ಗಂಡು ಮಗುವಿಗೆ ಜನ್ಮ ನೀಡಿದ ಅಂಗಾಂಗ ಕಸಿಗೆ ಒಳಗಾಗಿದ್ದ ಮಹಿಳೆ
1 min read
ಮೈಸೂರು: ಅಂಗಾಂಗ ಕಸಿಗೆ ಒಳಗಾಗಿದ್ದ ಮಹಿಳೆಯೊಬ್ಬರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ದೇಶದಲ್ಲೆ ಮೊಟ್ಟ ಮೊದಲ ಪ್ರಕರಣಕ್ಕೆ ಮೈಸೂರಿನ ಅಪೊಲೋ ಆಸ್ಪತ್ರೆ ವೈದ್ಯರ ಯಶಸ್ವಿ ಅಂಗಾಂಗ ಕಸಿ ಕಾರ್ಯ ಸಾಕ್ಷಿಗಿದೆ.
ಬಾಲ್ಯದಿಂದಲೇ ಮಧುಮೇಹಕ್ಕೆ ಒಳಗಾಗಿದ್ದ 35 ವರ್ಷದ ಮಹಿಳೆಗ ಕಳೆದ ಮೂರು ವರ್ಷಗಳ ಹಿಂದೆ ಏಕಕಾಲಕ್ಕೆ ಮೇದೋಜಿರಕ ಗ್ರಂಥಿ, ಮೂತ್ರಪಿಂಡಗಳನ್ನ ಕಸಿ ಮಾಡಲಾಗಿತ್ತು. ಕಸಿಯ ಬಳಿಕ ಆರೋಗ್ಯದಲ್ಲಿ ಚೇತರಿಕೆಯಾಗಿ, ಗರ್ಭವತಿಯಾಗಿದ್ದರು.

ಇಡೀ ದೇಶದಲ್ಲೇ ಇದು ಮೊದಲ ಪ್ರಕರಣ ಎನ್ನುತ್ತಾರೆ ಮೈಸೂರಿನ ಅಪೊಲೋ ಆಸ್ಪತ್ರೆ ವೈದ್ಯರು. ಕಸಿ ಶಸ್ತ್ರಚಿಕಿತ್ಸಕ ಕನ್ಸಲ್ಟೆಂಟ್ ಡಾ.ಸುರೇಶ್ ರಾಘವಯ್ಯ, ಸ್ತ್ರೀ ರೋಗ ತಜ್ಞೆ ಡಾ.ಬಿ.ಪಿ.ಅಂಜಲಿ, ಅರವಳಿಕೆ ತಜ್ಞೆ ಡಾ.ಅಂದಿತಾ ಮುಖರ್ಜಿ ತಂಡದಿಂದ ಯಶಸ್ವಿ ಶಸ್ತ್ರ ಚಿಕಿತ್ಸೆ ಕಾರ್ಯ ನಡೆದಿದೆ.
