ಮೈಸೂರಿನಲ್ಲಿ ಶಾಸಕ ರಾಮದಾಸ್‌ರಿಂದ ಸಂಘಟನ ಮಾಸಕ್ಕೆ ಚಾಲನೆ!

1 min read

ಕೆ.ಆರ್ ಕ್ಷೇತ್ರದಲ್ಲಿ ಜನವರಿ 17 2022 ರಿಂದ ಫೆಬ್ರವರಿ 16 2022 ರ ವರೆಗೆ ಸಂಘಟನಾ ಮಾಸಕ್ಕೆ ಚಾಲನೆ.

ಇಂದು ಕೆ.ಆರ್. ಕ್ಷೇತ್ರದ ವಿದ್ಯಾರಣ್ಯಪುರಂ ನ ಕಚೇರಿಯಲ್ಲಿ ಪಕ್ಷದ ಪದಾಧಿಕಾರಿಗಳ ಸಭೆಯನ್ನು ನಡೆಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮಾನ್ಯ ಶಾಸಕರಾದ ಎಸ್.ಎ.ರಾಮದಾಸ್ ಅವರು ಸಂಘಟನೆಯನ್ನು ಕೆಳ ಮಟ್ಟದದವರಿಗೆ ತೆಗೆದುಕೊಂಡುಹೋಗುವ ದೃಷ್ಟಿಯಿಂದ ಮತ್ತು ಮುಂದಿನ ದಶಕಗಳ ಕಾಲಕ್ಕೆ ಬೇಕಾಗಿರುವಂತಹ ಒಂದು ನಾಯಕತ್ವವನ್ನು ಬೆಳೆಸುವ ದೃಷ್ಟಿಯಿಂದ ಹಾಗೂ ಸಾರ್ವಜನಿಕರು ಸರ್ಕಾರದ ಯೋಜನೆಗಳಲ್ಲಿ, ಕಾರ್ಯಕ್ರಮಗಳಲ್ಲಿ ಸಹಭಾಗಿತ್ವವನ್ನು ಪಡೆಯಬೇಕೆನ್ನುವ ದೃಷ್ಟಿಯಿಂದ
ಪೇಜ್ ಕಮಿಟಿಗಳನ್ನು ರಚನೆ ಮಾಡಲು ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಜೆ.ಪಿ.ನಡ್ಡಾ ಜಿ ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ಅರುಣ್ ಸಿಂಗ್ ಜಿ ಅವರ ಸೂಚನೆಯ ಮೇರೆಗೆ ಕೃಷ್ಣರಾಜ ಕ್ಷೇತ್ರದಲ್ಲಿ ಒಂದು ತಿಂಗಳುಗಳ ಕಾಲ ಸಂಘಟನಾ ಮಾಸವನ್ನು ಆಯೋಜಿಸಬೇಕಾಗಿದೆ ಎಂದರು

ಸಭೆಯಲ್ಲಾದ ನಿರ್ಣಯಗಳು;

ಒಬ್ಬೊಬ್ಬ ನಗರಪಾಲಿಕೆ ಸದಸ್ಯರು ಅವರ ವಾರ್ಡ್ ಅನ್ನು ಬಿಟ್ಟು ಬೇರೆ ವಾರ್ಡಗಳಲ್ಲಿ ಸಂಘಟನಾತ್ಮಕ ಚಟುವಟಿಕೆಯಲ್ಲಿ ಭಾಗವಹಿಸಲು
ನಿರ್ಧರಿಸಿ ಬೇರೆ ಬೇರೆ ವಾರ್ಡ್ ಗಳನ್ನು ಸೂಚಿಸಲಾಯಿತು. ಹಾಗೆಯೇ ಪಕ್ಷದ ಪದಾಧಿಕಾರಿಗಳು ಒಂದೊಂದು ವಾರ್ಡಗಳ ಜವಾಬ್ದಾರಿಯನ್ನು ತೆಗೆದುಕೊಂಡು ಕಾರ್ಯನಿರ್ವಹಿಸುವುದಾಗಿ ನಿರ್ಣಯಿಸಿದರು.

ಅಂತಿಮವಾಗಿ ಪೇಜ್ ಕಮಿಟಿಗಳ ಮೂಲಕವಾಗಿ ಸಾರ್ವಜನಿಕರು
ಹಾಗೂ ಸಮಾಜದ ಬಗ್ಗೆ ಕಾಳಜಿ ಉಳ್ಳವರು ಸರ್ಕಾರದ ಮತ್ತು ಸಮಾಜದ ಕಾರ್ಯಗಳ ಅನುಷ್ಠಾನಕ್ಕೆ ತೊಡಗಿಸಿಕೊಳ್ಳಲು ಇದೊಂದು ಪೂರ್ವಭಾವಿ ಕಾರ್ಯವಾಗಿತ್ತು. ಇದನ್ನು ಯಶಸ್ವಿಯಾಗಿ ಮಾಡುವ ಮುಖಾಂತರ ದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಹಾಗೂ ಮುಖ್ಯಮಂತ್ರಿ ಶ್ರೀ ಬಸವರಾಜ್ ಬೊಮ್ಮಾಯಿ ಅವರ ಯೋಜನೆಗಳ
ಅನುಷ್ಠಾನವನ್ನು ಕಟ್ಟಕಡೆಯ ವರೆಗೆ ತೆಗೆದುಕೊಂಡು ಹೋಗುವ ಒಂದು ಪ್ರಯತ್ನವೆಂದು ತಿಳಿಸಲಾಯಿತು.

ವಿಶೇಷವಾಗಿ ಕೃಷ್ಣರಾಜ ಕ್ಷೇತ್ರವನ್ನು
ಸ್ವಂತ ಮನೆಯ ಕ್ಷೇತ್ರವನ್ನಾಗಿ ಮಾಡುವ ಪ್ರಯತ್ನದಲ್ಲಿ ಹಾಲಿ ಇರುವ 6 ಸಾವಿರ ಮನೆಗಳ ಮಂಜೂರಾತಿಯ ಜೊತೆಗೆ ನಾಲ್ಕು ಸಾವಿರ ಮನೆಗಳ ಮಂಜೂರಾತಿಗಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿರುವುದನ್ನು ಶ್ಲಾಘಿಸಲಾಯಿತು ಹಾಗೂ ಪ್ರಧಾನ ಮಂತ್ರಿಗಳು ಕರ್ನಾಟಕಕ್ಕೆ 18 ಲಕ್ಷ ಮನೆಗಳ ದೊಡ್ಡ ಕೊಡುಗೆಯನ್ನು ಕೊಟ್ಟಿರುವುದನ್ನು ಸಭೆಯಲ್ಲಿ ಮುಕ್ತಕಂಠದಿಂದ ಶ್ಲಾಘಿಸಿ ಕರ್ನಾಟಕದ ಬಗ್ಗೆ ಪ್ರಧಾನಿಗಳಿಗೆ ಇರುವಂತಹ ಪ್ರೀತಿ-ವಿಶ್ವಾಸಕ್ಕೆ ಧನ್ಯವಾದ ಅರ್ಪಿಸಲಾಯಿತು ಹಾಗೂ ಮನವಿ ಸಲ್ಲಿಸಿ ಕೃಷ್ಣರಾಜ ಕ್ಷೇತ್ರಕ್ಕೆ ಇನ್ನೂ 4000 ಮನೆಗಳನ್ನು 18 ಲಕ್ಷ ಮನೆಗಳಲ್ಲಿ ಜೋಡಿಸಲು ಕರ್ನಾಟಕದ ವಸತಿ ಸಚಿವರಲ್ಲಿ ಮನವಿ ಮಾಡಲು ಕೊರಲಾಯಿತು.

ಯೋಜನೆಗಳ ಅನುಷ್ಠಾನದ ದೃಷ್ಟಿಯಿಂದ 2020 ರ ಸೆಪ್ಟೆಂಬರ್ 17ರಂದು ಮೋದಿಯವರ ಹುಟ್ಟುಹಬ್ಬದಲ್ಲಿ ಮೋದಿ @70 ಅಂತ್ಯೋದಯ ಯೋಜನೆಯನ್ನು ಈಗಾಗಲೇ ಮಾಡಲಾಗಿದ್ದು ಇದಕ್ಕೆ ಸಂಬಂಧಿಸಿದಂತೆ ಯೋಜನೆಗಳ ಅನುಷ್ಠಾನ ಹಾಗೂ ಸಮರ್ಥ ಕರ್ನಾಟಕದ ಅಡಿಯಲ್ಲಿ ಎಂಪ್ಲಾಯ್ಮೆಂಟ್ ಜನರೇಶನ್ ಪ್ರೋಗ್ರಾಮ್ ನಾಲ್ಕುದಿನಗಳ
ಎಲ್ಲ ಇಲಾಖೆಗಳ ವರದಿಗಳನ್ನು ಕ್ರೂಡೀಕರಿಸಿ ಒಂದು ಹೊತ್ತಿಗೆಯನ್ನು
ತಯಾರು ಮಾಡಿರುವುದರ ಬಗ್ಗೆ
ಚರ್ಚಿಸಲಾಯಿತು.

ಅಂತಿಮವಾಗಿ ಕೃಷ್ಣರಾಜ ಕ್ಷೇತ್ರವನ್ನು ಸಂಘಟನಾತ್ಮಕವಾಗಿ ರಾಜ್ಯದಲ್ಲಿ ಮೊದಲನೇ ಸ್ಥಾನಕ್ಕೆ ತರಲು ಈ ಒಂದು ಪ್ರಯತ್ನವನ್ನು ಸಂಘಟನಾ ಮಾಸವಾಗಿ ಮಾಡಬೇಕೆಂದು ನಿರ್ಧರಿಸಲಾಯಿತು.

ಸದರಿ ಕಾರ್ಯಕ್ರಮದಲ್ಲಿ ಮೇಯರ್ ಆದ ಶ್ರೀಮತಿ ಸುನಂದಾ ಪಾಲನೇತ್ರ, ನಗರಪಾಲಿಕಾ ಆಡಳಿತ ಪಕ್ಷದ ನಾಯಕರಾದ ಶಿವಕುಮಾರ್, ಕೆ.ಆರ್ ಕ್ಷೇತ್ರದ ಭಾಜಪಾ ಅಧ್ಯಕ್ಷರಾದ ಎಂ.ವಡಿವೇಲು, ಉಪಾಧ್ಯಕ್ಷರಾದ ಎಂ.ಆರ್.ಬಾಲಕೃಷ್ಣ, ದೇವರಾಜೇಗೌಡ, ಸಂತೋಷ್ ಶಂಭು, ಪ್ರಧಾನಕಾರ್ಯದರ್ಶಿಗಳಾದ ಓಂ ಶ್ರೀನಿವಾಸ್, ನಾಗೇಂದ್ರಕುಮಾರ್ , ಬಿ.ಎಲ್.ಎ 1ಆದ ಪ್ರಸಾದ್ ಬಾಬು, ಪಂಚರತ್ನ ಪ್ರಮುಖ್ ಶಿವಪ್ಪ, ಪೇಜ್ ಪ್ರಮುಖರ ಇಂಚಾರ್ಜ್ ಶ್ರೀಮತಿ ನೂರ್ ಫಾತಿಮಾ, ಆಶ್ರಯ ಸಮಿತಿಯ ಉಪಾಧ್ಯಕ್ಷರಾದ ಶ್ರೀಮತಿ ವಿದ್ಯಾ ಅರಸ್, ನಗರಪಾಲಿಕಾ ಸದಸ್ಯರಾದ ಶ್ರೀಮತಿ ಛಾಯಾದೇವಿ, ಶ್ರೀ ಬಿ.ವಿ.ಮಂಜುನಾಥ್, ಶ್ರೀಮತಿ ಶಾಂತಮ್ಮ ವಡಿವೇಲು, ಶ್ರೀಮತಿ ಸೌಮ್ಯ ಉಮೇಶ್ , ಶ್ರೀಮತಿ ಚಂಪಕ, ಶ್ರೀಮತಿ ಗೀತಾಶ್ರೀ ಯೋಗಾನಂದ್, ಶ್ರೀಮತಿ ಶಾರದಮ್ಮ ಈಶ್ವರ್, ಶ್ರೀ ಮಾ.ವಿ.ರಾಮಪ್ರಸಾದ್, ಶ್ರೀಮತಿ ಡಾ.ರೂಪ , ಪಕ್ಷದ ಪದಾಧಿಕಾರಿಗಳು ಹಾಜರಿದ್ದರು.

About Author

Leave a Reply

Your email address will not be published. Required fields are marked *