ಮೈಸೂರಿನ ಕಾಂಗ್ರೆಸ್ ಭವನದಲ್ಲಿ ರಾಜೀವ್ ಗಾಂಧಿ ಅವರ ಪುಣ್ಯಸ್ಮರಣೆ
1 min read
ಮೈಸೂರು: ಭಾರತ ದೇಶದ ಸರ್ವಾಂಗೀಣ ಅಭಿವೃದ್ಧಿಗಾಗಿ ದುಡಿದು, ತಮ್ಮ ಪ್ರಾಣವನ್ನೇ ತೆತ್ತ ಮಹಾನ್ ಆದರ್ಶ ನಾಯಕರು, ರಾಷ್ಟ್ರದ ಮಾಜಿ ಪ್ರಧಾನಿಗಳಾದ ದಿವಂಗತ ಶ್ರೀ ರಾಜೀವ್ ಗಾಂಧಿ ಯವರ ಪುಣ್ಯಸ್ಮರಣೆ ಮೈಸೂರು ನಗರದ ಇಂದಿರಾಗಾಂಧಿ ಕಾಂಗ್ರೆಸ್ ಭವನದಲ್ಲಿ ಜರುಗಿತು.
ನಗರಾಧ್ಯಕ್ಷರಾದ ಆರ್ ಮೂರ್ತಿ,ಜಿಲ್ಲಾಧ್ಯಕ್ಷರಾದ ಡಾ.ಬಿ.ಜೆ.ವಿಜಯ್ ಕುಮಾರ್,ಮಾಜಿ ಸಚಿವರೂ ಶಾಸಕರೂ ಆದ ಶ್ರೀ ತನ್ವೀರ್ ಸೇಠ್,ಮಾಜಿ ಶಾಸಕರುಗಳಾದ ಶ್ರೀ ಎಂ ಕೆ ಸೋಮಶೇಖರ್ ,ಶ್ರೀ ವಾಸು,ಕೆಪಿಸಿಸಿ ವಕ್ತಾರರಾದ ಲಕ್ಷ್ಮಣ್,ಉಪಾಧ್ಯಕ್ಷರಾದ ಡಾ.ರಾಜಾರಾಂ,ಪ್ರಧಾನ ಕಾರ್ಯದರ್ಶಿ ಶಿವಣ್ಣ,ಸೇವಾದಳ ಗಿರೀಶ್,ಪ್ರಚಾರ ಸಮಿತಿ ಅಶೋಕ್,ಪುಷ್ಪವಲ್ಲಿ,ಡೊನಾಲ್ಡ್,ನಿರಾಲ್ ಶಾ,ಶಿವಪ್ರಸಾದ್,ಕವಿತ ಕಾಳೆ,ಲೋಕೇಶ್ ಮಾದಾಪುರ,ರೋಹಿತ್ ಮತ್ತಿತರ ಕಾಂಗ್ರೆಸ್ ನಾಯಕರು,ಕಾರ್ಯಕರ್ತರು ಉಪಸ್ಥಿತರಿದ್ದರು.
