ರೋಹಿಣಿ ಸಿಂಧೂರಿ ವಿರುದ್ಧ ಕಿಡಿಕಾರಿದ ಸಂಸದ ಪ್ರತಾಪ್ ಸಿಂಹ
1 min readಮೈಸೂರು: ಮೈಸೂರು ಜಿಲ್ಲೆ ಅಭಿರಾಮ್, ಶಿಖಾರಂತ ಮಾದರಿ ಅಧಿಕಾರಿಗಳನ್ನು ಕಂಡಿದೆ. ಎಲ್ಲರನ್ನು ಒಟ್ಟುಗೂಡಿಸಿಕೊಂಡು ಅವರು ಕೆಲಸ ಮಾಡಿದ್ದಾರೆ. ಆ ನಿಟ್ಟಿನಲ್ಲಿ ಈಗಿರುವ ಜಿಲ್ಲಾಡಳಿತವೂ ಕೆಲಸ ಮಾಬೇಕೆಂಬುದು ನಮ್ಮ ನಿರೀಕ್ಷೆ. ಇದರಲ್ಲಿ ವ್ಯಯಕ್ತಿಕತೆಯ ಪ್ರಶ್ನೆ ಏನು ಇಲ್ಲ ಅಂತ ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದ್ದಾರೆ.
ಮೈಸೂರಿನಲ್ಲಿ ನಗರಕ್ಕಿಂತ ಗ್ರಾಮೀಣ ಭಾಗದಲ್ಲಿ ಹೆಚ್ಚು ಸಾವಾಗುತ್ತಿದೆ. ಇಡೀ ಗ್ರಾಮೀಣ ಭಾಗದಲ್ಲಿ 350 ಬೆಡ್ ಗಳಿವೆ. ಆದರೆ ನಗರದಲ್ಲಿ 6 ಸಾವಿರಕ್ಕೂಅಧಿಕ ಬೆಡ್ ಗಳಿವೆ. ಹಳ್ಳಿಗಳಿಂದ ನಗರಕ್ಕೆ ಬಂದು ಸೇರುವವರು ಇಲ್ಲಿ ಸಾವಾಗುತ್ತಿದೆ. ಇದರಿಂದಲೇ ಗೊತ್ತಾಗುತ್ತೆ ಗ್ರಾಮಾಂತರ ಭಾಗದಲ್ಲಿ ಹೆಚ್ಚು ಜನ ಸಾವಿಗೀಡಾಗುತ್ತಿರುವುದು.
ಮೈಸೂರಿನಲ್ಲಿ ಮೂವರು ಐಎಎಸ್ ಕೇಡರ್ ಅಧಿಕಾರಿಗಳಿದ್ದಾರೆ. ಡಿಸಿ, ಪಾಲಿಕೆ ಆಯುಕ್ತೆ, ಜಿ.ಪಂ ಸಿಇಓ. ಇವರುಗಳು ಒಂದೊಂದು ಟಾಸ್ಕ್ ಫೋರ್ಸ್ ವಹಿಸಕೊಂಡು ಕೆಲಸ ಮಾಡಿದರೆ ಉತ್ತಮ. ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಕೋವಿಡ್ ಮಿತ್ರದಂತಹ ಉತ್ತಮ ಕಾರ್ಯ ಮಾಡ್ತಿದ್ದಾರೆ. ಜನಪ್ರತಿನಿಧಿಗಳು ಕೂಡಾ ಒಂದೊಂದು ಟಾಸ್ಕ್ ಫೋರ್ಸ್ ಗಳನ್ನು ವಹಿಸಿಕೊಂಡಿದ್ದಾರೆ. ಆಕ್ಸಿಜನ್, ಬೆಡ್, ಆಸ್ಪತ್ರೆ, ಔಷಧಿ ಎಲ್ಲವನ್ನೂ ನೋಡಿಕೊಳ್ಳುತ್ತಿದ್ದೇವೆ.
ಜಿಲ್ಲಾಧಿಕಾರಿಗಳು ಕೂಡಾ ಹೆಚ್ಚು ಹೊತ್ತು ಸಭೆ ನಡೆಸುವುದು ಬಿಡಲಿ. ಗ್ರಾಮೀಣ ಭಾಗಕ್ಕೆ ಹೋಗಿ ಕೆಲಸ ಮಾಡಲಿ ಎಂಬುದು ನಮ್ಮ ಅಭಿಪ್ರಾಯ ಎಂದು ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದ್ದಾರೆ.