ಯುವತಿಗೆ ಲೈನ್ ಹೊಡೆದಿದ್ದಕ್ಕೆ ಯುವಕನಿಗೆ ಮಾರಣಾಂತಿಕ ಹಲ್ಲೆ: ಹಲ್ಲೆ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆ
1 min readಪಿರಿಯಾಪಟ್ಟಣ: ಯುವತಿಗೆ ಲೈನ್ ಹೊಡೆದಿದ್ದಕ್ಕೆ ಯುವಕನಿಗೆ ಮಾರಣಾಂತಿಕ ಹಲ್ಲೆ ನಡೆಸಿರುವ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಪಿರಿಯಾಪಟ್ಟಣದ ಪಂಚವಳ್ಳಿ ಸರ್ಕಲ್ ನಲ್ಲಿ ಘಟನೆ ನಡೆದಿದೆ. ಉತ್ತೇನಹಳ್ಳಿ ನಿವಾಸಿ ರಾಜು (25) ಹಲ್ಲೆಗೊಳಗಾದ ಯುವಕ. ಪೆಟ್ರೋಲ್ ಹಾಕಿಸಿಕೊಳ್ಳಲು ಬಂಕ್ ಗೆ ಬಂದ ವೇಳೆ ಯುವತಿ ಸಂಬಂಧಿಕರು ಹಲ್ಲೆ ನಡೆಸಿದ್ದಾರೆ.
ರಾಜು ಉತ್ತೇನಹಳ್ಳಿ ಮೆಣಸಿನಕಾಯಿ ವ್ಯಾಪಾರಿ ಬಳಿ ಕೂಲಿ ಕೆಲಸ ಮಾಡುತ್ತಿದ್ದ. ಹಲ್ಲೆ ಆರೋಪಿ ಕಿರಣ್ ಮಳಿಗೆ ಬಾಡಿಗೆ ಪಡೆದಿದ್ದ ವ್ಯಾಪಾರಿ. ಮೆಣಸಿಕಾಯಿ ತುಂಬಲು ಆಗಾಗ್ಗೆ ಮಳಿಗೆಗೆ ಬರುತ್ತಿದ್ದ ರಾಜು. ಈ ವೇಳೆ ಕಿರಣ್ ಅತ್ತೆ ಮಗಳ ಮೇಲೆ ಕಣ್ಣು ಹಾಕಿದ್ದ ಆರೋಪ. ಇದಕ್ಕೂ ಮೊದಲು ವಾರ್ನ್ ಮಾಡಿದ್ದ ಕಿರಣ್. ನಿನ್ನೆ ಪೆಟ್ರೋಲ್ ಹಾಕಿಸಿಕೊಳ್ಳಲು ಬಂದಿದ್ದ ವೇಳೆ ಕಿರಣ್, ಪುನೀತ್, ಪ್ರಕಾಶ್, ನವೀನ್ ಎಂಬುವವರಿಂದ ಹಲ್ಲೆ.
ಗಾಯಗೊಳಗಾದ ರಾಜುಗೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪಿರಿಯಾಪಟ್ಟಣ ಠಾಣೆ ಪೊಲೀಸರು ಆರೋಪಿಗಳನ್ನ ವಶಕ್ಕೆ ಪಡೆದಿದ್ದಾರೆ.