ಪುನೀತ್ ರಾಜ್‌ಕುಮಾರ್ ಸಮಾಧಿಗೆ ಕುಟುಂಬಸ್ಥರಿಂದ ಪೂಜೆ!
1 min readನಮ್ಮ ನಿಮ್ಮೆಲ್ಲರ ಅಚ್ಚುಮೆಚ್ಚಿನ ಅಪ್ಪು ಅಗಲಿ ಇಂದಿಗೆ ಎರಡು ತಿಂಗಳೇ ಕಳೆದಿದೆ. ಎರಡು ತಿಂಗಳಾದ ಕಾರಣ ಪುನೀತ್ ಕುಟುಂಬಸ್ಥರು ಇಂದು ಅಪ್ಪು ಸಮಾಧಿ ಬಳಿ ಆಗಮಿಸಿ ವಿಶೇಷ ಪೂಜೆ ಸಲ್ಲಿಕೆ ಮಾಡಿ ತೆರಳಿದ್ದಾರೆ.
- ಪುನೀತ್ ರಾಜ್ ಕುಮಾರ್ ಅವರ ಪತ್ನಿ ಅಶ್ವಿನಿ, ಮಗಳು ಸೇರಿ ಶಿವಣ್ಣ, ರಾಘವೇಂದ್ರ ರಾಜಕುಮಾರ್ ಸೇರಿದಂತೆ ಇನ್ನಿತರರು ಈ ಪೂಜೆಯಲ್ಲಿ ಭಾಗಿಯಾಗಿದ್ರು.
ಜೊತೆಯಲ್ಲಿ ಪುನೀತ್‌ಗೆ ನೆಚ್ಚಿನ ನಾನ್ ವೆಜ್ ಆಹಾರವನ್ನು ಸಮಾಧಿ ಬಳಿ ಇಟ್ಟು ಭಾವುಕರಾದ್ರು. ಇದೇವೇಳೆ ಸಮಾಧಿ ನೋಡಲು ಬರುತ್ತಿರುವ ಅಭಿಮಾನಿಗಳು ಅಪ್ಪುವಿನಂತೆ ನೇತ್ರದಾನ ಮಾಡಲು ಉತ್ಸುಕತೆ ತೋರಿದ್ದು ಈ ವರೆಗು ಹತ್ತು ವರ್ಷದಲ್ಲಿ ಆಗಿರುವ ಸಾಧನೆ ಕೇವಲ ಎರಡೇ ತಿಂಗಳಲ್ಲಿ ಪುನೀತ್ ಹಾದಿ ತೋರಿಸಿದೆ. ಅದರಂತೆ ಬರೋಬ್ಬರಿ 12 ಸಾವಿರಕ್ಕು ಹೆಚ್ಚು ಮಂದಿ ನೇತ್ರದಾನಕ್ಕೆ ಮುಂದಾಗಿರೋದು ವಿಶೇಷ.
ನನ್ನೂರು ಮೈಸೂರು ಟೀಂ.