ಸಾಫ್ಟ್ ಆಗಿಯೇ ಡಿಕೆ-ಹೆಚ್ಡಿಕೆಗೆ ಗುದ್ದಿದ ಪ್ರತಾಪ್ ಸಿಂಹ!
1 min readಸದ್ಯ ಮೈಸೂರು ಬೆಂಗಳೂರು ದಶಪಥದ ರಸ್ತೆ ವಿಚಾರ ಸಾಕಷ್ಟು ಸದ್ದು ಮಾಡುತ್ತಿದೆ. ಇದಕ್ಕೆ ಕಾರಣ ರಾಮನಗರ ಚನ್ನಪಟ್ಟಣದಲ್ಲಿ ಸುರಿದ ಧಾರಕಾರ ಮಳೆ ಹಾಗೂ ಅಲ್ಲಿ ಉಂಟಾದ ಮಳೆಯ ಅವಾಂತರ. ಇದರಿಂದ ರಾಜಕೀಯ ಮುಖಂಡರು ಇದೀಗಾ ದಶಪಥ ರಸ್ತೆಯ ಬಗ್ಗೆ ಟೀಕೆ, ವ್ಯಂಗ್ಯ ಎಲ್ಲವು ಶುರು ಮಾಡಿದ್ದಾರೆ. ಈ ಮಧ್ಯೆ ಹೆಚ್ಡಿಕೆ ಹಾಗೂ ಡಿಕೆ ಸುರೇಶ್ ಕೊಟ್ಟ ಹೇಳಿಕೆ ಇದೀಗಾ ಸಾಕಷ್ಟು ಸಂಚಲನ ಮೂಡಿಸಿದೆ. ಸರಿಯಾದ ವ್ಯವಸ್ಥೆ ಇಲ್ಲದೆ ಕಾಮಗಾರಿ ನಡೆದಿದೆ ಎಂದು ರಾಜಕೀಯ ನಾಯಕರು ಪ್ರತಾಪ್ ಸಿಂಹ ಅವರ ವಿರುದ್ಧ ಕಿಡಿಕಾರಿದ್ದಾರೆ. ಆದರೆ ಇದಕ್ಕೆ ನಾಜೂಕ್ಕಾಗಿಯೇ ಉತ್ತರ ಕೊಟ್ಟಿರುವ ಪ್ರತಾಪ್ ಸಿಂಹ ಅಣ್ಣ ಎನ್ನುತ್ತಲೇ ಇಬ್ಬರ ನಾಯಕರಿಗೆ ಗುನ್ನ ನೀಡಿದ್ದಾರೆ. ಹೌದು, ಮೈಸೂರು -ಬೆಂಗಳೂರು ರಸ್ತೆಯಲ್ಲಿ ಮಳೆಯ ಅವಾಂತರ ವಿಚಾರವಾಗಿ ರಾಮನಗರ ನಾಯಕರುಗಳ ಮೇಲೆ ಪ್ರತಾಪ್ ಸಿಂಹ ಸಾಫ್ಟ್ ಕಾರ್ನರ್ ತೋರಿದ್ದಾರೆ. ಮಾಜಿ ಸಿಎಂ ಹೆಚ್ಡಿಕೆ ಹಾಗೂ ಸಂಸದ ಡಿಕೆ ಸುರೇಶ್ ಹೇಳಿಕೆಗೆ ಸಂಸದ ಪ್ರತಾಪ್ ಸಿಂಹ ಸಾಫ್ಟ್ ಆನ್ಸರ್ ನೀಡಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸದಾ ವಾಗ್ದಾಳಿ ನಡೆಸುವ ಸಿಂಹ, ಈ ಇಬ್ಬರು ನಾಯಕರನ್ನ ಅಣ್ಣ ಎಂದು ನಮೂದಿಸಿ ಸಾಫ್ಟ್ ಕಾರ್ನರ್ ತೋರಿದ್ದಾರೆ.
ಟ್ವಿಟ್ಟರ್ ನಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಂಸದ ಪ್ರತಾಪ್ ಸಿಂಹ. ಕಳೆದ ಒಂದು ವಾರಗಳ ಮಳೆಯಿಂದ ಕೆರೆಯಂತಾಗಿದ್ದ ಹೆದ್ದಾರಿ ರಸ್ತೆ. ಈ ಹಿನ್ನೆಲೆ ನೂತನ ರಸ್ತೆಯ ಕಾಮಗಾರಿಯ ಬಗ್ಗೆ ಅಸಮಾಧಾನ ಹೊರಹಾಕಿದ್ದ ಹೆಚ್ಡಿಕೆ -ಡಿಕೆ ಸುರೇಶ್. ರಸ್ತೆಯಲ್ಲಿ ಪ್ರತಾಪ್ ಸಿಂಹ ಬಂದಿದ್ರೆ ಸ್ವಿಮ್ ಮಾಡಬಹುದಿತ್ತು ಎಂದು ಲೇವಡಿ ಮಾಡಿದ್ರು. ಇದಕ್ಕೆ ನಯವಾಗಿಯೇ ಉತ್ತರ ಕೊಟ್ಟಿರುವ ಪ್ರತಾಪ್ ಸಿಂಹ ಹೆಚ್ಡಿಕೆ ಹಾಗೂ ಡಿಕೆ ಸುರೇಶ್ ರನ್ನ ಗೌರವಾನ್ವಿತ ಅಣ್ಣನವರೇ ಅಂತ್ಯಥಾ ಭಾವಿಸಬೇಡಿ. ಜಿಲ್ಲಾಡಳಿತ, ಕಂದಾಯ ಮತ್ತು ಸಣ್ಣ ನೀರಾವರಿ ಇಲಾಖೆಯ ಮೂಲಕ ರಾಮನಗರ ಜಿಲ್ಲೆಯ ಎಲ್ಲಾ ಕೆರೆಗಳ, ನಾಲಾಗಳ ಸರ್ವೇ ಮಾಡಿಸಿ, ಒತ್ತುವರಿ ತೆರವು ಮಾಡಿಸಿ ಕೊಡಿ. ಹೈವೇಯಿಂದ ಎಲ್ಲೆಲ್ಲಿ ಅಡಚಣೆಯಾಗಿದೆ ಅದನ್ನು ತೋರಿಸಿ, ಸರಿಪಡಿಸುವ ಜವಾಬ್ದಾರಿಯನ್ನ ನನಗೆ ಬಿಡಿ ಎಂದು ಪ್ರತಾಪ್ ಸಿಂಹ ಟ್ವಿಟ್ ಮಾಡಿದ್ದಾರೆ. ಸದ್ಯ ಈ ಟ್ವೀಟ್ ರಾಜಕೀಯ ವಲಯದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.