ಸಂದೇಶ್ ದಿ ಪ್ರಿನ್ಸ್ ಹೊಟೆಲ್‌ಗೆ ಪೊಲೀಸರ ಭೇಟಿ: ಸಿಬ್ಬಂದಿ ಗಂಗಾಧರ್ ಹೇಳಿಕೆ ದಾಖಲು ಮಾಡಿಕೊಳ್ಳುತ್ತಿರುವ ಪೊಲೀಸರು
1 min readಮೈಸೂರು: ಹೊಟೆಲ್ ಸಿಬ್ಬಂದಿ ಮೇಲೆ ನಟ ದರ್ಶನ್ ಹಲ್ಲೆ ಆರೋಪ ಕೇಳಿಬಂದ ಹಿನ್ನಲೆ ಎಸಿಪಿ ನೇತೃತ್ವದಲ್ಲಿ ಸಂದೇಶ್ ದಿ ಪ್ರಿನ್ಸ್ ಹೊಟೆಲ್‌ಗೆ ಪೊಲೀಸರ ಭೇಟಿ ನೀಡಿದ್ದು ತಪಾಸಣೆ ಮಾಡುತ್ತಿದ್ದಾರೆ.
ನಟ ದರ್ಶನ್ ಅವರು ‘ಸಂದೇಶ್ ದಿ ಪ್ರಿನ್ಸ್’ ಹೊಟೆಲ್ ಕಾರ್ಮಿಕನ ಮೇಲೆ ಹಲ್ಲೆ ಮಾಡಿದ್ದರು ಎಂದು ಆರೋಪಿಸಿ ಈ ಬಗ್ಗೆ ತನಿಖೆ ನಡೆಸಬೇಕೆಂದು ನೆನ್ನೆ ಇಂದ್ರಜಿತ್ ಲಂಕೇಶ್ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಬಳಿ ದೂರು ಕೊಟ್ಟಿದ್ದರು, ಇದರ ಬೆನ್ನಲ್ಲೇ ತನಿಖೆ ನಡೆಸುವಂತೆ ಗೃಹ ಸಚಿವರು ಆದೇಶಿಸಿದ್ದರು. ಹೀಗಾಗಿ ಗಲಾಟೆ ಆಗಿದ್ದರ ಬಗ್ಗೆ ಹೋಟೆಲ್ ಮಾಲೀಕ ಸಂದೇಶ ರಿಂದ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಶಶಿಧರ್- ದೇವರಾಜ ವಿಭಾಗದ ಎಸಿಪಿ. ಇನ್ಸ್ಪೆಕ್ಟರ್ ಶ್ರೀಕಾಂತ್ ಉಪಸ್ಥಿತರಿದ್ದಾರೆ.
ಎಸಿಪಿ ಶಶಿಧರ್ ಅವರು ಹೋಟೆಲ್ ನಲ್ಲಿ ಸಿಸಿಟಿವಿ ಪುಟೇಜ್ ಪರಿಶೀಲನೆ ನಡೆಸುತ್ತಿದ್ದಾರೆ. ಸಿಸಿಟಿವಿ ಪುಟೇಜ್, ಹೋಟೆಲ್ ಸಿಬ್ಬಂದಿಯಿಂದ ಮಾಹಿತಿ ಪಡೆಯುತ್ತಿರುವ ಪೊಲೀಸರು. ಈಗಾಗಲೇ ಸಿಸಿಟಿವಿ ಪುಟೇಜ್ ಡಿಲಿಟ್ ಆಗಿದೆ ಎಂದಿರುವ ಹೋಟೆಲ್ ಮಾಲೀಕ ಸಂದೇಶ್. ನಜರ್‌ಬಾದ್ ಪೊಲೀಸ್ ಠಾಣಾ ವ್ಯಾಪ್ತಿಯ ಸಂದೇಶ್ ದಿ ಪ್ರಿನ್ಸ್ ಹೋಟೆಲ್ ಇದೆ. ಇನ್ನು ಹಲ್ಲೆಗೊಳಗಾಗಿದ್ದಾರೆ ಎನ್ನಲಾದ ಸಿಬ್ಬಂದಿ ಗಂಗಾಧರ್ ಹೇಳಿಕೆ ದಾಖಲು ಮಾಡಿಕೊಳ್ಳುತ್ತಿದ್ದಾರೆ.