ಉಂಡವಾಡಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳ ಸ್ಥಳ ಪರಿಶೀಲನೆ ನಡೆಸಿದ ಪ್ರತಾಪ್ ಸಿಂಹ, ಜಿ.ಟಿ.ದೇವೇಗೌಡ

1 min read

ಮೈಸೂರು,ಜ.27-ಇಂದು ಸಂಸದ ಪ್ರತಾಪ್ ಸಿಂಹ ಹಾಗೂ ಶಾಸಕ ಜಿ.ಟಿ.ದೇವೇಗೌಡ ಅವರು ಉಂಡವಾಡಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳ ಸ್ಥಳ ಪರಿಶೀಲನೆ ನಡೆಸಿದರು. ಮೈಸೂರು ನಗರಕ್ಕೆ ಹಳೇ ಉಂಡವಾಡಿ ಸಮೀಪದ ಕಾವೇರಿ ನದಿ ಮೂಲದಿಂದ ಸಗಟು ನೀರು ಸರಬರಾಜು ಮಾಡುವ 350 ಕೋಟಿ ರೂ. ಗಳ (ಪರಿಷ್ಕೃತ ಅಂದಾಜು ಮೊತ್ತ 590 ಕೋಟಿ ರೂ. ಗಳು) ಬೃಹತ್ ಯೋಜನೆಯಡಿ ಹಳೇ ಉಂಡವಾಡಿ ಬಳಿ ಮೂಲಸ್ಥಾವರ ಮತ್ತು ಮೇಗಳಾಪುರ ಬಳಿ ಜಲಶುದ್ಧೀಕರಣ ಘಟಕ ನಿರ್ಮಾಣ ಕಾಮಗಾರಿಗಳ ಸ್ಥಳ ಪರಿಶೀಲನೆ ನಡೆಸಿದರು.


ಮೂಲಸ್ಥಾವರದಲ್ಲಿ ಜಾಕ್‌ವೆಲ್‌ನ ರಾಫ್ಟ್ ಕಾಂಕ್ರೀಟಿಂಗ್ ಪೂರ್ಣಗೊಂಡಿದ್ದು , ಸ್ಪಿಲ್ಲಿಂಗ್ ಬೇಸಿನ್‌ಗಾಗಿ ಮಣ್ಣು ಅಗೆಯುವ ಕಾಮಗಾರಿ ಪ್ರಗತಿಯಲ್ಲಿರುತ್ತದೆ . ಕೆ.ಆರ್.ಎಸ್ ಜಲಾಶಯದಲ್ಲಿ ಪ್ರಸಕ್ತ ಸಾಲಿನಲ್ಲಿ ಕಳೆದ 90 ವರ್ಷಗಳ ಇತಿಹಾಸದಲ್ಲಿಯೇ ದಾಖಲೆ ಪ್ರಮಾಣದ ಗರಿಷ್ಠ ಮಟ್ಟಕ್ಕೆ ಮತ್ತು ಗರಿಷ್ಠ ಅವಧಿ 55 ದಿನಗಳ ಕಾಲ ನೀರು ಸಂಗ್ರಹಿಸಲಾಗಿದೆ . ಇದರಿಂದಾಗಿ ನೀರು ಕಾಮಗಾರಿ ಸ್ಥಳಕ್ಕೆ ಸೀಪೇಜ್ ಮೂಲಕ ಬರುತ್ತಿರುತ್ತದೆ . ಸೀಪೇಜ್ ನೀರನ್ನು ನಿರಂತರವಾಗಿ ಹೊರತೆಗೆಯುವ ಸವಾಲಿನ ಸಮಸ್ಯೆ ಇದ್ದಾಗ್ಯೂ ಕಾಮಗಾರಿಯು ಅವಶ್ಯಕ ಪ್ರಗತಿಯಲ್ಲಿ ಮುಂದುವರೆದಿರುತ್ತದೆ .

ಇದಲ್ಲದೆ , ಮುಂದಿನ ವರ್ಷಗಳಲ್ಲಿ ನೀರಿನ ಬೇಡಿಕೆ ಹೆಚ್ಚಾಗುವುದರಿಂದ 2500 ಹೆಚ್.ಪಿ ಸಾಮರ್ಥ್ಯದ ಯಂತ್ರೋಪಕರಣಗಳನ್ನು ಅಳವಡಿಸಲು ಸಾಧ್ಯವಾಗುವಂತೆ ಜಾಕ್‌ವೆಲ್ ನಿರ್ಮಿಸುತ್ತಿರುವುದರಿಂದ ಯಂತ್ರೋಪಕರಣಗಳು Shut off ಆದ ವೇಳೆಯಲ್ಲಿ ಒಟ್ಟು 8 ಮೋಟಾರ್‌ಗಳಿಂದ 1000 MT Horizontal Thrust ಉತ್ಪತ್ತಿಯಾಗುತ್ತದೆ . ಹೀಗೆ ಉಂಟಾಗುವ ಬೃಹತ್ Moment ಅನ್ನು ತಡೆಯಲು ಸುಭದ್ರ ಮತ್ತು ಧೀರ್ಘ ಅವಧಿಯ ಬಾಳಿಕೆಗೆ ಲಭ್ಯವಾಗುವ ಮೂಲಸ್ಥಾವರ ನಿರ್ಮಿಸುವ ದೃಷ್ಠಿಯಿಂದ ಅಂತರಾಷ್ಟ್ರೀಯ ಮಟ್ಟದ ತಾಂತ್ರಿಕ ಕ್ಷೇತ್ರದಲ್ಲಿ ಪ್ರಚಲಿತದಲ್ಲಿರುವ Good Practices in Construction Industry ಗಳಂತೆ Tie back system using rock anchoring parent . ಅನುಸರಿಸುತ್ತಿರುವುದರಿಂದ ಜಾಕ್‌ವೆಲ್ ಕಮ್ ಪಂಪ್‌ಹೌಸ್‌ ಫೌಂಡೇಶನ್ , ಕಾಲಂಗಳು ಹಾಗೂ ಬೀಮ್‌ಗಳನ್ನು ವಿನ್ಯಾಸಗೊಳಿಸಿ ನಿರ್ಮಿಸುತ್ತಿದ್ದು , ಕಬ್ಬಿಣ ಮತ್ತು ಕಾಂಕ್ರೀಟ್‌ಗಳ ಪ್ರಮಾಣದಲ್ಲಿ ಗಣನೀಯ ಹೆಚ್ಚುವರಿಯಾಗುತ್ತದೆ . ಎಂದು ಸ್ಥಳದಲ್ಲಿ ಹಾಜರಿದ್ದ ಅಧಿಕಾರಿಗಳು ತಿಳಿಸಿರುತ್ತಾರೆ . ರೂ . 545.00 ಕೋಟಿಗಳ ಮೂಲ ಅಂದಾಜಿನಲ್ಲಿ ಅನುವು ಮಾಡಿದಂತೆ ಯೋಜನೆಯ ಸಂಪೂರ್ಣ ಉಪಯೋಗ ಪಡೆಯುವ ದೃಷ್ಠಿಯಿಂದ ಹಾಲಿ ಮೊದಲ ಹಂತವಾಗಿ ಅನುಮೋದನೆಗೊಂಡಿರುವ ಅಂದಾಜು ಮೊತ್ತ ರೂ . 350.00 ಕೋಟಿಗಳ ಕಾಮಗಾರಿಗಳನ್ನು ಯಶಸ್ವಿಯಾಗಿ ಸಂಪೂರ್ಣವಾಗಿ ಅನುಷ್ಠಾನಗೊಳಿಸಲು ಹೆಚ್ಚುವರಿಯಾಗಿ ಅವಶ್ಯವಿರುವ ಮೊತ್ತಕ್ಕಾಗಿ ಯೋಜನೆಯ ಪರಿಷ್ಕೃತ ಅಂದಾಜನ್ನು ರೂ . 590.00 ಕೋಟಿಗಳಿಗೆ ತಯಾರಿಸಿ ಅನುಮೋದನೆಗಾಗಿ ಮಂಡಳಿಗೆ ಈಗಾಗಲೇ ಸಲ್ಲಿಸಿರುತ್ತಾರೆ ಪರಿಷ್ಕೃತ ಅಂದಾಜಿಗೆ ಅನುಮೋದನೆ ದೊರೆಯಬೇಕಾಗಿರುತ್ತದೆ . ಮುಂದುವರೆದು , ಮೇಗಳಾಪುರ ಬಳಿ ಜಲಶುದ್ದೀಕರಣ ಘಟಕ ನಿರ್ಮಿಸುವ ಕಾಮಗಾರಿಯಡಿ 12.5 ಎಂ.ಎಲ್ ಸಾಮರ್ಥ್ಯದ ಶುದ್ಧ ನೀರು ಸಂಗ್ರಹಗಾರ ಮತ್ತು ಕೆಮಿಕಲ್ ಹೌಸ್ ನಿರ್ಮಿಸುವ ಕಾಮಗಾರಿಯು ಪ್ರಗತಿಯಲ್ಲಿದ್ದು , ಬಾಕಿ ಉಳಿದಿರುವ ಭೂಸ್ವಾಧೀನ ಪ್ರಕ್ರಿಯೆಯು ಪ್ರಗತಿಯಲ್ಲಿರುತ್ತದೆ . ಇದೇ ಆವರಣದಲ್ಲಿ ಯೋಜನೆಗೆ ಅವಶ್ಯವಿರುವ 1829 ಮಿಮೀ , 1422 ಮಿಮೀ ಮತ್ತು 1168 ಮಿಮೀ ವ್ಯಾಸದ ಕೊಳವೆಗಳನ್ನು ಖರೀದಿಸಿ , ಶೇಖರಿಸಲಾಗಿದೆ . ಸದರಿ ಎಂ.ಎಸ್.ಕೊಳವೆಗಳ ದೀರ್ಘ ಬಾಳಿಕೆ ದೃಷ್ಠಿಯಿಂದ Cement Mortar Inner lining ಮತ್ತು ಮಂಡಳಿಯ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಹೊಸ ತಂತ್ರಜ್ಞಾನವಾದ Hydraulic and pneumatic ಮಾದರಿಯ Brush outer gunniting ಮಾಡಲಾಗುತ್ತಿದೆ . ಯೋಜನೆಯನ್ನು ನಿಗಧಿತ ಕಾಲಾವಧಿಯೊಳಗೆ ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಇದೇ ರೀತಿ ಉತ್ತಮ ಪ್ರಗತಿಯೊಂದಿಗೆ ಮುಂದುವರೆಯಲು ಅಧಿಕಾರಿಗಳಿಗೆ ಸೂಚಿಸಲಾಯಿತು.


ಏನಿದು ಯೋಜನೆ?
ಮೈಸೂರು ನಗರಕ್ಕೆ ಹಾಲಿ ಇರುವ ನೀರು ಸರಬರಾಜು ಯೋಜನೆಗಳ ಜೊತೆಗೆ ಮುಂದಿನ ದಿನಗಳ ಬೇಡಿಕೆಗನುಗುಣವಾಗಿ ಹೊಸದಾಗಿ ಹಳೇ ಉಂಡವಾಡಿ ಗ್ರಾಮದ ಬಳಿ ಕಾವೇರಿ ನದಿ ಮೂಲದಿಂದ ಮೈಸೂರು ನಗರ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಮೈಸೂರು ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಯಲ್ಲಿ ಮತ್ತು ವ್ಯಾಪ್ತಿಯ ಹೊರಗೆ ಬರುವ 92 ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ನಿಟ್ಟಿನಲ್ಲಿ ಕೃಷ್ಣರಾಜ ಸಾಗರ ಜಲಾಶಯದ ಹಿನ್ನೀರಿನಿಂದ ಬೃಹತ್ ಸಗಟು ನೀರು ಸರಬರಾಜು ಯೋಜನೆಯನ್ನು 2081 ನೇ ಸಾಲಿನ ಮೈಸೂರು ನಗರ, ಸ್ಥಳೀಯ ಯೋಜನಾ ಪ್ರದೇಶ , ಕರ್ನಾಟಕ ಗೃಹ ಮಂಡಳಿ ಮತ್ತು ಭಾಗಶಃ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿ ಒಳಗೊಂಡಂತೆ ಮುಂದಿ‌‌ನ 50 ಲಕ್ಷ ಜನಸಂಖ್ಯೆಗೆ ಪೂರೈಸಬಹುದಾದ 900 ಎಂ.ಎಲ್.ಡಿ ಸಾಮರ್ಥ್ಯಕ್ಕೆ ಯೋಜನೆಯನ್ನು ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ . ಯೋಜನೆಯನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಅನುಷ್ಠಾನಗೊಳಿಸಲಾಗುತ್ತಿದೆ . ಯೋಜನೆಗೆ ಅವಶ್ಯವಿರುವ ಮೈಸೂರು ಮತ್ತು ಮಂಡ್ಯ ಜಿಲ್ಲೆಗಳಿಗೆ ಸಂಬಂಧಿಸಿದ ಒಟ್ಟು 123 ಎಕರೆ 07 ಗುಂಟೆ ಭೂಮಿಯನ್ನು ನೇರ ಖರೀದಿ ಮೂಲಕ ಭೂಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ . ಮೊದಲ ಹಂತವಾಗಿ 150 ಎಂ.ಎಲ್.ಡಿ ಸಾಮರ್ಥ್ಯಕ್ಕೆ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದ್ದು , ನಂತರದ ದಿನಗಳಲ್ಲಿ ಬೇಡಿಕೆಗೆ ಅನುಗುಣವಾಗಿ 900 ಎಂ.ಎಲ್.ಡಿ ಸಾಮರ್ಥ್ಯದವರೆಗೆ ವಿಸ್ತರಿಸಬಹುದಾಗಿರುತ್ತದೆ . ಈ ಯೋಜನೆಯ ಮೂಲ ಅಂದಾಜನ್ನು ರೂ . 545.00 ಕೋಟಿಗಳಿಗೆ ತಯಾರಿಸಲಾಗಿತ್ತು . ಆದರೆ ರೂ . 350,00 ಕೋಟಿಗಳಿಗೆ ಸೀಮಿತಗೊಳಿಸಿ ಮೊದಲ ಹಂತವಾಗಿ ಅನುಮೋದನೆ ದೊರೆತ್ತಿರುತ್ತದೆ .

About Author

Leave a Reply

Your email address will not be published. Required fields are marked *