ಪ್ರಧಾನಿ ನರೇಂದ್ರ ಮೋದಿ ಜಗತ್ತಿನಲ್ಲಿ ಭಾರತದ ಹಿರಿಮೆ ಹೆಚ್ಚಿದ್ದಾರೆ: ಪ್ರತಾಪ್ ಸಿಂಹ
1 min readಮೈಸೂರು: ಪ್ರಧಾನಿ ನರೇಂದ್ರ ಮೋದಿ ಜಗತ್ತಿನಲ್ಲಿ ಭಾರತದ ಹಿರಿಮೆ ಹೆಚ್ಚಿದ್ದಾರೆ ಎಂದು ಮೈಸೂರು – ಕೊಡಗು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ 8 ವರ್ಷದ ಸಾಧನೆಗಳ ಕುರಿತು ಮೈಸೂರು ಜನಪ್ರತಿನಿಧಿಗಳಿಂದ ಸುದ್ದಿಗೋಷ್ಠಿ ನಡೆಯಿತು. ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸಂಸದ ಪ್ರತಾಪ್ ಸಿಂಹ, ಶಾಸಕ ಎಸ್.ಎ.ರಾಮದಾಸ್, ಎಲ್ ನಾಗೇಂದ್ರ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಂಡರು.
ಈ ವೇಳೆ ಪ್ರತಾಪ್ ಸಿಂಹ ಅವರು ಮಾತನಾಡಿ ಕಳೆದ 8 ವರ್ಷದಲ್ಲಿ ರಾಜ್ಯಕ್ಕೆ ಹೆಚ್ಚು ಅನುದಾನ ನೀಡಲಾಗಿದೆ. ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಯಶಸ್ವಿ. ಕೆರೆಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಪ್ರೋತ್ಸಾಹ. ಕೃಷಿ ಕ್ಷೇತ್ರಕ್ಕೆ 19374ಕೋಟಿ ಅನುದಾನ ನೀಡಲಾಗಿದೆ.
ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣಕ್ಕೆ 1ವರೆ ಲಕ್ಷ ಕೋಟಿ ಅನುದಾನ, ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಗೆ 9550ಕೋಟಿ ಅನುದಾನ, ಕರ್ನಾಟಕದ 27 ಜಿಲ್ಲೆಗಳಲ್ಲಿ ಪಾಸ್‌ಪೋರ್ಟ್ ಸೇವಾಕೇಂದ್ರ ತೆರೆಯಲಾಗಿದೆ ಎಂದರು.
ಮೋದಿ 8 ವರ್ಷದ ಸಾಧನೆ ಬಗ್ಗೆ ಸಿದ್ದರಾಮಯ್ಯ ಲೇವಡಿ ವಿಚಾರ: ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ. ತಾಲೂಕು ಕೋರ್ಟ್ ನಲ್ಲಿ ಪ್ರಾಕ್ಟಿಸ್ಟ್ ಮಾಡಿದ್ದ ಸಿದ್ದರಾಮ್ಯಗೆ ಎಕಾನಮಿ ಹೇಗೆ ಅರ್ಥ ಆಗುತ್ತೆ. ಯಾವುದೋ ಒಂದು ಲಾ ಕಾಲೇಜಿನಲ್ಲಿ ಲಾ ಓದಿದವ್ರಿಗೆ ದೇಶದ ಎಕಾನಮಿ ಅರ್ಥ ಆಗೋದು ಹೇಗೆ. ಅನ್ನ ಭಾಗ್ಯ ಕೊಟ್ಟೆ ಅನ್ನ ಭಾಗ್ಯ ಕೊಟ್ಟೆ ಅನ್ನೋ ಸಿದ್ದರಾಮಯ್ಯ ಅವ್ರ ಸ್ವಂತ ದುಡ್ಡಿನಿಂದ ಮಾಡಿದ್ರ.
13 ಬಜೆಟ್ ಬಿಡುಗಡೆ ಮಾಡಿದ್ದ ವ್ಯಕ್ತಿ ಈ ರೀತಿಯ ಅಸಂಬದ್ಧ ಹೇಳಿಕೆ ನಿಡ್ತಾರೆ. ಮೈಸೂರಿನಿಂದ ಇಂತಹ ಒಬ್ಬ ವಿಚಾರಹೀನ ವ್ಯಕ್ತಿ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು. ಇವ್ರು ನಮ್ಮೂರಿನವ್ರು ಅಂತಾ ಹೇಳಿಕೊಳ್ಳಲು ನಾಚಿಕೆಯಾಗುತ್ತದೆ. ಮಹಾರಾಜರು ದೇವರಾಜ ಮಾರುಕಟ್ಟೆಯನ್ನ ಸ್ವಂತ ದುಡ್ಡಿನಿಂದ ಮಾಡಿದ್ರ ಅಂತಾ ಪ್ರಶ್ನೆ ಮಾಡಿದ್ರು. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಸ್ವಂತ ದುಡ್ಡಿನಲ್ಲಿ ಮಾಡಿದ್ದೇನು ಅಂತ ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದ್ದಾರೆ.