ರೈಲ್ವೆ ವಸ್ತು ಸಂಗ್ರಹಾಲಯದ ದೀಪಾಲಂಕಾರ,ಕೆಲಸದ ಸಮಯ ವಿಸ್ತರಣೆ
1 min readಮೈಸೂರು,ಅ.5- ಸಾರ್ವಜನಿಕರ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ದಸರಾ ಹಬ್ಬದ ಸಮಯದಲ್ಲಿ ಮೈಸೂರು ರೈಲ್ವೆ ವಸ್ತು ಸಂಗ್ರಹಾಲಯದ ದೀಪಾಲಂಕಾರ ಹಾಗೂ ಕೆಲಸದ ಸಮಯವನ್ನು ವಿಸ್ತರಣೆ ಮಾಡಲಾಗಿದೆ.
ಅ.7 ರಿಂದ 15 ರವರೆಗೆ ದೀಪಾಲಂಕಾರಗಳೊಂದಿಗೆ ಮೈಸೂರು ರೈಲ್ವೆ ವಸ್ತು ಸಂಗ್ರಹಾಲಯದ ಕೆಲಸದ ಸಮಯವನ್ನು 2 ಗಂಟೆಗಳವರೆಗೆ ವಿಸ್ತರಿಸಲಾಗುವುದು ಎಂದು ನೈಋತ್ಯ ರೈಲ್ವೆ ಮೈಸೂರು ವಿಭಾಗ ತಿಳಿಸಿದೆ.
ರೈಲ್ವೆ ವಸ್ತು ಸಂಗ್ರಹಾಲಯದ ಎಲ್ಲಾ ವಿಂಟೇಜ್ ಸ್ಟೀಮ್ ಲೋಕೋಮೋಟಿವ್‌ಗಳು, ಕೋಚ್‌ಗಳು, ತಪಾಸಣಾ ಗಾಡಿಗಳು, ಸರಕು ವ್ಯಾಗನ್‌ಗಳು, ಕ್ರೇನ್, ಆಟಿಕೆ ರೈಲು ಮತ್ತು ಇತರ ಎಲ್ಲ ಹೊರಾಂಗಣ ಪ್ರದರ್ಶನದ ವಸ್ತುಗಳನ್ನು ಪ್ರವಾಸಿಗರಿಗೆ ಅದ್ಭುತ ಅನುಭವವನ್ನು ನೀಡಲು ದೀಪಗಳಿಂದ ಅಲಂಕೃತಗೊಳಿಸಲಾಗುತ್ತದೆ. ಸಾರ್ವಜನಿಕರ ಅನುಕೂಲಕ್ಕಾಗಿ ಅ.12 ರಂದು (ಮಂಗಳವಾರ) ವಾರದ ರಜೆ ಇರುವುದಿಲ್ಲ.
ಪ್ರವಾಸಿಗರು ಯಾವುದೇ ಕೈಚೀಲಗಳು/ಬ್ಯಾಕ್‌ಪ್ಯಾಕ್‌ಗಳನ್ನು ರೈಲ್ವೆ ವಸ್ತು ಸಂಗ್ರಹಾಲಯ ಆವರಣಕ್ಕೆ ಕೊಂಡೊಯ್ಯಲು ಅನುಮತಿಸಲಾಗುವುದಿಲ್ಲ. ಹೊರಗಿನಿಂದ ತಂದ ಆಹಾರ/ಪಾನೀಯಗಳ ಸೇವನೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಸ್ವಾಗತ ಕೌಂಟರ್‌ನಲ್ಲಿ ನಿಗದಿತ ಶುಲ್ಕಗಳನ್ನು ಪಾವತಿಸಿದ ನಂತರ ಎಸ್‌ಎಲ್‌ಆರ್/ಡಿಎಸ್‌ಎಲ್‌ಆರ್‌ನೊಂದಿಗೆ ಸ್ಥಿರ ಛಾಯಾಗ್ರಹಣವನ್ನು ಅನುಮತಿಸಲಾಗುತ್ತದೆ.
ನೈಋತ್ಯ ರೈಲ್ವೆ ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ರಾಹುಲ್ ಅಗರ್ವಾಲ್ ರವರು ಭೇಟಿ ನೀಡುವ ಸಂದರ್ಶಕರು ರೈಲು ವಸ್ತು ಸಂಗ್ರಹಾಲಯ ಆವರಣದಲ್ಲಿರುವ ಸಮಯದಲ್ಲಿ ಕೋವಿಡ್ ಸಂಬಂಧಿತ ಎಲ್ಲಾ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ಮನವಿ ಮಾಡಿದ್ದಾರೆ. ಕೋವಿಡ್‌ಗೆ ಸೂಕ್ತವಾದ ನಡವಳಿಕೆಯನ್ನು ಕಾರ್ಯಗೊತಗೊಳಿಸಲು,ಯಾವುದೇ ಸಮಯದಲ್ಲಿ ಭೇಟಿ ನೀಡುವವರನ್ನು ನಿರ್ಬಂಧಿಸುವ ಹಕ್ಕನ್ನು ರೈಲ್ವೆ ಹೊಂದಿದೆ ಎಂದು ಅವರು ಹೇಳಿದ್ದಾರೆ. ರೈಲ್ವೆ ವಸ್ತು ಸಂಗ್ರಹಾಲಯ ಆವರಣದಲ್ಲಿ ಸುರಕ್ಷಿತ ವಾತಾವರಣವನ್ನು ಸೃಷ್ಟಿಸಲು ಅವರು ಸಂದರ್ಶಕರ ಸಂಪೂರ್ಣ ಸಹಕಾರವನ್ನು ಕೋರಿದ್ದಾರೆ.