ಅಮೇರಿಕಾದಲ್ಲಿ ವಿಮಾನ ಹತ್ತಿದ ಅಪ್ಪು ಮಗಳು ದ್ರಿತಿ

1 min read

ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಮಗಳು ದ್ರಿತಿ ಅಮೇರಿಕಾದಿಂದ ಹೊರಟಿದ್ದು ಅಪ್ಪನ ಸಾವಿನ ಸುದ್ದಿ ಕೇಳಿ ಶಾಕ್ ಆಗಿದ್ದಾರೆ. ಈಗಾಗಲೇ ಅಮೇರಿಕಾದಿಂದ ತಂದೆಯ ಅಂತಿಮ ವಿಧಿ ವಿಧಾನ ಕಾರ್ಯಗಳಲ್ಲಿ ಭಾಗವಹಿಸಬೇಕಾಗಿರುವುದರಿಂದ ಹೊರಟಿರುವ ದ್ರಿತಿ ತನ್ನ ಸಂಬಂಧಿಕರ ಜೊತೆ ಕಣ್ಣೀರುಡುತ್ತಲೇ ವಿಮಾನ ಹತ್ತಿದ್ದಾರೆ.

ಕೇವಲ ಎರಡು ತಿಂಗಳ ಹಿಂದಷ್ಟೇ ಅಮೇರಿಕಾದಲ್ಲಿ ಮೆಡಿಕಲ್ಸ್ ಓದಲು ತೆರಳಿರುವ ದ್ರಿತಿಗೆ ತಂದೆಯ ಸಾವು ಮಾನಸಿಕ ಆಘಾತವನ್ನುಂಟು ಮಾಡಿದೆ.

ದೃತಿ ಹೆಚ್ಚಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಾರೆ ಹಾಗೂ ಈ ಹಿಂದೆ ಕಣ್ಣಿನ ಸಮಸ್ಯೆ ಎದುರಿಸುವ ವಯಸ್ಕರಿಗೆ ಹಣ ಸಂಗ್ರಹಿಸುವ ಮೂಲಕ ನೆರವಾಗಿದ್ದರು.

ಸದ್ಯ ಇಂದು ರಾತ್ರಿ ಬೆಂಗಳೂರಿಗೆ ದ್ರಿತಿ ಆಗಮಿಸಲಿದ್ದಾರೆ ಎನ್ನಲಾಗಿದೆ.

About Author

Leave a Reply

Your email address will not be published. Required fields are marked *