ಘಟನೆ ನಡೆದ ಬಳಿಕ ದರ್ಶನ್’ಗೆ ನಾನೇ ಬೈದಿದ್ದೇನೆ..! ‘ಸಂದೇಶ್ ದಿ ಪ್ರಿನ್ಸ್’ ಹೋಟೆಲ್ ಮಾಲೀಕ ಹೇಳಿಕೆ
1 min readಮೈಸೂರು: ಸಂದೇಶ್ ದಿ ಪ್ರಿನ್ಸ್ ಹೋಟೆಲ್ ನಲ್ಲಿ ನಟ ದರ್ಶನ್ ಸಿಬ್ಬಂದಿ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೋಟೆಲ್ ಮಾಲೀಕ ಸಂದೇಶ್ ಹೇಳಿಕೆ ನೀಡಿದ್ದು ಘಟನೆಯಿಂದ ನಮಗೂ, ನಮ್ಮ ಹೋಟೆಲ್ ಗೂ ತೊಂದರೆಯಾಗಿದೆ. ಲಾಕ್ ಡೌನ್ ಗೂ ನಾಲ್ಕು ದಿನ ಮುಂಚೆ ಈ ಘಟನೆ ನಡೆದಿದೆ. ಹೊಟೆಲ್ ಸಿಬ್ಬಂದಿ ಮೇಲೆ ಹಲ್ಲೆಯಾಗಿಲ್ಲ. ಸಿಬ್ಬಂದಿಯನ್ನ ಬೈದಿದ್ದು ನಿಜ ಎಂದರು.
ಹೋಟೆಲ್ ಸಿಬ್ಬಂದಿ ಮಹಾರಾಷ್ಟ್ರ ಮೂಲದ ಟ್ರೈನಿ. ಆತ ಹಿಂದಿಯಲ್ಲಿ ಮಾತನಾಡುತ್ತಿದ್ದ, ದರ್ಶನ್ ಕನ್ನಡದಲ್ಲಿ ಮಾತಾಡ್ತಿದ್ದ. ಸರ್ವಿಸ್ ವಿಚಾರದಲ್ಲಿ ನಟ ದರ್ಶನ್ ಸಿಬ್ಬಂದಿಗೆ ಬೈದ ಅಷ್ಟೇ. ಅವತ್ತು ಘಟನೆ ನಡೆದ ದಿನ 20 ಕ್ಕೂ ಹೆಚ್ಚು ಜನ ಇದ್ರು. ಅವತ್ತು ರಾಕೇಶ್ ಪಾಪಣ್ಣ, ಹರ್ಷ, ಪವಿತ್ರ ಗೌಡ ಕೂಡ ಅವತ್ತು ಇರಬಹುದು. ಘಟನೆ ರಾತ್ರಿ 12 ಗಂಟೆಗೆ ನಡೆಯಿತ್ತು. ಆ ವೇಳೆ ದರ್ಶನ್ ಗೂ ನಾನು ಸಮಾಧಾನ ಮಾಡಿದ್ದೇನೆ. ನನ್ನ ಹೋಟೆಲ್ ಸಿಬ್ಬಂದಿ ಆತ ಆತನಿಗೆ ಬೈಯೋದು ಬೇಡ ಅಂತಾ ಸಮಾಧಾನ ಮಾಡಿದ್ದೇನೆ. ನನ್ನ ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ರೆ ನಾನು ಸುಮ್ಮನೆ ಬಿಡ್ತೀನಾ.
ಯಾವ ಹಲ್ಲೆಯೂ ನಡೆದಿಲ್ಲ, ಆದ್ರೆ ಬೈದದ್ದು ನಿಜ. ಹಲ್ಲೆಯಾಗಿದ್ರೆ ನಾನೇ ಪೊಲೀಸರಿಗೆ ಕಂಪ್ಲೈಟ್ ಕೊಡ್ತಿದ್ದೆ. ಸಿಸಿಟಿವಿ ಪುಟೇಜ್ ನಾಶ ಮಾಡುವ ಉದ್ದೇಶ ಇಲ್ಲ. ಹತ್ತು ದಿನಗಳ ವರೆಗೆ ಪುಟೇಜ್ ಇರುತ್ತೆ. ಬಳಿಕ ಅದೇ ರೀಶಫಲ್ ಆಗುತ್ತದೆ ಎಂದರು.
ದರ್ಶನ್ ಜೊತೆಗೆ ಸಂಬಂಧ ಈಗಲೂ ಚೆನ್ನಾಗಿಯೆ ಇದೆ. ಮುಂದೆಯೂ ಸಂಬಂಧ ಚೆನ್ನಾಗಿಯೇ ಇರುತ್ತದೆ. ಅವತ್ತು ಘಟನೆ ನಡೆದ ಬಳಿಕ ದರ್ಶನ್ ಗೆ ನಾನೇ ಬೈದಿದ್ದೇನೆ. ದರ್ಶನ್ ತನ್ನದೇ ಹೋಟೆಲ್ ಅಂತಾ ಅಂದುಕೊಂಡಿದ್ದ. ಹೀಗಾಗಿ ತುಂಬಾ ಆತ್ಮೀಯತೆ ಹೋಟೆಲ್ ಮೇಲಿದೆ. ನಮ್ಮದು ಸರ್ವಿಸ್ ಏರಿಯಾ. ಏನಾದ್ರೂ ಸಮಸ್ಯೆ ಆದ್ರೆ ನಾವು ಬೈಸಿಕೊಳ್ಳಲೇ ಬೇಕು.
ಹದಿನೈದು ದಿನಗಳ ಹಿಂದಷ್ಟೇ ಇಂದ್ರಜಿತ್ ಲಂಕೇಶ್ ಘಟನೆ ಬಗ್ಗೆ ಕೇಳಿದ್ರು. ಇಂದ್ರಜಿತ್ ಲಂಕೇಶ್ ಕೂಡ ನನಗೆ ತುಂಬಾ ಆತ್ಮೀಯರು. ಹಲ್ಲೆಯಾಗಿಲ್ಲ, ಬೈದಿದ್ದು ನಿಜ ಘಟನೆಯನ್ನ ಇಲ್ಲಿಗೆ ಬಿಡಿ ಎಂದಿದ್ದೆ. ಇದ್ರಿಂದ ನಟ ಇಮೇಜ್ ಗೂ ಕೂಡ ದಕ್ಕೆ ಆಗುತ್ತದೆ, ಹೋಟೆಲ್ ಹೆಸ್ರು ಕೂಡ ಹಾಳಾಗುತ್ತದೆ ಎಂದಿದ್ದೆ ಅಂತ ಮೈಸೂರಿನಲ್ಲಿ ಹೋಟೆಲ್ ಮಾಲೀಕ ಸಂದೇಶ್ ಹೇಳಿದ್ದಾರೆ.