ಪೊಲೀಸರು ಹೊಣೆಗಾರಿಕೆಯನ್ನು ನಿಭಾಯಿಸುವುದರ ಜೊತೆಗೆ ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಬೇಕು: ಗೃಹ ಸಚಿವ ಅರಗ ಜ್ಞಾನೇಂದ್ರ
1 min readಮೈಸೂರು,ಫೆ.2-ದೇಶದ ಆಂತರಿಕ ಭದ್ರತೆ ನಿಭಾಯಿಸುವುದು ಪೊಲೀಸ್. ಪೊಲೀಸರ ಹೊಣೆಗಾರಿಕೆ ಬಹಳ ಹೆಚ್ಚಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ.
ಮೈಸೂರಿನ ಪೊಲೀಸ್ ತರಬೇತಿ ಸಂಸ್ಥೆಯಲ್ಲಿ ಪಿಎಸ್ ಐ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಿಲಿಟರಿ ಅವರಿಗೆ ಎದುರು ಶತೃ ಕಾಣುತ್ತಾನೆ. ಶತೃ ಕಂಡರೆ ಕೊಲ್ಲುತ್ತಾರೆ. ಪೊಲೀಸ್ ರ ಬಗ್ಗೆ ಕ್ರಿಮಿನಲ್ಸ್ ಭಯ ಇರಬೇಕು. ನಾಗರೀಕರಿಗೆ ಪೊಲೀಸ್ ಕಂಡರೆ ಭಯ ಇರಬಾರದು. ನಾಗರೀಕರಿಗೆ ಪೊಲೀಸರು ಇದ್ದಾರೆ ಎಂಬ ನೆಮ್ಮದಿ ಇರಬೇಕು.ಪೊಲೀಸ್ ಠಾಣೆ ಮಾರ್ಯಾದೆ ಉಳ್ಳವರು ಹೋಗುವ ಜಾಗವಲ್ಲ ಎಂಬ ಮಾತಿದೆ. ಜನರಲ್ಲಿ ಈ ಭಾವನೆ ತೊಲಗಿಸಿ ಪೊಲೀಸರು ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಬೇಕು ಎಂದರು.
ರಾಜ್ಯದಲ್ಲಿ 100 ಪೊಲೀಸ್ ಠಾಣೆ ಕಟ್ಟುತ್ತಿದ್ದೇವೆ. 11 ಸಾವಿರ ಕೋಟಿ ರೂ. ವೆಚ್ಚದಲ್ಲಿ ಪೊಲೀಸ್ ವಸತಿ ನಿಲಯ ಕಟ್ಟಿಸುತ್ತಿದ್ದೇವೆ ಎಂದ ಅವರು, ಕೆಲವೇ ಕೆಲವು ಪೊಲೀಸರು ಮಾಡುವ ತಪ್ಪಿನಿಂದ ಕೆಲವೊಮ್ಮೆ ಇಲಾಖೆಗೆ ಕೆಟ್ಟ ಹೆಸರು ಬರುತ್ತದೆ. ಕ್ರಿಮಿನಲ್ಸ್ ಜೊತೆ ಯಾವ ಕ್ಷಣದಲ್ಲೂ ಪೊಲೀಸರು ಕೈ ಜೋಡಿಸಬಾರದು ಎಂದು ಹೇಳಿದರು.