ಗಣರಾಜ್ಯೋತ್ಸವ ಪ್ರಯುಕ್ತ ಜಿಲ್ಲಾ‌ ಮಟ್ಟದ ಭಾಷಣ ಸ್ಪರ್ಧೆ: ಸರಗೂರಿನ ಚಿನ್ಮಯಿಗೆ ಪ್ರಥಮ ಬಹುಮಾನ

1 min read

ಮೈಸೂರು,ಜ.28-ಗಣರಾಜ್ಯೋತ್ಸವ ಪ್ರಯುಕ್ತ ಪರಿಸರ ಸ್ನೇಹಿ ತಂಡ ಮತ್ತು ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ‘ನಮ್ಮ ಸಂವಿಧಾನ- ಅಭಿವೃದ್ಧಿಗೆ ಸೋಪಾನ ಭಾರತದ ಸಂವಿಧಾನ’ ಕುರಿತು ನಡೆಸಿದ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಸರಗೂರಿನ ವಿದ್ಯಾರ್ಥಿ ಚಿನ್ಮಯಿ ಪ್ರಥಮ ಬಹುಮಾನ ಗಳಿಸಿದ್ದಾರೆ.
8ವರ್ಷದಿಂದ 18ವರ್ಷದ ಯುವಕ ಯುವತಿಯರಿಗೆ ಆನ್ ಲೈನ್ ಭಾಷಣ ಸ್ಪರ್ಧೆಯಲ್ಲಿ 3ನಿಮಿಷದ ವಿಡಿಯೋಗಳನ್ನು ಕಳುಹಿಸಿಕೊಡಲಾಗಿತ್ತು.‌ ಸ್ಪರ್ಧೆಯಲ್ಲಿ 80 ಮಂದಿ ಭಾಗಿಯಾಗಿದ್ದರು. ಸ್ಪರ್ಧಿಗಳ ಭಾಷಾಶೈಲಿ, ಸಂವಹನ ಕೌಶಲ್ಯ, ಸ್ಪಷ್ಟತೆಯ ಆಧಾರದ ಮೇಲೆ ವಿಜೇತರನ್ನು ಆಯ್ಕೆ ಮಾಡಲಾಗಿದೆ.


ಸರಗೂರಿನ ಚಿನ್ಮಯಿಗೆ ಪ್ರಥಮ ಬಹುಮಾನ, ಕೆ.ಆರ್.ನಗರದ ಸುಚಿತ್ರಗೆ ದ್ವಿತೀಯ ಬಹುಮಾನ, ಮೈಸೂರಿನ ದೀಪಾ ನಗರದ ಎಂ.ಅರ್ಜುನ್ ಗೆ ತೃತೀಯ ಬಹುಮಾನ, ಪಿರಿಯಾಪಟ್ಟಣದ ಅಪೂರ್ವಗೆ ಸಮಾಧಾನಕರ ಬಹುಮಾನ ಪಡೆದುಕೊಂಡಿದ್ದಾರೆ.
ನಗರದ ಚಾಮುಂಡಿಪುರಂ ಅಪೂರ್ವ ಹೋಟೆಲ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಗಿದೆ.
ವಿಜೇತರಿಗೆ ಟ್ರೋಫಿ ಹಾಗೂ ಭಾಗವಹಿಸಿದ ಇತರೆ ಎಲ್ಲ 80 ಮಂದಿಗೆ ಪ್ರಮಾಣ ಪತ್ರ, ನೆನಪಿನ ಕಾಣಿಕೆ ವಿತರಿಸಲಾಯಿತು.
ವಿಜೇತರಿಗೆ ನಗದು ಬಹುಮಾನ ರೂಪದಲ್ಲಿ ಕ್ರಮವಾಗಿ 3,000 ರೂ., 2,000 ರೂ. ಹಾಗೂ 1,000 ರೂ. ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮಡಿಕೇರಿ ಗೋಪಾಲ್ ಅವರು, ಗಣರಾಜ್ಯೋತ್ಸವ ಪ್ರಯುಕ್ತ ಭಾಷಣ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ಕೌಶಲ, ನಾಯಕತ್ವ ಪ್ರದರ್ಶಿಸಲು ಯುವಕರಿಗೆ ಅವಕಾಶ ಒದಗಿಸುವುದು ಹಾಗೂ ರಾಷ್ಟ್ರ ನಿರ್ಮಾಣ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸುವುದು ಭಾಷಣ ಸ್ಪರ್ಧೆಯ ಉದ್ದೇಶವಾಗಿತ್ತು.
‘ಸಂವಿಧಾನದ ಆಶಯದಿಂದ ಪ್ರಗತಿ’ ಸಮಾನತೆ, ಭ್ರಾತೃತ್ವ ಮತ್ತು ಜಾತ್ಯಾತೀತ ರಕ್ಷಿಸುವುದು ಸಂವಿಧಾನದ ಮುಖ್ಯ ಆಶಯವಾಗಿದೆ. ಇವುಗಳು ಸಂಪೂರ್ಣ ಜಾರಿಗೆ ಬಂದಲ್ಲಿ ಮಾತ್ರ ದೇಶ ಪ್ರಗತಿಪಥದಲ್ಲಿ ಮುನ್ನಡೆಯಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ನ ಮಾಜಿ ಅಧ್ಯಕ್ಷರಾದ ಡಾಕ್ಟರ್ ವೈ.ಡಿ.ರಾಜಣ್ಣ, ಕಾಂಗ್ರೆಸ್ ಯುವ ಮುಖಂಡ ಎನ್. ಎಂ.ನವೀನ್ ಕುಮಾರ್, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಸಿ. ಜಿ.ಗಂಗಾಧರ್, ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಕೆ.ಆರ್.ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ ,ವಿದ್ಯಾರಣ್ಯ ಟ್ರಸ್ಟ್ ಅಧ್ಯಕ್ಷರಾದ ರವಿಶಂಕರ್, ಮಹಿಳಾ ಸಂಘಟನೆ ಮುಖ್ಯಸ್ಥರಾದ ನಾಗಮಣಿ, ಪಶು ವೈದ್ಯರಾದ ಮೋಹನ್ ಕುಮಾರ್, ಪರಿಸರ ಸ್ನೇಹಿ ಬಳಗದ ಅಧ್ಯಕ್ಷ ಲೋಹಿತ್ ,ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ , ಸುಚೇಂದ್ರ, ಚಕ್ರಪಾಣಿ, ರಾಕೇಶ್ ಕುಂಚಿಟಿಗ , ಮಂಜುನಾಥ್ ಇತರರು ಹಾಜರಿದ್ದರು.

About Author

Leave a Reply

Your email address will not be published. Required fields are marked *