ಇವರು ನಿಜವಾದ ಡಿಸಿ ಅಂದ್ರೆ’ ಮೆಚ್ಚಲೇ ಬೇಕು ಇವರ ಕಾರ್ಯಕ್ಕೆ
1 min read
ಮೈಸೂರು: ಮೈಸೂರಿನ ನೂತನ ಜಿಲ್ಲಾಧಿಕಾರಿ ಬಗಾದಿ ಗೌತಮ್ ನಿನ್ನೆ ನಂಜನಗೂಡಿಗೆ ಭೇಟಿ ಕೊಟ್ಟಿದ್ದರು. ದೇಗುಲ ಪ್ರವೇಶಕ್ಕೆ ಅವಕಾಶ ಇದ್ದರು ಅದನ್ನ ದುರುಪಯೋಗ ಮಾಡಿಕೊಂಡಿಲ್ಲ ಡಿಸಿಯವರು.
ಹೌದು. ಡಿಸಿ ಬಗಾದಿ ಗೌತಮ್ ಅವರು ದೇಗುಲದ ಒಳಗೆ ಹೋಗದೆ ಹೊರಗೆ ನಿಂತು ನಂಜುಂಡೇಶ್ವರನಿಗೆ ನಮಿಸಿದ ಬಮದಿದ್ದಾರೆ. ಡಿಸಿ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಡಿಸಿ ವಿಡಿಯೋ ವೈರಲ್ ಆಗಿದೆ. ಡಿಸಿ ಅವರಿಂದ ಅನೇಕರು ಬುದ್ಧಿ ಕಲಿಯಬೇಕಿದೆ. ಡಿಸಿಯಾಗಿ ದೇಗುಲದೊಳಗೆ ಹೋಗುವ ಅಧಿಕಾರ ಇತ್ತು. ಆದರು ಅದನ್ನ ದುರುಪಯೋಗ ಮಾಡಿಕೊಳ್ಳದೆ ಇತರರಿಗೆ ಮಾದರಿಯಾಗಿದ್ದಾರೆ ಅಂತ ಡಿಸಿ ಕಾರ್ಯಕ್ಕೆ ಸಾಕಷ್ಟು ಜನ ಮೆಚ್ಚುಗೆ ಸೂಚಿಸಿದ್ದಾರೆ.
