ಪುನೀತ್ ಅಂತಿಮ ದರ್ಶನ ಪಡೆದು ಬಾವುಕರಾದ ನಟಿ ರಮ್ಯ!

1 min read

ಪವರ್​ಸ್ಟಾರ್​ ಪುನೀತ್​ ರಾಜ್​ಕುಮಾರ್ ಹೃದಯಾಘಾತದಿಂದ ಮೃತಪಟ್ಟಿದ್ದು ಅಭಿಮಾನಿಗಳು ಕಣ್ಣೀರಾಕುತ್ತಿದ್ದಾರೆ. ಸ್ಯಾಂಡಲ್‌ವುಡ್‌‌‌ಗೆ ರಾಜಕುಮಾರನ ಕಣ್ಮರೆ ತುಂಬಲಾಗದ ನಷ್ಟವಾಗಿ ಪರಿಣಮಿಸಿದೆ. ಈ‌ ಮಧ್ಯೆ ಅಪ್ಪುವಿನ ಅಂತಿಮ ದರ್ಶನಕ್ಕೆ ಕನ್ನಡ ಮಾತ್ರವಲ್ಲದೇ ಭಾರತೀಯ ಚಿತ್ರರಂಗದ ಗಣ್ಯರು ಸಹ ಆಗಮಿಸಿ ಅಂತಿಮ ದರ್ಶನ ಪಡೆಯುತ್ತಿದ್ದಾರೆ.

ಈ ಮಧ್ಯೆ ಅಪ್ಪು ಅಂತಿಮ ದರ್ಶನ ಪಡೆಯೋಕೆ ವಿದೇಶದಿಂದ ನಟಿ ರಮ್ಯ ಕೂಡ ಆಗಮಿಸಿದ್ದಾರೆ. ಅಪ್ಪು ನನಗೆ ಒಳ್ಳೆಯ ಸ್ನೇಹಿತರು. ಕಳೆದ ಕೆಲ ವಾರದ ಹಿಂದೆ ಅವರ ಜೊತೆ ನಾನು ಮಾತಾಡಿದ್ದೆ. ನಾನು ಅವರ ಜೊತೆಯೇ‌ ಮತ್ತೇ ಚಿತ್ರರಂಗಕ್ಕೆ ಬರುವ ಬಗ್ಗೆ ಮಾತುಕತೆ ನಡೆಸಿದ್ದೆ‌ ಎಂದು ಅಪ್ಪು ನೆನೆದು ಭಾವುಕರಾದರು.

ನಟಿ ರಮ್ಯ ಬಾವುಕ

ಈ ಮಧ್ಯೆ ಪುನೀತ್ ಜೊತೆಗಿನ 3 ಸಿನಿಮಾಗಳಲ್ಲಿ ನಟಿಸಿದ್ದ ಬಗ್ಗೆಯು ನೆನಪಿಸಿಕೊಂಡ ರಮ್ಯ, ಅಪ್ಪು ಇಲ್ಲ ಎಂಬುದನ್ನ ಅರಗಿಸಿಕೊಳ್ಳಲು ಆಗ್ತಿಲ್ಲ. ಅಪ್ಪುರ ಜೊತೆ ಕಳೆದ ಶೂಟಿಂಗ್ ಸಮಯದ ದಿನಗಳನ್ನ ನಾನು ಎಂದೂ ಮರೆಯಲು ಆಗಲ್ಲ ಎಂದ್ರು.

About Author

Leave a Reply

Your email address will not be published. Required fields are marked *