ಪ್ರೊ.ಎಸ್. ಶ್ರೀಕಂಠಸ್ವಾಮಿ ರಾಯಲ್ ಹೊಸೈಟಿ ಆಫ್ ಕಮಿಸ್ಟ್ರಿ ಲಂಡನ್, UK ಫೆಲೋಗೆ ಆಯ್ಕೆ

1 min read

ಮೈಸೂರು,ಜ.25-ಪ್ರೊ.ಎಸ್. ಶ್ರೀಕಂಠಸ್ವಾಮಿ ಅವರು ರಾಯಲ್ ಹೊಸೈಟಿ ಆಫ್ ಕಮಿಸ್ಟ್ರಿ ಲಂಡನ್, UK ಫೆಲೋ (FRSC) ಗೆ ಅಯ್ಕೆಯಾಗಿದ್ದಾರೆ. ಇದು ರಾಸಾಯನಿಕ ವಿಜ್ಞಾನ ಕ್ಷೇತ್ರಕ್ಕೆ ನೀಡಿರುವ ಕೊಡುಗೆಯನ್ನು ಗುರುತಿಸಿ ನೀಡಲಾಗುವ ಪ್ರತಿಷ್ಠಿ ಫೆಲೋಶಿಪ್ ಆಗಿದೆ.
ರಾಸಾಯನಿಕ ವೃತ್ತಿಯಲ್ಲಿ ಫೆಲೋ ಸ್ಥಾನಮಾನದ ಈ ಸಾಧನೆಯು ವಿಶ್ವಮಟ್ಟದಲ್ಲಿ ಪ್ರೊ.ಶ್ರೀಕಂಠಸ್ವಾಮಿ ಅವರ ಸಾಧನೆಯನ್ನು ನೀಡಲಾಗಿದೆ.
ಶ್ರೀಕಂಠಸ್ವಾಮಿ ಅವರು ಮೆಟೀರಿಯಲ್ಸ್ ಸೈನ್ಸ್, ಪರಿಸರ ವಿಜ್ಞಾನ, ವಿಶೇಷವಾಗಿ ಕಾರ್ಬನ್ ನ್ಯಾನೊಟೂಬ್ ಕ್ಷೇತ್ರದಲ್ಲಿ ಮಹತ್ವದ ಕೊಡುಗೆಗಳನ್ನು ಹಾಗೂ ವ್ಯಾಪಕವಾದ ಉಲ್ಲೇಖಗಳನ್ನು ಪಡೆದ ಗಣನೀಯ ಪ್ರಮಾಣದ ಪ್ರಕಟಿತ ಕೃತಿಗಳು ಕಾರಣವಾಗಿದೆ. ವಿಶೇಷವಾಗಿ ಕಾರ್ಬನ್ ಆಧಾರಿತ ವಸ್ತುಗಳ ಮೇಲೆ ಸಂಶೋಧನಾ ಕಾರ್ಯವನ್ನು ಹೆಚ್ಚು ನಡೆಸಿದ್ದಾರೆ. ತ್ಯಾಜ್ಯ ಸಂಸ್ಕರಣೆ, ಫೋಟೊಕ್ಯಾಟಲಿಕ್, ಬಯೋಲಾಜಿಕ್, ಎಲೆಕ್ಟಿಕಲ್, ಆಪ್ಟಿಕಲ್ ಹಾಗೂ ಇತ್ಯಾದಿಗಳಿಗೆ ಹೊಸ ವಸ್ತುಗಳ ಸಂಶ್ಲೇಷಣೆಗೆ ಇವರ ಪ್ರಮುಖ ಕೊಡುಗೆಗಳು. ಪರಿಸರದಲ್ಲಿ ಇರುವ ಲೋಹಗಳ ನಿವಾರಿಸುವ ಬಗ್ಗೆ ಇವರು ವ್ಯಾಪಕವಾಗಿ ಕೆಲಸ ಮಾಡಿದ್ದಾರೆ. ಜಪಾನ್ ನ ‘ಟೋಕಿಯೊ ಇನ್ಸ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ’ ಮತ್ತು ರಿಸರ್ಚ್ ಇನ್ಸಿಸ್ಟಿಟ್ಯೂಟ್ ಆಫ್ ಸೋಲ್ವೋಥರ್ಮಲ್ ಟೆಕ್ನಾಲಜಿಯಲ್ಲಿ ಎರಡು ವರ್ಷಗಳ ಕಾಲ ಸಂದರ್ಶಕ ವಿಜ್ಞಾನಿಯಾಗಿ ಕೆಲಸ ಮಾಡಲು ಇವರನ್ನು ಆಹ್ವಾನಿಸಲಾಗಿತ್ತು. ಇವರು ಹಲವಾರು ರಾಷ್ಟ್ರೀಯ, ಅಂತಾರಾಷ್ಟ್ರೀಯ ಸಂಶೋಧನಾ ಕಾರ್ಯಗಳನ್ನು ನಡೆಸಿದ್ದಾರೆ. ಇತ್ತೀಚೆಗೆ ಇವರು 2019ರ ಜನವರಿ 7 ರಂದು ಜಲಂಧರ್ ವಿಶ್ವವಿದ್ಯಾನಿಲಯದಲ್ಲಿ ನಡೆದ 106 ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ ನಲ್ಲಿ ಅತ್ಯುತ್ತಮ ಸಂಶೋಧನಾ ಕಾರ್ಯಕ್ಕಾಗಿ ಪ್ರೊ.ಡಬ್ಲೂ.ಡಿ ವೆಸ್ಟ್ ಸ್ಮಾರಕ ಪ್ರಶಸ್ತಿಯನ್ನು ಪಡೆದಿದ್ದಾರೆ‌. ಇವರು ಇತ್ತೀಚೆಗೆ ಮಂಡ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.
ಅಂತಾರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ 160ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ‌. ಪರಿಸರ ವಿಜ್ಞಾನ ಕ್ಷೇತ್ರದಲ್ಲಿ 5 ಪುಸ್ತಕದ ಅಧ್ಯಾಯ ಹಾಗೂ 4 ಪುಸ್ತಕಗಳನ್ನು ಪ್ರಕಟಿಸಿದ್ದಾರೆ‌. ಇವರ ಮಾರ್ಗದರ್ಶನದಲ್ಲಿ 18 ಸಂಶೋಧನಾ ವಿದ್ಯಾರ್ಥಿಗಳು ಪಿಹೆಚ್‌.ಡಿ ಪದವಿಯನ್ನು ಪೂರ್ಣಗೊಳಿಸಿದ್ದಾರೆ. 8 ಸಂಶೋಧನಾ ವಿದ್ಯಾರ್ಥಿಗಳು ತಮ್ಮ ಪಿಹೆಚ್ ಡಿ ಸಂಶೋಧನಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

About Author

Leave a Reply

Your email address will not be published. Required fields are marked *