ಹಾಸನ ಪೆನ್ ಡ್ರೈವ್ ವಿಚಾರದಲ್ಲಿ ಎಚ್.ಡಿ.ದೇವೇಗೌಡರ ತೇಜೋವಧೆ: ಒಕ್ಕಲಿಗರ ಸಂಘ ಖಂಡನೆ

1 min read

ಮೈಸೂರು: ಹಾಸನ ಪೆನ್ ಡ್ರೈವ್ ವಿಚಾರದಲ್ಲಿ ಹಲವೆಡೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ತೇಜೋವಧೆ ಮಾಡುವುದನ್ನು ಮೈಸೂರು ಹಾಗೂ ಚಾಮರಾಜನಗರ ಜಿಲ್ಲಾ ಒಕ್ಕಲಿಗರ ಸಂಘ ಖಂಡಿಸಿದೆ.

ಮೈಸೂರು ಜಿಲ್ಲಾ ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಎಂ ಈ.ಚೇತನ್ ಮಾತನಾಡಿ, ಹಾಸನದಲ್ಲಿ ಪ್ರಕರಣ ಖಂಡಿಸಿ ನಡೆದ ಮಹಿಳಾ ಸಂಘಟನೆಯಲ್ಲಿ ದೇವೇಗೌಡರ ಭಾವಚಿತ್ರವನ್ನು ಬಳಸಿ ಅವಹೇಳನಾ ಮಾಡುವುದು ಸರಿಯಲ್ಲ. ಅವರ ಹಿರಿತನಕ್ಕೆ ನಾವು ಗೌರವ ಕೊಡಬೇಕು. ಮಾಜಿ ಪ್ರಧಾನಿಗಳಾಗಿರುವ ಅವರ ಹೆಸರು ಚಿತ್ರವನ್ನು ಬಳಕೆ ಮಾಡುವುದನ್ನು ಖಂಡಿಸುತ್ತೇನೆ. ಮಾತ್ರವಲ್ಲದೆ, ಯಾವುದೇ ಪಕ್ಷದ ರಾಜಕೀಯ ನಾಯಕರು ಈ ಪ್ರಕರಣದ ಬಗ್ಗೆ ಮಾತನಾಡುವಾಗ ದೇವೇಗೌಡರ ಹೆಸರು ಮುನ್ನಲೆಗೆ ತರುವುದು ಖಂಡನೀಯ. ಮುಂದೆ ಅಂತಹ ಹೇಳಿಕೆ ವ್ಯಕ್ತವಾದರೆ ವ್ಯಕ್ತ ಪಡಿಸಿದ ನಾಯಕರ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಹೇಳಿದರು.

ಮೈಸೂರು ಜಿಲ್ಲಾ ಒಕ್ಕಲಿಗರ ಸಂಘದ ಎ.ರವಿ ಮಾತನಾಡಿ ಈ ಮೂಲಕ ಮುಂದಿನ ಹೋರಾಟದಲ್ಲಿ ಯಾರು ಸಹ ದೇವೇಗೌಡರ ಹೆಸರು ಹಾಗೂ ಭಾವಚಿತ್ರ ಬಳಸದಂತೆ ಮನವಿ ಮಾಡುತ್ತೇವೆ.‌ ಇದಾಗಿಯೂ ಅವರ ಅವಹೇಳನ ಮುಂದುವರೆಯುವುದು ಗಮನಕ್ಕೆ ಬಂದರೆ ಅಂತಹವರ ವಿರುದ್ಧ ಹೋರಾಟ ಮಾಡುವುದಾಗಿ ಹೇಳಿದರು.

ಮಾತ್ರವಲ್ಲದೆ, ಸಾಮಾಜಿಕ ಜಾಲತಾಣದಲ್ಲಿಯೂ ಸಹ ದೇವೇಗೌಡರ ಹೆಸರು ಹಾಗೂ ಚಿತ್ರವನ್ನು ಬಳಸಿ ಅವಹೇಳನ ಪೋಸ್ಟರ್ ಭಿತ್ತರಿಸುವವರ ವಿರುದ್ಧವು ದೂರು ನೀಡುವ ಎಚ್ಚರಿಕೆ ನೀಡಿದರು.

ಈ ಕುರಿತು ಮಾತನಾಡಿದ ಮೈಸೂರು ಜಿಲ್ಲಾ ಒಕ್ಕಲಿಗರ ಸಂಘದ ನಿರ್ದೇಶಕ ಗಿರೀಶ್ ಗೌಡ ಮಾತನಾಡಿ, ಹಾಸನದಲ್ಲಿ ನಡೆದಿದೆ ಎನ್ನಲಾದ ಪೆನಡ್ರೈವ್ ಪ್ರಕರಣದಲ್ಲಿ ಯಾರೇ ತಪ್ಪು ಮಾಡಿದ್ದರೂ ತಪ್ಪೇ. ಈ ಬಗ್ಗೆ ಕಾನೂನು ಚೌಕಟ್ಟಿನಲ್ಲಿ ಶಿಕ್ಷೆ ಆಗಲಿದೆ. ಈ ಪ್ರಕರಣದಲ್ಲಿ ಹಿರಿಯ ಮಾಜಿ ಪ್ರಧಾನಿಗಳ ಹೆಸರು ತರುವುದು ಸರಿಯಲ್ಲ ಎಂದರು.

ಮೈಸೂರು ಜಿಲ್ಲಾ ಒಕ್ಕಲಿಗರ ಸಂಘದ ನಿರ್ದೇಶಕ ಗುರುರಾಜ್ ಮಾತನಾಡಿ, ನಾವಿಲ್ಲಿ ಪ್ರಜ್ವಲ್ ರೇವಣ್ಣ ಪರ ಅಥವಾ ವಿರೋಧ ಮಾತನಾಡಲು ಬಂದಿಲ್ಲ. ಆ ಬಗ್ಗೆ ರಾಜಕೀಯ ನಾಯಕರ ಹೇಳಿಕೆ ಕುರಿತು ಮಾತನಾಡಲ್ಲ. ಆದರೆ, ದೇವೇಗೌಡರ ಹೆಸರು, ಚಿತ್ರ ತರಬೇಡಿ ಎಂಬುದು ನಮ್ಮ ಒತ್ತಾಯವಾಗಿದೆ ಎಂದು ಹೇಳಿದರು.

ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಎಂ.ಬಿ.ಮಂಜೇಗೌಡ ಇನ್ನಿತರರು ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *