್ರೀಗಳು ತಿಳಿಸಿದರು.
ಪ್ರಶಸ್ತಿ ಪಡೆದವರು ನಿಜಕ್ಕೂ ಅವರವರ ವಿದ್ಯೆಯಲ್ಲಿ ಪ್ರವೀಣರು ಎಂದು ಗಣಪತಿ ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿದರು. ಕಿರಿಯ ಶ್ರೀಗಳಾದ ಪೂಜ್ಯ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿಯವರು ಮಾತನಾಡಿ, ಅಪ್ಪಾಜಿಯವರಿಗೆ ಭಾರತ ರತ್ನ ಪ್ರಶಸ್ತಿ ಬರಬೇಕೆಂದು ಭಕ್ತರು ಬಯಸುತ್ತಿದ್ದಾರೆ ,ನಾನೂ ಕೂಡಾ ಅಪ್ಪಾಜಿಯವರಿಗೆ ಶೀಘ್ರ ಭಾರತ ರತ್ನ ಪ್ರಶಸ್ತಿ ಬರಲಿ ಎಂದು ಹಾರೈಸುತ್ತೇನೆ ಎಂದು ನುಡಿದರು.
ಮೇ 26 ಅಪ್ಪಾಜಿಯವರು ಜನಿಸಿದ ದಿನವಾಗಿದೆ.ಇಂದು ಹನುಮಜಯಂತಿಯೂ ಇದೆ.ನಾವು ಹಿರಿಯ ಶ್ರೀಗಳಾದ ಅಪ್ಪಾಜಿಯವರಲ್ಲಿ ಹನುಮನನ್ನು ಕಾಣುತ್ತೇವೆ ಎಂದು ಬಣ್ಣಿಸಿದರು. ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ 80ನೆ ವರ್ಷದ ಜನ್ಮದಿನೋತ್ಸವ ಪ್ರಯುಕ್ತ ಇಂದಿನ ಚೈತನ್ಯಾರ್ಚನೆ ಕಾರ್ಯಕ್ರಮದಲ್ಲಿ ಅವಧೂತ ದತ್ತಪೀಠದ ನಾದನಿಧಿ ಪ್ರಶಸ್ತಿಯನ್ನು ಮೃದಂಗ ವಿದ್ವಾನ್ ಚೆನ್ನೈನ ತಿರುವಾರೂರ್ ಭಕ್ತವತ್ಸಲಂ ಅವರಿಗೆ ನೀಡಿ ಗೌರವಿಸಲಾಯಿತು.
ಆಸ್ಥಾನ ವಿದ್ವಾನ್ ಪ್ರಶಸ್ತಿಯನ್ನು ಕರ್ನಾಟಕ ಸಂಗೀತ ವಿದ್ಟಾನರಾದ ಚನ್ನೈನ ಟ್ರಿಚಿ ಶ್ರೀ ಕೆ. ರಮೇಶ್, ಬೆಂಗಳೂರಿನ ಸಂಗೀತ ವಿದ್ವಾನರಾದ ಡಾ.ಎಂ.ಸೂರ್ಯಪ್ರಸಾದ್,ಮೈಸೂರಿನ ಸಂಸ್ಕೃತ ಪ್ರವೀಣರೂ, ಖ್ಯಾತ ಬರಹಗಾರರಾದ
ಹೆಚ್. ವಿ. ನಾಗರಾಜ ರಾವ್ ಹಾಗೂ ಆಸ್ಥಾನ ವಿದುಷಿ ಪ್ರಶಸ್ತಿಯನ್ನು ಕರ್ನಾಟಕ ಸಂಗೀತ ಪ್ರವೀಣರಾದ ಹೈದರಾಬಾದ್ ನ ಕೆ.ಶೇಷುಲತಾ ಕೊಸುರಿ ಅವರಿಗೆ ನೀಡಿ ಗೌರವಿಸಲಾಯಿತು.
ಪ್ರಾಣಿಬಂಧು ಪ್ರಶಸ್ತಿಯನ್ನು ಮೈಸೂರಿನ ಡಾ.ವಸೀಂ ಮಿರ್ಜಾ ಅವರಿಗೆ ಪ್ರದಾನ ಮಾಡಲಾಯಿತು. ಇದಕ್ಕೂ ಮೊದಲು ಜರ್ಮನಿ ಮತ್ತು ಸ್ವಿಜರ್ಲೆಂಡ್ ನ ಭಕ್ತರಾದ ಶಬರಿ ಮತ್ತು ಜರ್ಮನಿಯ ಬ್ರಹ್ಮ ಅವರು ಹೊರತಂದಿರುವ ಬಾಲದತ್ತಮಾಲಾ ಆನ್ ಲೈನ್ ಯೋಗ ತರಗತಿಯ ಬುಕ್ ಲೆಟ್ ಅನ್ನು ಪೂಜ್ಯ ಸ್ವಾಮೀಜಿಯವರು ಬಿಡುಗಡೆ ಮಾಡಿದರು.
ನಂತರ ಮಚಲಿಪಟ್ಟಣದ ಮಾತೃಮಂಡಲಿಯವರು ಹೊರತಂದಿರುವ ಸುಂದರಕಾಂಡ ತೆಲುಗು ಭಾಷೆಯ ಪರಾಯಣ ಗ್ರಂಥ ಮತ್ತು ಚೆನ್ನೈ ನ ಬೋಧಸಭಾದ ಸುರೇಶ್ ಅವರು ಬರೆದಿರುವ 50 ಗೋಲ್ಡನ್ ಇಯರ್ಸ್ ಆಫ್ ಮೈ ಗುರು ಪುಸ್ತಕವನ್ನು ಶ್ರೀಗಳು ಬಿಡುಗಡೆ ಗೊಳಿಸಿದರು.
ಹನುಮ ಜಯಂತಿ: ಇಂದು ಹನುಮಜ್ಜಯಂತಿ ಪ್ರಯುಕ್ತ ಆಶ್ರಮ ದಲ್ಲಿರುವ ಶ್ರೀ ಕಾರ್ಯಸಿದ್ಧಿ ಆಂಜನೇಯ ದೇವಾಲಯದಲ್ಲಿ ವಿಶೇಷ ಅರ್ಚನೆ, ಹೋಮ ಹಾಗೂ ಶ್ರೀಚಕ್ರಪೂಜೆ ನೆರವೇರಿಸಲಾಯಿತು. ಹನುಮನಿಗೆ ಒಂದು ಲಕ್ಷದ ಎಂಟು ವಡೆಗಳಿಂದ ಅಲಂಕರಿಸಲಾಗಿದ್ದು ಭಕ್ತರು ಕಣ್ ತುಂಬಿಕೊಂಡರು. ಈ ವಡೆಗಳನ್ನು ಸಿದ್ದಪಡಿಸಲು ಚನ್ನೈನಿಂದ ಬಾಣಸಿಗರನ್ನು ಆಶ್ರಮಕ್ಕೆ ಕರೆಸಿದುದು ವಿಶೇಷ.