ಮಲೆಮಹದೇಶ್ವರ ವನ್ಯಜೀವಿ ವ್ಯಾಪ್ತಿಯಲ್ಲಿ 6 ಟನ್ ಪ್ಲಾಸ್ಟಿಕ್ ಸಂಗ್ರಹ!
1 min readಚಾಮರಾಜನಗರ : ಮಲೆಮಹಾದೇಶ್ವರ ವನ್ಯಜೀವಿ ಅಭಯಾರಣ್ಯದಲ್ಲಿ ಸ್ವಚ್ಚತೆ ಕಾರ್ಯ ಯಶಸ್ವಿಯಾಗಿ ಮಾಡಿದ್ದು, ಬರೋಬ್ಬರಿ 6 ಟನ್ ಪ್ಲಾಸ್ಟಿಕ್ ಸಂಗ್ರಹ ಮಾಡಲಾಗಿದೆ. ಈ ಮೂಲಕ ಅರಣ್ಯ ವ್ಯಾಪ್ತಿಯಲ್ಲಿ ಪ್ರಾಕೃತಿಕ ಸೌಂದರ್ಯದ ಹಾಗೂ ಪರಿಸರ ಉಳಿಸುವ ಕೆಲಸ ಆಗಿದೆ.
ಹೌದು, 16 ಸಂಸ್ಥೆಗಳು, 350 ಸ್ವಯಂ ಸೇವಕರು, ಗ್ರಾಮಸ್ಥರ ಭಾಗವಹಿಸುವಿಕೆಯಿಂದ ದೊಡ್ಡ ಮಟ್ಟದ ಪ್ಲಾಸ್ಟಿಕ್ ಸಂಗ್ರಹ ಮಾಡಲಾಗಿದೆ. ಇದಕ್ಕಾಗಿ ಮಲೆ ಮಹಾದೇಶ್ವರ ವನ್ಯಜೀವಿ ಅಭಯಾರಣ್ಯ ಗುರ್ತಿಸಿ 14 ಟ್ರಕ್ ಲೋಡ್‌ನ 6 ಟನ್ ಪ್ಲಾಸ್ಟಿಕ್ ಸಂಗ್ರಹಿಸಲಾಗಿದೆ. ಈ ಮೂಲಕ ಕಾಡಿನ ಸ್ವಚ್ಛತೆ ಹಾಗೂ ಪರಿಸರ ಕಾಪಾಡಲು ಅರಣ್ಯ ಇಲಾಖೆ ದಿಟ್ಟ ಹೆಜ್ಜೆ ಇಟ್ಟಿದೆ.