ಪುನೀತ್ ರಾಜ್ ಕುಮಾರ್’ ಸಮಾಧಿ ಮುಂದೆ ಮದುವೆ ಆಗಲು ನಿರ್ಧರಿಸಿದ ಪ್ರೇಮಿಗಳು.!
1 min readಕರ್ನಾಟಕದ ಪ್ರತಿಯೊಬ್ಬರ ನೆಚ್ಚಿನ ಅಪ್ಪು ಇಂದು ನಮ್ಮಿಂದ ದೂರ ಆಗಿರಬಹುದು. ಆದರೆ ಅವರ ನೆನಪು ಅವರ ಚಿತ್ರ, ನಡೆ ನುಡಿ ಇವತ್ತಿಗು ಎಲ್ಲರಿಗು ಮಾದರಿ. ಇಂತಹ ಇಷ್ಟದ ಪುನೀತ್ ರಾಜ್ ಕುಮಾರ್ ಸಮಾಧಿ ಮುಂದೆಯೇ ವಿವಾಹವಾಗೋದಕ್ಕೆ ಪ್ರೇಮಿಗಳಿಬ್ಬರು ಮುಂದಾಗಿದ್ದಾರೆ.
–ಬಳ್ಳಾರಿಯ ಗುರುರಾಜ್ ಹಾಗೂ ಗಂಗಾ 2 ವರ್ಷದಿಂದ ಪ್ರೀತಿಸುತ್ತಿದ್ದರು. ಈ ಇಬ್ಬರು ನಟ ಪುನೀತ್ ರಾಜ್ ಕುಮಾರ್ ಅವರ ಅಪ್ಪಟ್ಟ ಅಭಿಮಾನಿಗಳು. ಪುನೀತ್ ನಿಧನದ ನಂತರ ಅವರ ಸಮಾಧಿ ಮುಂದೆಯೇ ವಿವಾಹ ಆಗೋದಕ್ಕೆ ಈ ಪ್ರೇಮಿಗಳು ನಿರ್ಧರಿಸಿದ್ದಾರೆ. ಇದಕ್ಕಾಗಿ ಶಿವರಾಜ್ ಕುಮಾರ್ ಹಾಗೂ ರಾಘವೇಂದ್ರ ರಾಜಕುಮಾರ್ ಅವರಲ್ಲಿ ಅನುಮತಿ ಕೇಳಿದ್ದು, ಶಿವರಾಜ್ ಕುಮಾರ್ ಮದುವೆಯಾಗೋದಕ್ಕೆ ಸಮ್ಮತಿ ನೀಡಿದ್ದಾರೆ ಎನ್ನಲಾಗಿದೆ.
- ಹೀಗಾಗಿ ಸದ್ಯದಲ್ಲೇ ನಟ ಪುನೀತ್ ರಾಜ್ ಕುಮಾರ್ ಸಮಾಧಿ ಮುಂದೆ ಸದ್ಯದಲ್ಲೇ ನೂತನ ದಾಂಪತ್ಯಕ್ಕೆ ಕಾಲಿಡಲಿದ್ದಾರೆ. ಆದರೆ ಮದುವೆ ಆಗುವ ಪ್ರೇಮಿಗಳಿಗೆ ರಾಘವೇಂದ್ರ ರಾಜಕುಮಾರ್ ಕಿವಿಮಾತು ಹೇಳಿದ್ದು, ಪೋಷಕರ ಒಪ್ಪಿಗೆ ಪಡೆಯುವಂತೆಯು ಸಲಹೆ ನೀಡಿದ್ದಾರೆ.