ಚಾಮುಂಡಿಬೆಟ್ಟಕ್ಕೆ ರೊಪ್ ವೇ ಬೇಡ: ಮೈಸೂರು ಕನ್ನಡ ವೇದಿಕೆ ಆಗ್ರಹ

1 min read

ಮೈಸೂರು: ರೊಪ್ ವೇ ಬೇಡ ಪರಿಸರಿ ಉಳಿಸಿ, ಬೆಟ್ಟದ ಪಾವಿತ್ರಿತ್ಯೆಯನ್ನು ಕಾಪಾಡಿ ಎಂದು ಮೈಸೂರು ಕನ್ನಡ ವೇದಿಕೆ ಕಾರ್ಯಕರ್ತರು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ.

ಚಾಮುಂಡಿ ಬೆಟ್ಟದ ತಪ್ಪಲಿನ ಮೆಟ್ಟಿಲುಗಳ ಬಳಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಚಾಮುಂಡಿ ಬೆಟ್ಟಕ್ಕೆ ರೂಪ್ ವೇ ಯನ್ನು ಸರ್ಕಾರ ಪ್ರಸ್ತಾಪ ಮಾಡಿರುವುದು ನಗರದ ಪ್ರಜ್ಞಾವಂತ ಮತ್ತು ಹಿರಿಯ ನಾಗರೀಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿಂದೆ ಚಾಮುಂಡಿ ಬೆಟ್ಟಕ್ಕೆ ಚತುಷ್ಪತ ರಸ್ತೆ ಕಾಮಗಾರಿ ಹೆಸರು ಕೇಳಿ ಬಂದಾಗ ಸಾಕಷ್ಟ ಚರ್ಚೆಗೆ ಕಾರಣವಾಗಿ ಇದರಿಂದ ಬೆಟ್ಟದ ಪರಿಸರಕ್ಕೆ ಕೊಡಲಿ ಪಟ್ಟು ಬೀಳುತ್ತದೆ ಎಂದು ಅಪಸ್ವರ ಕೇಳಿ ಬಂದಾಗ ಅದನ್ನು ಕೈಬಿಡಲಾಯಿತು.

ಮೈಸೂರಿನವರೇ ಆದ ಮಾಜಿ ಅರಣ್ಯ ಮಂತ್ರಿಗಳಾದ ಶ್ರೀ ವಿಜಯಶಂಕರ್ ರವರು ಪರಿಸರಕ್ಕೆ ಹಚ್ಚು ಒತ್ತು ನೀಡುವ ಮೂಲಕ ಹೆಚ್ಚು ಗಿಡಗಳನ್ನು ಬೆಟ್ಟದ ಸುತ್ತಲೂ ನೆಡುವ ಮೂಲಕ ಕೆಲವು ವೃಕ್ಷಗಳ ದತ್ತು ಸ್ವೀಕಾರ ಎಂಬ ಯೋಜನೆಗಳು ಬೆಟ್ಟದ ಪರಿಸರಕ್ಕೆ ಹಾಗೂ ರಕ್ಷಣೆಗೆ ಪೂರಕವಾಗಿತ್ತು. ವಿಪರ್‍ಯಾಸವೆಂದರೆ ಇದಕ್ಕೆ ತದ್ವಿರುದ್ದವಾಗಿ ಪ್ರವಾಸೋದ್ಯಮದ ಹೆಸರಿನಲ್ಲಿ ಬೆಟ್ಟದ ಮೇಲೆ ವಾಣಿಜ್ಯ ಸಂಕೀರ್ಣ ಮತ್ತು ರೋಪ್ ವೇ ಎಂಬ ಪರಿಸರ ವಿರೋಧ ಯೋಜನೆಗಳು ಚಾಮುಂಡಿ ಬೆಟ್ಟಕ್ಕೆ ಮಾರಕವಾಗಿದೆ. ರೊಪ್ ವೇ ಗೆ ಸಂಬಂಧಪಟ್ಟಂತೆ ಈಗಾಗಲೇ ರಾಜ್ಯದ ಹಲವು ಕಡೇ ವ್ಯಾಪಕ ವಿರೋಧವನ್ನು ಅಲ್ಲಿಯ ಸ್ಥಳೀಯರು ವಿರೋಧಿಸಿತ್ತಿರುವಾಗಲೇ ಮೈಸೂರಿನಲ್ಲಿ ಪ್ರಸ್ತಾಪವಾಗುತ್ತಿರುವುದು ದುರ್ದೈವದ ಸಂಗತಿ ಎಂದು ವೇದಿಕೆ ಅಧ್ಯಕ್ಷರು ಆಕ್ರೋಶ ಹೊರಹಾಕಿದ್ದಾರೆ.

ಅಲ್ಲದೆ ಈಗಾಗಲೇ ಬೆಟ್ಟದ ಸುತ್ತಮುತ್ತ ಹೊಸ ಬಡಾವಣೆಗಳು ತಲೆ ಎತ್ತುತ್ತಿದ್ದು ಹಾಗೂ ಖಾಸಗಿ ವ್ಯಕ್ತಿಗಳ ಮತ್ತು ಮಠ ಮಾನ್ಯಗಳು ಧ್ಯಾನ ಮತ್ತು ಪ್ರಕೃತಿ ಚಿಕಿತ್ಸೆ ಹೆಸರಿನಲ್ಲಿ ಬೆಟ್ಟದ ಜಾಗವನ್ನು ಒತ್ತುವರಿ ಮಾಡಿಕೊಂಡು ವ್ಯಾಪಾರೀಕರಣ ಮಾಡುತ್ತಿದ್ದಾರೆ. ಇಂತಹ ಸ್ಥಿತಿಯಲ್ಲಿ ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ರೋಪ್ ವೇ ಯೋಜನೆ ಆಗುತ್ತಿರೋದು ಬೇಡ ಎಂದರು.

ಜೊತೆಯಲ್ಲಿ ಚಾಮುಂಡಿಬೆಟ್ಟ ಕೇವಲ ಪುಣ್ಯ ಕ್ಷೇತ್ರವಲ್ಲದೆ ಅಪರೂಪದ ಸಸ್ಯ ಮತ್ತು ಪ್ರಾಣಿ ಸಂಕುಲವನ್ನು ಹೊಂದಿರುವ ಹಾಗೂ ನಗರಕ್ಕೆ ಹೊಂದಿಕೊಂಡಿರುವ ಪ್ರದೇಶ. ಇದನ್ನು ಕಾಪಾಡಿಕೊಂಡು ಹಾಗೂ ಮುಂದುವರೆಸಿಕೊಂಡು ಹೋಗುವುದು ನಮ್ಮೆಲರ ಜವಾಬ್ದಾರಿಯ ಹೊರತು ರೋಪ್ ವೇ ಅಲ್ಲ. ಪ್ರತಿ ವರ್ಷ ಮಳೆ ಹೆಚ್ಚಾಗಿ ಬಂದಾಗ ಬೆಟ್ಟದಿಂದ ಹರಿದುಬರುವ ನೀರು ನಗರದ ಕೆಲವು ಕೆರಗಳಿಗೆ ನೀರು ತುಂಬವ ಮೂಲಕ ಅಂತರಜಲ ಹೆಚ್ಚುತ್ತದೆ. ಇನ್ಯಾದರೂ ಜಿಲ್ಲಾಡಳಿತ ಹೆಚ್ಚತ್ತು ಚಾಮುಂಡಿ ಬೆಟ್ಟವನ್ನು ಮೈಸೂರು ಮಹಾನಗರಪಾಲಿಕೆ ವ್ಯಾಪ್ತಿಗೆ ಸೇರಿಸುವ ಮೂಲಕ ಬೆಟ್ಟದ ಮೂಲಭೂತ ಸೌಕರ್ಯಗಳ ಬಗ್ಗೆ ಗಮನ ಹರಿಸಿ ಪರಿಸರ ಅಭಿವೃದ್ದಿಗೆ ಆದ್ಯತೆ ಕೊಟ್ಟು ಹೆಚ್ಚು ಸಸಿಗಳನ್ನು ನೆಡುವ ಮೂಲಕ ಪರಿಸರ ಪೂರಕ ಹಾಗೂ ಬೆಟ್ಟದ ಪಾವಿತ್ರಿತ್ಯಯನ್ನು ಕಾಪಾಡಲಿ ಎಂದು ಕನ್ನಡ ವೇದಿಕೆ ಅಗ್ರಹಿಸಿದೆ.

ಇದೇವೇಳೆ ವೇದಿಕೆ ಅಧ್ಯಕ್ಷ ಎಸ್. ಬಾಲಕೃಷ್ಣ ವಹಿಸಿದ್ದು ಮುಖಂಡರುಗಳಾದ ನಾಲಾಬೀದಿರವಿ, ಬೋಗಾದಿ ಸಿದ್ದೇಗೌಡ, ಗುರುಬಸಪ್ಪ, ಪ್ಯಾಲೇಸ್‌ ಬಾಬು, ಗೋಪಿ, ಮಹದೇವಸ್ವಾಮಿ, ಸುನೀಲ್‌ಕುಮಾರ್, ಮೊಲಿನಿ, ಸ್ವಾಮಿಗೃಡ್, ಕಾವೇರಿಮ್ಮ, ಅರವಿಂದ್, ಎಲ್.ಐ.ಸಿ.ಸಿದ್ದಪ್ಪ, ಗೋವಿಂದರಾಜು, ಮನೋಹರ್, ಮದನ್, ಆರಾಧ್ಯ, ರಾಧಾಕೃಷ್ಣ ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *