ಮೈಸೂರಿನ ರೈತಪರ ಹೋರಾಟಗಾರ ಕೊರೊನಾಗೆ ಬಲಿ
1 min readಮೈಸೂರು: ಆತ ರೈತ ಸಂಘದ ಕಳಶ’ ರೈತಪರ ಹೋರಾಟ ಅಂದರೆ ಸದಾ ಮುಂಚೂಣಿಯಲ್ಲಿರುವ ನಾಯಕ. ಇಂತಹ ಧೀಮಂತ ನಾಯಕನನ್ನ ಇವತ್ತು ಕರೋನಾ ಹೆಮ್ಮಾರಿ ತನ್ನ ಒಡಿಲಿಗೆ ಸೇರಿಸಿಕೊಂಡಿದೆ.
ಕೆ.ಆರ್.ನಗರ ತಾಲೂಕಿನ ರಾಜ್ಯ ಕಬ್ಬು ಬೆಳೆಗಾರರ ಸಂಘದ ಪ್ರಧಾನ ಕಾರ್ಯದರ್ಶಿ, ರೈತಪರ ಹೋರಾಟಗಾರ, 44 ವರ್ಷಸ ಸುನಯ್ ಗೌಡ ಕೋವಿಡ್‌ಗೆ ಬಲಿಯಾಗಿದ್ದಾರೆ. ಇತ್ತಿಚ್ಚಿಗೆ ನಿರಂತರವಾಗಿ ಕೆ.ಆರ್.ನಗರದ ಚುಂಚನಕಟ್ಟೆ ಶ್ರೀರಾಮ ಸಕ್ಕರೆ ಕಾರ್ಖಾನೆ ಪುನರಾಂಭಿಸುವಂತೆ ನಿತ್ಯ ಹೋರಾಟ ಮಾಡುತ್ತಿದ್ದ ಹಳೇಮಿರ್ಲೆ ಸುನಯ್ ಗೌಡ, ಅನಾರೋಗ್ಯಕ್ಕೆ ಒಳಗಾಗಿದ್ರು. ಆದರೆ ಅದು ಕೋವಿಡ್ ಎಂದು ತಿಳಿದು ಚಿಕಿತ್ಸೆ ಪಡೆಯುವ ವೇಳೆಯೇ ಕೋವೀಡ್ ಗೆ ಬಲಿಯಾಗಿದ್ದಾರೆ.