ಮಕರ ಜ್ಯೋತಿ ದರುಶನಕ್ಕಾಗಿ ಶಬರಿಮಲೆಯಲ್ಲಿ ಸಕಲ ಸಿದ್ಧತೆ
1 min readಕೇರಳ, (ಶಬರಿಮಲೆ),ಜ.14-ಪುಣ್ಯ ಕ್ಷೇತ್ರ ಶಬರಿಮಲೆಯಲ್ಲಿ ಮಕರ ಜ್ಯೋತಿ ದರುಶನಕ್ಕಾಗಿ ಸಕಲ ಸಿದ್ಧತೆಗಳನ್ನು ಮಾಡಲಾಗಿದೆ. ಶ್ರೀ ಅಯ್ಯಪ್ಪನ ಸ್ವಾಮಿಯ ದರ್ಶನ ಪಡೆದ ಬಳಿಕ ಮಕರ ಜ್ಯೊತಿ ದರ್ಶನ ಪಡೆಯಲು ಭಕ್ತರು ಕಾತುರದಿಂದ ಕಾಯುತ್ತಿದ್ದಾರೆ.
ನಾಳೆ ಮಧ್ಯಾಹ್ನ 2.29ರ ಶುಭ ಮುಹೂರ್ತದಲ್ಲಿ ಸನ್ನಿಧಾನದಲ್ಲಿ ಮಕರ ಸಂಕ್ರಮಣ ಪೂಜೆ ನೆರವೇರಲಿದೆ. ಕವಡಿಯಾರ್ ಅರಮನೆಯಿಂದ ತಂದ ತುಪ್ಪದಲ್ಲಿ ಸಂಕ್ರಮಣದ ವೇಳೆ ಅಯ್ಯಪ್ಪನಿಗೆ ವಿಶೇಷ ಅಭಿಷೇಕ ನೆರವೇರಲಿದೆ. ಪಂದಳಂನಿಂದ ಬರುವ ತಿರುವಾಭರಣ ಮೆರವಣಿಗೆ ಸಂಜೆ 6.20ರ ನಂತರ ಸನ್ನಿಧಾನಕ್ಕೆ ಪ್ರವೇಶಿಸಲಿದೆ. ತಂತ್ರಿ ಮತ್ತು ಪರಿವಾರದವರು ತಿರುವಾಭರಣಗಳನ್ನು ಸ್ವೀಕರಿಸಿ ಅಯ್ಯಪ್ಪ ವಿಗ್ರಹಕ್ಕೆ ತೊಡಿಸಿ ಅಲಂಕರಿಸಿ 6.30-6.45ರ ಮಧ್ಯೆ ದೀಪಾರಾಧನೆ ನಡೆಯುತ್ತಿದ್ದಂತೆ ಪೊನ್ನಂಬಲಮೆಟ್ಟಿಯಲ್ಲಿ ಮಕರ ಜ್ಯೋತಿ ಪ್ರತ್ಯಕ್ಷವಾಗಲಿದೆ.
ಕೋವಿಡ್ ನಿರ್ಬಂಧದ ಹಿನ್ನೆಲೆಯಲ್ಲಿ ಕುಠೀರಗಳನ್ನು ನಿರ್ಮಿಸಿಲು ತಂಗಲು ಅಯ್ಯಪ್ಪ ಭಕ್ತರಿಗೆ ಅವಕಾಶವಿಲ್ಲ. ಅಲ್ಲದೆ, ಶಬರಿಮಲೆ, ಪಂಪಾ ನದಿ ತೀರದಲ್ಲಿ ಭಕ್ತರ ಸಂಖ್ಯೆಗೆ ನಿಯಂತ್ರಣ ಹೇರಲಾಗಿದೆ. ಆದರೂ ಸನ್ನಿಧಾನಂ, ಪಂಪಾ ಮಾತ್ರವಲ್ಲದೆ, ಪೊನ್ನಂಬಲಮೇಡಿನ ಮಕರ ಜ್ಯೋತಿ ಕಾಣುವ ಎಲ್ಲಾ ಕಡೆಯೂ ಮಕರ ಜ್ಯೋತಿಯ ದರ್ಶನಕ್ಕೆ ಅಯ್ಯಪ್ಪ ಭಕ್ತರು ಕಾಯುತ್ತಿದ್ದಾರೆ.