ಮೈಸೂರಿನ ವಿದ್ಯಾರಣ್ಯಪುರಂ ಠಾಣೆ ಕ್ರೈಂ ಮುಕ್ತವಾಗಿಸಲು ಶುರುವಾಯ್ತು ಕೆಲಸ!
1 min readಮೈಸೂರು : ಇಂದು ಮೈಸೂರಿನ ಕೆ.ಆರ್ ಕ್ಷೇತ್ರದ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಶಾಸಕ ಎಸ್.ಎ.ರಾಮದಾಸ್ ಅವರ ನೇತೃತ್ವದಲ್ಲಿ ಕ್ರೈಮ್ ಮುಕ್ತ ಕ್ಷೇತ್ರ ಹಾಗೂ ಜನಸ್ನೇಹಿ ಪೊಲೀಸ್ ಠಾಣೆಯನ್ನಾಗಿ ಪರಿವರ್ತನೆ ಮಾಡುವ ದೃಷ್ಟಿಯಿಂದ ಸಭೆ ನಡೆಸಿದರು.
ಮೊದಲು ಶಾಸಕರು ಪೊಲೀಸ್ ಸಿಬ್ಬಂದಿಗೆ ಉಪಹಾರ ಬಡಿಸಿ ಅವರೊಂದಿಗೆ ಉಪಹಾರ ಸೇವಿಸಿದರು ನಂತರ ಪ್ರತಿಯೊಬ್ಬ ಪೊಲೀಸ್ ಸಿಬ್ಬಂದಿಯ ಪರಿಚಯವ ಮಾಡಿಕೊಂಡು ಅವರ ಕುಟುಂಬದ ಬಗ್ಗೆ ವಿಚಾರಿಸಿದರು.
ನಂತರ ಮಾತನಾಡಿದ ಶಾಸಕ ಎಸ್.ಎ.ರಾಮದಾಸ್, ಇವತ್ತು ಎಲ್ಲರೂ ಸೇರಿರುವುದು ಒಂದು ಸಭೆಯಷ್ಟೇ ಅಲ್ಲ ಸಿಬ್ಬಂದಿಗಳ ಹಾಗೂ ಅವರ ಕುಟುಂಬಗಳ ಪರಿಚಯ ಮಾಡಿಕೊಂಡು ಶಾಸಕರು ಹಾಗೂ ಸಿಬ್ಬಂದಿಗಳ ನಡುವೆ ಯಾವುದೇ ಅಂತರವಿಲ್ಲದೆ ಆತ್ಮೀಯತೆ ಬೆಳಸಿಕೊಳ್ಳುವ ಉದ್ದೇಶವಾಗಿದೆ. ವೃತ್ತಿಗೆ ಕೆಲವರು By Choice ಅಥವಾ By Chance ಬಂದಿರುತ್ತಾರೆ. ವಿದ್ಯಾರಣ್ಯಪುರಂ ಠಾಣೆಯಲ್ಲಿ ಬಹುತೇಕ ಸಿಬ್ಬಂದಿಗಳು ಇಚ್ಚೆಯಿಂದ By Choice ಇಂದ ಬಂದಿರುವುದು ಸಂತೋಷದ ವಿಷಯ. ನಾನು ರಾಜಕಾರಣಕ್ಕೆ ಬಂದಿದ್ದು By chance ಆಗಿ, ಆದರೇ ನನಗೆ ನನ್ನ ತಂದೆಯಂತೆ ಒಬ್ಬ ಮಿಲಟರಿ ಅಧಿಕಾರಿಯಾಗಬೇಕೆನ್ನುವ ಇಚ್ಚೆಯಿತ್ತು. By Chance ಆಗಲೀ By Choice ಆಗಲೀ ನಮ್ಮ ಕೆಲಸದಲ್ಲಿ ಯಾವತ್ತೂ ಆಸಕ್ತಿ ಕಡಿಮೆಯಾಗಬಾರದು. ನಮ್ಮಿಂದ ಮತ್ತೊಬ್ಬರಿಗೆ ಹೇಗೆ ಸಹಾಯವಾಗಲಿದೆ ಎನ್ನುವ ಚಿಂತನೆ ಯಾವಾಗಲು ಬರಬೇಕು. ಈ ನಿಟ್ಟಿನಲ್ಲಿ ನಮ್ಮ ಕ್ಷೇತ್ರದ ವ್ಯಾಪ್ತಿಗೆ ಬರುವ 8 ಠಾಣೇಗಳಲ್ಲಿ ವಿದ್ಯಾರಣ್ಯಪುರಂ ಠಾಣೆಯನ್ನೇ ಆಯ್ಕೆ ಮಾಡಿಕೊಂಡು ಇಡೀ ರಾಜ್ಯದಲ್ಲೇ ಪ್ರಥಮವಾಗಿ ಶೂನ್ಯ ಅಪರಾದ ಠಾಣೆಯಾಗಿ ಪರಿವರ್ತಿಸಲು ಮುಂದಿನ 1 ವರ್ಷಗಳ ಕಾಲ ಶ್ರಮವಹಿಸಲು ತೀರ್ಮಾನಿಸಲಾಗಿದೆ ಹಾಗೂ ಜನ ಸ್ನೇಹಿ ಪೊಲೀಸ್ ಯೋಜನೆಯಡಿಯಲ್ಲಿ ಸಾರ್ವಜನಿಕರೊಂದಿಗೆ ಸಂಬಂಧ ಉತ್ತಮವಾಗುವಂತೆ ಕಾರ್ಯನಿರ್ವಹಿಸಬೇಕೆಂದು ತಿಳಿಸಿದರು.
ಬೀಟ್ ಪೊಲೀಸ್ ಗಳಿಗೆ ಒಬ್ಬೊಬ್ಬರಿಗೆ ಸುಮಾರು 300 ರಿಂದ 500 ಮನೆಗಳ ಜವಾಬ್ದಾರಿಯಿದ್ದು ದಿನನಿತ್ಯ ಮೂರು ಪಾಳಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ, ನನಗೆ ನನ್ನ ಕ್ಷೇತ್ರವೇ ನನಗೆ ನನ್ನ ರಾಜ್ಯ ನನ್ನ ದೇಶ ಹೀಗೆ ವಿದ್ಯಾರಣ್ಯಪುರಂ ಠಾಣೆಯ ಇನ್ಸ್ಪೆಕ್ಟರ್ ಆದ ರಾಜು ರವರಿಗೆ 5 ವಾರ್ಡ್ ಜವಾಬ್ದಾರಿಯಿದೆ ಕಾನ್ಸ್ಟೆಬಲ್ ಗೆ ಸುಮಾರು 300 ರಿಂದ 500 ಮನೆಗಳ ಜವಾಬ್ದಾರಿಯಿದೆ ಇದೇನಿಮಗೆ ರಾಜ್ಯ ಇದೇ ನಿಮಗೆ ದೇಶವೆಂದು ತಿಳಿದು ನಿಮ್ಮ ವ್ಯಾಪ್ತಿಗೆ ಬರುವ ಪ್ರದೇಶದಲ್ಲಿ ಅಪರಾಧ ಮುಕ್ತವಾಗಿಸಲು ತಮಗೆ ಪೂರ್ಣ ಸ್ವತಂತ್ರವಿರುತ್ತದೆ. ವಿದ್ಯಾರಣ್ಯಪುರಂ ಠಾಣೆಯನ್ನ ಅಪರಾಧ ಮುಕ್ತ ಠಾಣೆ ಮಾಡಲು ಶ್ರಮವಹಿಸಬೇಕು. ನಾನು ಮೊದಲ ಬಾರಿ ಶಾಸಕನಾಗಿ ಆಯ್ಕೆಯಾದಾಗ ಅಂದು ಬಹಳ ಚಿಕ್ಕ ವಯಸ್ಸಿನ ಶಾಸಕನಾಗಿದ್ದೆ ವಿಜಯವಾಗಿದೆ ಎಂದು ಘೋಶಿಸಿದ ಬಳಿಕ ನಮ್ಮ ತಂದೆ ಮತ್ತು ತಾಯಿ ಜೊತೆಗಿದ್ದರು ಆಗ ನನ್ನ ತಾಯಿ ಯಾವತ್ತು ಒಂದು ರುಪಾಯಿ ಲಂಚ ಸ್ವೀಕರಿಸದೇ ಪವಿತ್ರವಾಗಿ ನಡೆದುಕೊಳ್ಳಬೇಕು ಆದರೇ ಯಾವತ್ತು ನಿನ್ನ ಕೈಯಲ್ಲಿ ಆಗುವುದಿಲ್ಲವೋ ಅಂದು ರಾಜಕೀಯದಿಂದ ನಿವೃತ್ತಿ ಪಡೆಯಬೇಕೆಂದು ತಿಳಿಸಿದ್ದಾರೆ.
ಕೆಲವು ಬಾರಿ ಒಬ್ಬ ಸಣ್ಣ ವ್ಯಕ್ತಿಯಿಂದ ನಮಗೆ ಕಲಿಯುವುದು ಇರತ್ತೆ ಹೀಗೆ ಸಾರ್ವಜನಿಕರು ಸಲಹೆಗಳನ್ನು ಸ್ವೀಕರಿಸಬೇಕು. ನಿಮ್ಮ ಸಲಹೆ ಆದಾರವಾಗಿಟ್ಟುಕೊಂಡು ಅದನ್ನು ಸಾಕಾರಗೊಳಿಸುವ ಜವಾಬ್ದಾರಿ ನಮಗಿರುತ್ತದೆ. ಠಾಣಾ ವ್ಯಾಪ್ತಿಗೆ ಬರುವ ಚಿನ್ನ ಬೆಳ್ಳಿ ಅಂಗಡಿಗಳು, ಸೈಬರ್ ಸೆಂಟರ್ಗಳು, ಬಾರ್, ವೈನ್ ಸ್ಟೋರ್ ಗಳು, ಹೀಗೆ ಪಟ್ಟಿ ಮಾಡಿಕೊಂಡು ಕಾನೂನು ಬಾಹಿರ ಚಟುವಟಿಕೆಗಳು ಆಗದಂತೆ ನೋಡಿಕೊಳ್ಳಲು ಯೋಜನೆ ರೂಪಿಸಿ. ಎಲ್ಲೆಲ್ಲಿ ಸಿಸಿಟಿವಿ ಅಳವಡಿಸಬೇಕು ಎಂದು ಪಟ್ಟಿ ಮಾಡಿಕೊಡಲು ಶಾಸಕರು ತಿಳಿಸಿದರು.
ಮನೆಗಳಿಗೆ ಸ್ಟಿಕರ್ ಅಂಟಿಸಿದ ಮೇಲೆ ಯಾವುದಾದರು ಬದಲಾವಣೆಯಿದಯೇ ಎಂದು ಸಿಬ್ಬಂದಿಗಳಲ್ಲಿ ವಿಚಾರಿಸಿದಕ್ಕೆ ಜನರ ಮತ್ತು ಸಾರ್ವಜನಿಕರ ನಡುವೆ ಉತ್ತಮ ಸಂಬಂಧ ಮೂಡಿದೆ, ಸಿಬ್ಬಂದಿಗಳಿಗೆ ಹೆಚ್ಚಿನ ಜವಾಬ್ದಾರಿ ಬಂದಿರುತ್ತದೆ, ಎಲ್ಲಾದರು ಕಾನೂನು ಬಾಹಿರ ಚಟುವಟಿಕೆ ನಡೆದರೆ ಸಾರ್ವಜನಿಕರಿಂದ ನೇರವಾಗಿ ಹಾಗು ತಕ್ಷಣದಲ್ಲಿ ಮಾಹಿತಿ ಬರುತ್ತದೆ ಇದರಿಂದ ಆಗುವ ಅನಾಹುತ ತಡೆಯಬಹುದು ಎಂದು ಸಿಬ್ಬಂದಿಗಳು ತಮ್ಮ ಅಭಿಪ್ರಾಯ ತಿಳಿಸಿದರು.
ಮೋದಿ ಯುಗೋತ್ಸವದಲ್ಲಿ ನಡೆದ ಕಾರ್ಯಕ್ರಮಗಳನ್ನು ಮಾದರಿಯಾಗಿ ಇಟ್ಟುಕೊಂಡು ಇವತ್ತು ರಾಜ್ಯದಲ್ಲಿ ಹಲವಾರು ಶಾಸಕರು ತಮ್ಮ ತಮ್ಮ ಕ್ಷೇತ್ರದಲ್ಲಿ ಪ್ರಾರಂಭಿಸಿದ್ದಾರೆ, ಹೀಗೆ ಜನಸ್ನೇಹಿ ಪೊಲೀಸ್ ಠಾಣೆಯನ್ನಾಗಿಸುವ ಜವಾಬ್ದಾರಿ ತಮ್ಮ ಮೇಲೆ ಇರುತ್ತದೆ. ನಿಮ್ಮ ಪೊಲೀಸ್ ಠಾಣೆ ರಾಜ್ಯದಲ್ಲೇ ಮಾದರಿಯಾಗಬೇಕು ಇದನ್ನು ಸಾಕಾರಗೋಳಿಸಲು ಎಲ್ಲರೂ ಶ್ರಮಿಸೋಣ, ಜನರಲ್ಲಿ ವಿಶ್ವಾಸ ಮೂಡಿಸುವಂತ, ಪೊಲೀಸ್ ಇಲಾಖೆಯನ್ನು ಪ್ರೀತಿಯಿಂದ ಸ್ವೀಕರಸಲು ದುಡಿಯೋಣ ಎಂದು ತಿಳಿಸಿದರು.
ನಂತರ ಇನ್ ಸ್ಪೆಕ್ಟರ್ ರಾಜು ರವರು ಮಾತನಾಡಿ ಠಾಣಾ ವ್ಯಾಪ್ತಿಗೆ ಬರುವ ಎಲ್ಲಾ ಪ್ರದೇಶದಲ್ಲಿ ರೌಡಿಸಂ ಅನ್ನು ಕಡಿವಾಣ ಹಾಕಲು ಈಗಾಗಲೇ ಹಲವಾರು ಕ್ರಮ ಕೈಗೊಂಡಿದ್ದು ಬೇರು ಸಹಿತ ಕಿತ್ತು ಹಾಕಲಿದ್ದೇವೆ ಎಂದು ತಿಳಿಸಿದರು. ಖಾಲಿ ಜಾಗಗಳಲ್ಲಿ ಉದ್ಯಾನವನದಲ್ಲಿ ಆಲ್ಕೋಹಾಲ್ ಸ್ವೀಕರಿಸುವುದು ಸರ್ವೇ ಸಾಮಾನ್ಯವಾಗಿತ್ತು ಇದನ್ನು ತಡೆಯುವ ದೃಷ್ಠಿಯಿಂದ ಕಳೆದ ವಾರದಿಂದ ಕ್ರಮ ಕೈಗೊಳ್ಳಲಾಗಿದ್ದು ಅಂತವರನ್ನು ನೇರವಾಗಿ ಠಾಣೆಗೆ ಕರೆತಂದು ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ಯಾವುದಾದರೂ ಇಲಾಖೆ ವರ್ಷದ 365 ದಿನ ರಜೆ ತೆಗೆದುಕೊಳ್ಳದೇ ಕೆಲಸ ಮಾಡುತ್ತದೆ ಎಂದರೆ ಅದು ಪೊಲೀಸ್ ಇಲಾಖೆ. ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸಿ ಅವರೊಂದಿಗೆ ಒಳ್ಳೆ ಸಂಬಂಧ ಬೆಳಿಸಿಕೊಂಡು ನಮ್ಮ ಠಾಣೆ ಕಾರ್ಯ ನಿರ್ವಹಿಸಲಿದೆ. ಕ್ಷೇತ್ರದ ಶಾಸಕರಾದ ನೀವು ನಮ್ಮ ಮೇಲೆ ಇಟ್ಟಿರುವ ವಿಶ್ವಾಸವನ್ನು ನಾವು ಉಳಿಸಿಕೊಂಡು ಜನಸ್ನೇಹಿ ಪೊಲೀಸ್ ಯೋಜನೆಯನ್ನು ಯಶಸ್ವಿಗೊಳಿಸುತ್ತೇವೆ. ಈಗಾಗಲೇ ಬೀಟ್ ಗಳನ್ನು ಹೆಚ್ಚಿಸಿದ್ದು ಹಲವಾರು ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದವೋ ಅದನೆಲ್ಲಾ ತ್ವರಿತವಾಗಿ ಕ್ರಮಕೈಗೊಂಡಿರುವುದರಿಂದ ಜನರಲ್ಲಿ ವಿಶ್ವಾಸ ಮೂಡಿಸಿದ್ದೇವೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸಿಬ್ಬಂಧಿಗಳ ಪರಿಚಯ ಮಾಡುವಾಗ ವರ್ಗಾವಣೆ ಮಾಡಲು ಈಗಿನ ಪ್ರಕಾರ 7 ವರ್ಷಗಳಾಗಬೇಕೆಂದು ಕಾನೂನನ್ನ ಬದಲಾಯಿಸಿ ಅದನ್ನು 5 ವರ್ಷಕ್ಕೆ ಇಳಿಸಬೇಕೆಂದು ಹಾಗೂ ಔರದ್ಕರ್ ವರದಿ ಜಾರಿ ಮಾಡುವಂತೆ ಸಿಬ್ಬಂದಿ ವರ್ಗದಿಂದ ಕೋರಿದರು. ಸದರಿ ಕಾರ್ಯಕ್ರಮದಲ್ಲಿ ನಗರಪಾಲಿಕಾ ಸದಸ್ಯರಾದ ಶ್ರೀಮತಿ ಶಾಂತಮ್ಮ ವಡಿವೇಲು, ಶ್ರೀಮತಿ ಶಾರದಮ್ಮ ಈಶ್ವರ್, ASI ರಂಗಸ್ವಾಮಿ, ಕೆ.ಆರ್ ಕ್ಷೇತ್ರದ ಅಧ್ಯಕ್ಷರಾದ ಎಂ.ವಡಿವೇಲು, ಪ್ರ.ಕಾರ್ಯದರ್ಶಿ ಜೆ.ನಾಗೇಂದ್ರಕುಮಾರ್, ಈಶ್ವರ್, ಜೆ.ರವಿ ದೇವರಾಜೇ ಗೌಡರು, ಮುರುಳಿ, ಶಿವಪ್ಪ, ಸಂತೋಷ್, ಮನುಶೈವ (ಅಪ್ಪಿ) ಇನ್ನಿತರರು ಹಾಜರಿದ್ದರು.